ಸಮಯ ಬಂದಾಗ ಶಾಸಕರು, ಮಾಜಿ ಶಾಸಕರನ್ನು ವಿದೇಶಕ್ಕೆ ಕರೆದುಕೊಂಡು ಹೋಗ್ತೀನಿ : ಸಚಿವ ಸತೀಶ್ ಜಾರಕಿಹೊಳಿ

suddionenews
1 Min Read

ಬೆಳಗಾವಿ: ಸತೀಶ್ ಜಾರಕಿಹೊಳಿ ಕೊಂಚ ಅಸಮಾಧಾನಗೊಂಡಿದ್ದಾರೆ ಅನ್ನೋದು ಈಗ ಗುಟ್ಟಾಗಿ ಉಳಿದಿಲ್ಲ. ಶಾಸಕರನ್ನೆಲ್ಲ ಕರೆದುಕೊಂಡು ವಿದೇಶಕ್ಕೆ ಹೊರಟಿದ್ದನ್ನು ತಡೆ ಹಿಡಿಯಲಾಗಿದೆ. ಇದೀಗ ಆ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದ್ದು, ಸಮಯ ಬಂದಾಗ ಶಾಸಕರು ಮತ್ತು ಮಾಜಿ ಶಾಸಕರನ್ನು ವಿದೇಶಕ್ಕೆ ಕರೆದುಕೊಂಡು ಹೋಗೋಣಾ. ಮುಂದೊಂದು ದಿನ ಆ ಸಮಯ ಬರಲಿದೆ. ಈಗ ನಾನು ಖಾಸಗಿಯಾಗಿ ಪ್ರವಾಸಕ್ಕೆ ಹೋಗಿದ್ದೆ‌ ಎಂದು ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.

ಇದೆ ವೇಳೆ ಕಾಂತರಾಜು ಜಾತಿಗಣತಿ ವರದಿ ಬಗ್ಗೆ ಮತನಾಡಿ, ಈ ವರದಿ ನೀಡಲೂ ಇನ್ನೂ ಎರಡು ತಿಂಗಳು ಸಮಯವಕಾಶ ಕೇಳಿದ್ದಾರೆ. ವರದಿ ಬಂದ ಬಳಿಕ ನೋಡೋಣಾ. ರಾಜ್ಯ ಸರ್ಕಾರ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಈ ಬಗ್ಗೆ ಚರ್ಚೆ ಮಾಡುತ್ತಾರೆ ಎಂದಿದ್ದಾರೆ. ಆಯೋಗದವರು ನಮಗೆ ಇನ್ನು ವರದಿಯನ್ನೇ ನೀಡಿಲ್ಲ. ವರದಿ ನೀಡಿದ ಬಳಿಕ ಅದರ ಬಗ್ಗೆ ಚರ್ಚೆಯಾಗಬೇಕು‌. ಅದಕ್ಕೆ ಅಂತ ಸುಧೀರ್ಘ ಪ್ರಕ್ರಿಯೆ ಬಾಕಿ ಇದೆ ಎಂದಿದ್ದಾರೆ.

 

ಇನ್ನು ಕೃಷಿ ಇಲಾಖೆ ಹಾಗೂ ರೇಷ್ಮೆ ಇಲಾಖೆಯ ವಿಲೀನದ ಬಗ್ಗೆ ಮಾತನಾಡಿ, ಕೆಲವು ಇಲಾಖೆಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ಈ ಇಲಾಖೆಗಳನ್ನು ವಿಲೀನಗೊಳಿಸುವ ಬಗ್ಗೆ 10 ವರ್ಷಗಳ ಹಿಂದೆಯೇ ವರದಿ ಕೊಟ್ಟಿದ್ದಾರೆ. ಈ ರೀತಿ ಹಿಂದಿನ ಸರ್ಕಾರದಲ್ಲೂ ವಿಲೀನ ಪ್ರಕ್ರಿಯೆ ನಡೆದಿದೆ. ಗ್ಯಾರಂಟಿ ಯೋಜನೆಗಳಿಗೂ, ಈ ರೀತಿಯ ವಿಲೀನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *