Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಟಿಕೆಟ್ ಟು ಫಿನಾಲೆ ಟಾಸ್ಕ್ ನಲ್ಲಿ ದೋಸ್ತಿಗಳ ನಡುವೆ ಬಿರುಕು : ವರ್ತೂರು ವರ್ತನೆಗೆ ತುಕಾಲಿ ಶಾಕ್

Facebook
Twitter
Telegram
WhatsApp

ಬಿಗ್ ಬಾಸ್ ಸೀಸನ್ 10 ಕೆಲವೇ ಕೆಲವು ದಿನಗಳಲ್ಲಿ ಫಿನಾಲೆ ತಲುಪಲಿದೆ. ಮನೆಯಲ್ಲಿರುವ ಎಲ್ಲರಿಗೂ ಫಿನಾಲೆಗೆ ಹೋಗಲೇಬೇಕೆಂಬ ಆಸೆ ಇದ್ದೆ ಇದೆ. ಆದರೆ ಅದಕ್ಕೆ ಅಂತ ಸಾಕಷ್ಟು ಶ್ರಮ ಹಾಕಲೇಬೇಕಾಗಿದೆ. ಈಗ ಟಿಕೆಟ್ ಟು ಫೈನಲ್ ಟಾಸ್ಕ್ ಶುರುವಾಗಿದೆ. ಈ ಟಾಸ್ಕ್ ನಲ್ಲಿ ದೋಸ್ತಿಗಳ ನಡುವೆಯೇ ಬಿರುಕು ಬಿಡುವ ಸಾಧ್ಯತೆ ಕಾಣುತ್ತಿದೆ.

ಸದಾ ಜೊತೆ ಜೊತೆಯಾಗಿಯೇ ಕಾಣಿಸಿಕೊಳ್ಳುವವರು, ಗಾಸಿಪ್ ನಲ್ಲೂ ಜೊತೆ, ಬೆಂಬಲ ನೀಡುವಾಗಲೂ ಜೊತೆಗೆ ಇದ್ದವರು ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಜೊತೆಯಾಗಿಯೇ ಇರುತ್ತಾರೆ. ಆದರೆ ಸಂತು-ಪಂತು ನಡುವೆ ಈಗ ಅದೇಕೋ ಬಿರುಕು ಬಿಡುವಂತೆ ಕಾಣಿಸುತ್ತಿದೆ. ಆ ಒಂದು ಟಾಸ್ಕ್ ನಿಂದಾಗಿ. ಟಿಕೆಟ್ ಟು ಫಿನಾಲೆಯಲ್ಲಿ 100 ಅಂಕಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ ವರ್ತೂರು ಸಂತೋಷ್. ಹೀಗಾಗಿ ಬಿಗ್ ಬಾಸ್ ಒಂದು ಅಧಿಕಾರ ನೀಡಿದೆ.

ಮುಂದಿನ ಆಟದಲ್ಲಿ ಒಬ್ಬರನ್ನು ಆಚೆ ಇಡಬಹುದು ಎಂದು ಹೇಳಿದಾಗ ವರ್ತೂರು ಸಂತೋಷ್, ತುಕಾಲಿ ಅವರನ್ನೇ ಹೊರಗೆ ಇಟ್ಟಿದ್ದಾರೆ. ಇದು ತುಕಾಲಿಗೆ ಶಾಕಿಂಗ್ ಆಗಿ ಕಾಡಿದೆ. ‘ಈ ರೀತಿ ಆದರೆ ಫ್ರೆಂಡ್ಶಿಪ್ ಗೆ ಎಲ್ಲಿದೆ ಬೆಲೆ. ದೇವರಾಣೆ ನೀನು ಈ ರೀತೊ ಮಾಡುತ್ತೀಯಾ ಅಂತ ಅಂದುಕೊಂಡಿರಲಿಲ್ಲ’ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಬಳಿಕ ಫ್ರೆಂಡ್ಶಿಪ್ ಸರಿ ಮಾಡಿಕೊಳ್ಳುವುದಕ್ಕೆ ಹೋದರೂ, ವರ್ತೂರು ಮಾತನಾಡುವುದಕ್ಕೆ ಇಷ್ಟ ಪಡುತ್ತಿಲ್ಲ. ನೀನು ನೀನಾಗಿರು, ನಾನು ನಾನಾಗಿ ಇರುತ್ತೀನಿ ಅಂತ ಹೇಳಿ ಎದ್ದು ಹೋಗಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅನ್ನ ಮಾಡುವಾಗ ಅಕ್ಕಿಯನ್ನು ಎಷ್ಟು ಬಾರಿ ತೊಳೆಯಬೇಕು ಗೊತ್ತಾ ?

ಸುದ್ದಿಒನ್ : ನಾವು ದಿನಕ್ಕೆ ಎರಡರಿಂದ ಮೂರು ಬಾರಿ ತಿನ್ನುವ ಪ್ರಮುಖ ಆಹಾರವೆಂದರೆ ಅಕ್ಕಿ. ದೇಶದ ಹೆಚ್ಚಿನ ಭಾಗಗಳಲ್ಲಿ, ಜನರು ಅನ್ನವನ್ನು ತಿನ್ನುತ್ತಾರೆ. ಕೆಲವು ರಾಜ್ಯಗಳಲ್ಲಿ ಅಕ್ಕಿ ಪ್ರಧಾನ ಆಹಾರವಾಗಿದೆ. ಬ್ರೌನ್ ರೈಸ್ ಮತ್ತು

ಈ ರಾಶಿಯವರ ಮದುವೆ ಯಾವಾಗ ಆಗುತ್ತೆ? ಎಂಬ ಚಿಂತೆಯಲ್ಲಿ ವಯಸ್ಸು ಮೀರುತಿದೆ.

ಈ ರಾಶಿಯವರ ಮದುವೆ ಯಾವಾಗ ಆಗುತ್ತೆ? ಎಂಬ ಚಿಂತೆಯಲ್ಲಿ ವಯಸ್ಸು ಮೀರುತಿದೆ. ಈ ರಾಶಿಯವರು ತುಂಬಾ ದಿವಸದಿಂದ ಪ್ರೀತಿಸುತ್ತಿದ್ದಾರೆ ಆದರೆ ಇವರ ಜೊತೆ ಮದುವೆ ಆಗುತ್ತೋ ಇಲ್ವೋ ಎಂಬ ಅನುಮಾನ, ಭಾನುವಾರ- ರಾಶಿ ಭವಿಷ್ಯ

ಪ್ರಜ್ವಲ್ ವಿಡಿಯೋ ಕೇಸ್ : ದೇಹದ ಆರೋಗ್ಯ ಮಾತ್ರವಲ್ಲ ಸಮಾಜದ ಆರೋಗ್ಯವನ್ನು ಸುಧಾರಿಸಬೇಕು ಡಾ. ಮಂಜುನಾಥ್

ರಾಮನಗರ: ರಾಜ್ಯದಲ್ಲಷ್ಟೇ ಅಲ್ಲ ದೇಶದಲ್ಲೂ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡುತ್ತಿದೆ. ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ತನಿಖೆಗೆ ಕಾಯುತ್ತಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಬರುವ ಸಾಹಸ ಮಾಡುತ್ತಿಲ್ಲ.

error: Content is protected !!