Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದಲ್ಲಿ 10 ದಿನ ಉಚಿತ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ತರಬೇತಿ ಶಿಬಿರ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ : ನಗರದ ಚಳ್ಳಕೆರೆ ರಸ್ತೆಯ ಆರ್ಯ ಈಡಿಗ ವಿದ್ಯಾರ್ಥಿ ನಿಲಯದಲ್ಲಿ ನವೆಂಬರ್ 21 ರಿಂದ 30 ರವರೆಗೆ 10 ದಿನಗಳ ಕಾಲ ಪ್ರತಿ ನಿತ್ಯ ಬೆಳಿಗ್ಗೆ 5.30 ರಿಂದ  7 ರವರೆಗೆ ಉಚಿತ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ.

ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್, ಮಹಿಳಾ ಪತಂಜಲಿ ಯೋಗ ಸಮಿತಿ, ಯುವ ಭಾರತ್ ಪತಂಜಲಿ ಕಿಸಾನ್ ಸೇವಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಕನ್ನಡ ರಾಜ್ಯೋತ್ಸವ-ಯೋಗ ಉತ್ಸವ ಕಾರ್ಯಕ್ರಮ ನಡೆಯುತ್ತದೆ.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಬಿಎಸ್‍ಟಿ ಜಿಲ್ಲಾಧ್ಯಕ್ಷ ದೇವಾನಂದ ನಾಯ್ಕ್ ವಹಿಸುವರು. ಆರ್ಯ ಈಡಿಗರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಜೀವನ್, ನಗರಸಭೆ ಸದಸ್ಯೆ ಎಸ್.ಇ.ತಾರಕೇಶ್ವರಿ, ಪತ್ರಕರ್ತ ಟಿ.ತಿಪ್ಪೇಸ್ವಾಮಿ ಉದ್ಘಾಟನೆ ನೆರವೇರಿಸುವರು.

ಮುಖ್ಯ ಅತಿಥಿಗಳಾಗಿ ಎನ್.ಎ.ವೆಂಕಟೇಶ್ ರೆಡ್ಡಿ, ಹೆಚ್.ಎ.ರವಿ, ಆರ್.ಲೋಕೇಶ್ ರೆಡ್ಡಿ, ಎನ್.ಆರ್.ಗೋವಿಂದರೆಡ್ಡಿ, ಶೋಭಾ ತಿರುಮಲ ರೆಡ್ಡಿ, ಆರ್.ಎ.ಶ್ರೀರಾಮರೆಡ್ಡಿ, ಡಾ.ಕೆ.ಪಿ.ಮಲ್ಲಪ್ಪ, ಡಾ.ಜಿ.ಡಿ.ರಶ್ಮಿ, ಕೆ.ಆರ್.ವಿಜಯಕುಮಾರ್ ಭಾಗವಹಿಸುವರು.

ಯೋಗ ಶಿಕ್ಷಕರಾದ ಜಿ.ಶ್ರೀನಿವಾಸ್, ಎನ್.ಕೆಂಚವೀರಪ್ಪ, ಲಲಿತಾ ಬೇದ್ರೆ ಶಿಬಿರ ನಡೆಸಿಕೊಡುವರು. ಶಿಬಿರಾರ್ಥಿಗಳು ಯೋಗ ತರಬೇತಿಗೆ ಯೋಗ ಮ್ಯಾಟ್ ಅಥವಾ ಜಮಾಖಾನದೊಂದಿಗೆ ಹಾಜರಾಗಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಘಟನಾ ಕಾರ್ಯದರ್ಶಿ ಜೆ.ಎಸ್.ಗುರುಮೂರ್ತಿ ಮೊ-9449145416, ಖಜಾಂಚಿ ನವೀನ್ ಮೊ-9901585905 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸುಂದರ ಸಮಾಜ ನಿರ್ಮಾಣಕ್ಕೆ ಜಯದೇವ ಶ್ರೀಗಳ ಕೊಡುಗೆ ಅನನ್ಯ : ಸಂಸದ ಗೋವಿಂದ ಕಾರಜೋಳ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ,ಡಿ. 22 : ಮಾನವ ಕುಲ ಒಂದೇ ಗಂಡು ಹೆಣ್ಣು ಮಾತ್ರವೇ ಎರಡು ಜಾತಿ ಎಂಬ ಸಂದೇಶವನ್ನು

ವೀಕೆಂಡ್ ನಲ್ಲಿ ಚಿನ್ನ – ಬೆಳ್ಳಿ ದರ ಹೆಚ್ಚಳ : ಇಂದು ಎಷ್ಟಿದೆ ನೋಡಿ

  ಕಳೆದ ಮೂರ್ನಾಲ್ಕು ದಿನದಿಂದ ಇಳಿಕೆಯಾಗುತ್ತಿದ್ದ ಚಿನ್ನದ ದರ ಇಂದು ಮತ್ತೆ ಏರಿಕೆಯಾಗಿದೆ. ಶುಕ್ರವಾರದವರೆಗೂ 120 ರೂಪಾಯಿ ಅಷ್ಟು ಇಳಿಕೆಯಾಗಿತ್ತು. ಇದೀಗ ಇಂದು ಒಂದೇ ದಿನ 40 ರೂಪಾಯಿ ಅಷ್ಟು ಏರಿಕೆಯಾಗಿದೆ. ಈ ಮೂಲಕ

ಜಯದೇವ ಶ್ರೀಗಳ ಜೀವನ ಬೇರೆಯವರಿಗೆ ಅದರ್ಶಮಯ : ಮಹಾಂತ ರುದ್ರೇಶ್ವರ ಮಹಾಸ್ವಾಮಿಗಳು

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ,ಡಿ. 22 : ನಾಡಿನಲ್ಲಿ ತ್ರಿವಿಧ ರೀತಿಯ ದಾಸೋಹವನ್ನು ಮಾಡುವುದರ ಮೂಲಕ ಜನತೆಯನ್ನು ಉತ್ತಮವಾದ ದಾರಿಯತ್ತ ಕೊಂಡ್ಯೂದ

error: Content is protected !!