ಸುದ್ದಿಒನ್, ಚಿತ್ರದುರ್ಗ. ನ.24 : ವಿದ್ಯಾರ್ಥಿಗಳು ಓದಿನ ಜತೆಗೆ ಪಠ್ಯೇತರ ಅಂದರೆ ಕಲೆ,ಕ್ರೀಡೆ, ನೈತಿಕ ಶಿಕ್ಷಣ ಪಡೆಯುವ ಮೂಲಕ ಬೌದ್ಧಿಕ ಮತ್ತು ಭೌತಿಕ ಸಮತೋಲನ ಕಾಯ್ದುಕೊಳ್ಳುವತ್ತ ಗಮನ ಹರಿಸಿದರೆ ಜೀವನದಲ್ಲಿ ಯಶಸ್ಸು ಕಾಣಬಹುದು ಎಂದು ದಾವಣಗೆರೆ ವಿರಕ್ತಮಠದ ,ಹಾಗೂ ಚಿತ್ರದುರ್ಗ ಮುರುಘಾಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಅವರು ಸಲಹೆ ನೀಡಿದರು.
ನಗರದ ಎಸ್ ಜೆ ಎಂ ಪಾಲಿಟೆಕ್ನಿಕ್ (ಅನುದಾನಿತ) ನಲ್ಲಿ 2023-24 ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇಲ್ಲಿನ ಎಸ್ ಜೆ
ಎಂಐಟಿ ಕ್ರೀಡಾಂಗಣದಲ್ಲಿ ಚಾಲನೆ ನೀಡಿ ಮಾತಾನಾಡಿದ ಶ್ರೀಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ಎರಡರಲ್ಲೂ ನೀವು ಯಶಸ್ಸು ಪಡೆಯಬೇಕು. ಓದು ವೇದನೆಯೂ ಆಗಬಾರದು ಪಠ್ಯೇತರ ಶೋಕಿಯೂ ಆಗಬಾರದೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾಲೇಜಿನ ಪ್ರಾಚಾರ್ಯರಾದ ಎಸ್. ವಿ.ರವಿಶಂಕರ್, ವಿಭಾಗಗಳ ಮುಖ್ಯಸ್ಥರುಗಳಾದ ಮಮ್ತಾಜ್ ಬೇಗಂ,ಚನ್ನಕೇಶವ, ರಘು, ನಳಿನಾಕ್ಷಿ,ಮೋಹನ್ ಸೇರಿದಂತೆ ಹಿರಿಯ ಉಪನ್ಯಾಸಕರಾದ ಅನಂತನಾರಾಯಣ,ಗೋವಿಂದರಾಜು, ಪ್ರಶಾಂತ್,ಪ್ರತಿಮಾ, ಧರ್ಮೇಂದ್ರ ಅವರುಗಳು ಭಾಗವಹಿಸಿದ್ದರು.
ಅಂಪೈರ್ ಅರುಣ್, ದೈಹಿಕ ನಿರ್ದೇಶಕ ಕುಮಾರಸ್ವಾಮಿ ಕಾಲೇಜಿನ ಬೋಧಕರು ಬೋಧಕೇತರ ಸಿಬ್ಬಂದಿ ಹಾಗೂ , ವಿದ್ಯಾರ್ಥಿಗಳು ಹಾಜರಿದ್ದರು.