Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿಗ್ ಬಾಸ್ ಮನೆಯಿಂದ ಇಂದು ಹೊರ ಬರುವುದು ಇವರೆ ನೋಡಿ

---Advertisement---

ಬಿಗ್ ಬಾಸ್ ಕನ್ನಡ ಸೀಸನ್ 10 ಶೋಗೆ ಇನ್ನು ಕೆಲವೇ ದಿನಗಳಲ್ಲಿ ತೆರೆ ಬೀಳಲಿದೆ. ಇಷ್ಟು‌ ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇಂದು ಮತ್ತೊಬ್ಬರಿಗೆ ಜರ್ನಿ ಮುಗಿಯುತ್ತಿದೆ. ಎಲ್ಲರು ಉತ್ತಮ ಸ್ಪರ್ಧೆ ನೀಡುತ್ತಿದ್ದಾರೆ. ಹೀಗಾಗಿ ಮನೆಯಿಂದ ಯಾರೂ ಹೊರ ಹೋಗಬಹುದು ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಈವಾರ ಡಬಲ್ ಎಲಿಮಿನೇಷನ್ ಅಂತ ಕೂಡ ಹೇಳಲಾಗುತ್ತಿದೆ.

ಕಳೆದ ವಾರ ಕಿಚ್ಚನ ಪಂಚಾಯ್ತಿ ನಡೆದಿರಲಿಲ್ಲ. ಬದಲಿಗೆ ಶೃತಿ ಅವರು ಮನೆಯನ್ನು ಸರಿಯಾಗಿ ನಿಭಾಯಿಸಿದ್ದರು. ಎಲಿಮಿನೇಷನ್ ಕೂಡ ಆಗಿದ್ದರು. ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಬಂದಿದ್ದ ಇಬ್ಬರು ಔಟ್ ಆಗಿದ್ದರು. ಈ ವಾರ ಕುಚ್ಚ ಸುದೀಪ್ ಪಂಚಾಯ್ತಿ ನಡೆಯಲಿದೆ. ಈ ಪಂಚಾಯ್ತಿಯಲ್ಲಿ ಒಬ್ಬರು ಮನೆಯಿಂದ ಹೊರಗೆ ಬರಲಿದ್ದಾರೆ.

ಈ ವಾರ ನಾಮಿನೇಷನ್ ಲೀಸ್ಟ್ ನಲ್ಲಿ ಪ್ರತಾಪ್ ಸಿಂಹ ಹಾಗೂ ನಮ್ರತಾ ಬಚಾವ್ ಆಗಿದ್ದಾರೆ. ಉಳಿದಂತೆ ಸಂಗೀತಾ, ತನಿಷಾ, ಸಿರಿ, ತುಕಾಲಿ ಸಂತೂ, ವರ್ತೂರ್ ಸಂತೋಷ್, ಕಾರ್ತಿಕ್, ವಿನಯ್, ಮೈಕಲ್ ನಾಮಿನೇಷನ್ ಸಾಲಿನಲ್ಲಿ ನಿಂತಿದ್ದಾರೆ. ಇಷ್ಟು ಜನರಲ್ಲಿ ಇಂದು ಒಬ್ಬರ ಬಿಗ್ ಬಾಸ್ ಜರ್ನಿ ಮುಕ್ತಾಯವಾಗಲಿದೆ. ಅದರಲ್ಲಿ ಸಿರಿ ಅವರು ಮನೆಯಿಂದ ಹೊರಗೆ ಬರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮನೆಯೊಳಗೆ ಇರುವವರಲ್ಲಿ ಸಿರಿ ಗ್ರಾಫ್ ಕೊಂಚ ಕಡಿಮೆ ಇದೆ. ಮನೆಯವರೆಲ್ಲ ಹೆಚ್ಚು ಸಿರಿ ಅವರ ಹೆಸರನ್ನೇ ತೆಗೆದುಕೊಳ್ಳುತ್ತಾರೆ. ಹೀಗಾಗಿ ಅವರೇ ಹೊರಗೆ ಬರಬಹುದು ಎನ್ನಲಾಗುತ್ತಿದೆ. ಆದರೆ ಸಿರಿ ಅವರು ಆರಂಭಕ್ಕೆ ಹೋಲಿಕೆ ಮಾಡಿದರೆ ಇತ್ತಿಚೆಗೆ ಅದ್ಭುತವಾಗಿ ಆಡುತ್ತಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment