Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

7ನೇ ವೇತನ ಆಯೋಗದ ಅವಧಿ 6 ತಿಂಗಳು ಮುಂದಕ್ಕೆ..!

---Advertisement---

ಬೆಂಗಳೂರು: ವೇತನ ಪರಿಷ್ಕರಣೆಗಾಗಿ ಕಾಯುತ್ತಿದ್ದ ಸರ್ಕಾರಿ ನೌಕರರಿಗೆ ಕಹಿ ಸುದ್ದಿಯೊಂದು ಹೊರ ಬಿದ್ದಿದೆ. 7ನೇ ವೇತನ ಪರಿಷ್ಕರಣೆ ಆಗುತ್ತೆ ಎಂದೇ ಕಾಯುತ್ತಿದ್ದವರಿಗೆ ಅವಧಿ ಇನ್ನು ಮುಂದಕ್ಕೆ ಹೋಗಿದೆ‌. ವೇತನ ಪರಿಷ್ಕರಣೆಯ ಅವಧಿಯನ್ನು ಸರ್ಕಾರ ಆರು ತಿಂಗಳು ವಿಸ್ತರಣೆ ಮಾಡಿದೆ.

 

ಸುಧಾಕರ್ ರಾವ್ ಅಧ್ಯಕ್ಷತೆಯ 7ನೇ ವೇತನ ಆಯೋಗದ ವರದಿಯನ್ನು, ರಾಜ್ಯ ಸರ್ಕಾರ ನವೆಂಬರ್ ನಲ್ಲೇ ಪಡೆಯುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಈಗ ವೇತನ ಆಯೋಗದ ಪರಿಷ್ಕರಣೆಯನ್ನು 2024ಕ್ಕೆ ವಿಸ್ತರಣೆ ಮಾಡಲಾಗಿದೆ. ಇದು ಆಸೆಯಿಂದ ಕಾಯುತ್ತಿದ್ದ ನೌಕರರಿಗೆ ನಿರಾಸೆ ಮೂಡಿಸಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಇದು ಎರಡನೇ ಬಾರಿಗೆ ವಿಸ್ತರಣೆಯಾಗುತ್ತಿದೆ. ನವೆಂಬರ್ 18ಕ್ಕೆ ನೀಡಿದ್ದ ಮೊದಲ ಅವಧಿ ಮುಕ್ತಾಯವಾಗಿತ್ತು. ಆದರೆ ಮತ್ತೆ ಅವಧಿಯನ್ನು ವಿಸ್ತರಣೆ ಮಾಡಿರುವ ಸರ್ಕಾರ, ಆರು ತಿಂಗಳು ಮುಂದಕ್ಕೆ ಹಾಕಿದೆ.

ಸದ್ಯಕ್ಕೆ ಸರ್ಕಾರ ಅವಧಿಯ ವಿಸ್ತರಣೆಯನ್ನು ಆರು ತಿಂಗಳು ಮುಂದಕ್ಕೆ ಹಾಕಲಾಗಿದೆ. ಆದರೆ ಆರು ತಿಂಗಳಾದ ಮೇಲು ಎಷ್ರ ಮಟ್ಟಿಗೆ ಸಾಧ್ಯ ಎಂಬುದು ಮಾತ್ರ ಗೊತ್ತಿಲ್ಲ. ಯಾಕಂದ್ರೆ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಲೋಕಸಭಾ ಚುನಟವಣೆ ಬೇರೆ ಬರಲಿದೆ. ನೀತಿ ಸಂಹಿತೆ ಜಾರಿಯಾದರೆ ಆಗಲೂ ಪರಿಷ್ಕರಣೆ ಕಷ್ಟವಾಗುತ್ತದೆ. ಹೀಗಾಗಿ ವರದಿ ಸಲ್ಲಿಸಿದ ತಕ್ಷಣವೇ ಪರಿಷ್ಕರಣೆ ಮಾಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment