Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆ | ನವೆಂಬರ್ 22 ರಂದು ಜಗಳೂರು ಸೇರಿದಂತೆ ಈ ಎಲ್ಲಾ ಊರುಗಳಲ್ಲಿ ವಿದ್ಯುತ್ ವ್ಯತ್ಯಯ

---Advertisement---

ದಾವಣಗೆರೆ. ನ.21 :  ಜಗಳೂರು ವಿದ್ಯುತ್ ವಿತರಣಾ  ಕೇಂದ್ರದಲ್ಲಿ ತ್ರೈಮಾಸಿಕ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನವೆಂಬರ್ 22 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಜಗಳೂರು ವಿ.ವಿ ಕೇಂದ್ರದ ವ್ಯಾಪ್ತಿಯ ಜಗಳೂರು ಟೌನ್ ಮತ್ತು ಎಲ್ಲಾ ಗ್ರಾಮಗಳ ಎನ್.ಜೆ.ವೈ ಮಾರ್ಗಗಳು ಹಾಗೂ ನೀರಾವರಿ ಪಂಪ್‍ಸೆಟ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಮೆಳ್ಳೇಕಟ್ಟೆ ಫೀಡರ್ ವ್ಯಾಪ್ತಿಯ ಆಲೂರು, ಬಿ.ಜಿ.ಹಳ್ಳಿ, ಸಿದ್ದನೂರು, ಮಲ್ಲಾಪುರ, ಗುಡಾಳು, ಅಣಜಿ, ಕಿತ್ತೂರು, ಕಂದನಕೋವಿ, ಮೆಳ್ಳೆಕಟ್ಟೆ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು, ಕಾಡಜ್ಜಿ ಫೀಡರ್ ವ್ಯಾಪ್ತಿಯ ರೆಡ್ಡಿ ಕ್ಯಾಂಪ್, ಪುಟಗಾನಾಳು, ಶ್ರಿರಾಮ ನಗರ, ಕಾಡಜ್ಜಿ, ಬಸವಾನಾಳು, ನಾಗರಕಟ್ಟೆ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು
ಕುಕ್ಕವಾಡ ಫೀಡರ್ ವ್ಯಾಪ್ತಿಯ ಕುಕ್ಕವಾಡ, ಕೊಲಕುಂಟೆ, ಗಿರಿಯಾಪುರ, ಕೈದಾಳೆ, ಹದಡಿ, ಕಲಬಂಡೆ, ಲೋಕಿಕೆರೆ, ಬಲ್ಲೂರು, ಕನಗೊಂಡನಹಳ್ಳಿ, ಮತ್ತಿ, ನಾಗರಸನಹಳ್ಳಿ, ಹೊನ್ನಮರಡಿ. ಹೂವಿನಮಡು ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಮತ್ತು ಶ್ಯಾಗಲೆ ಫೀಡರ್ ವ್ಯಾಪ್ತಿಯ ಶ್ಯಾಗಲೆ, ಕಂದ್ಗಲ್ಲು, ಕೋಡಿಹಳ್ಳಿ, ಗೋಣಿವಾಡ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಬಿಳಿಚೋಡು ಮತ್ತು ಪಲ್ಲಾಗಟ್ಟೆ ವಿ.ವಿ ಕೇಂದ್ರದಲ್ಲಿ ತ್ರೈಮಾಸಿಕ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನವೆಂಬರ್ 23 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಬಿಳಿಚೋಡು ಮತ್ತು ಪಲ್ಲಾಗಟ್ಟೆ ವಿ.ವಿ ಕೇಂದ್ರದ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳ ಎನ್.ಜೆ.ವೈ ಮಾರ್ಗಗಳು ಹಾಗೂ ನೀರಾವರಿ ಪಂಪ್‍ಸೆಟ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

 

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...