Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಎರಡೂವರೆ ವರ್ಷದ ಬಳಿಕ ಡಿಕೆಶಿ ಸಿಎಂ ಆಗ್ತಾರೆ : ರವಿ ಗಾಣಿಗ ಮಾತಿಗೆ ಸಚಿವ ಎಂಬಿ ಪಾಟೀಲ್ ಏನಂದ್ರು..?

---Advertisement---

ಬೆಂಗಳೂರು: ಎರಡೂವರೆ ವರ್ಚದ ಬಳಿಕ ಕಾಂಗ್ರೆಸ್ ನಲ್ಲಿ ಸಿಎಂ ಬದಲಾವಣೆ ಆಗ್ತಾರೆ ಎಂಬ ವಿಚಾರ ನಿನ್ನೆ ಮೊನ್ನೆಯದ್ದಲ್ಲ. ಸರ್ಕಾರ ರಚನೆ ಆದಾಗಿನಿಂದ ಈ ಮಾತು ಕೇಳಿ ಬರ್ತಾನೆ ಇದೆ. ಇದೇ ವಿಚಾರವಾಗಿ ನಿನ್ನೆ ಮಂಡ್ಯ ಶಾಸಕ ರವಿ ಗಾಣಿಗ ಮಾತನಾಡಿದ್ದರು. ಎರಡೂವರೆ ವರ್ಷವಾದ ಬಳಿಕ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವುದು ಖಚಿತ ಎಂದು ಹೇಳಿದ್ದರು.

ಈ ಹೇಳಿಕೆಗೆ ಸಚಿವ ಎಂಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಮೇಲಿನ ಅಭಿಮಾನ, ಪ್ರೀತಿಯಿಂದ ಈ ರೀತಿ ಹೇಳಿರಬಹುದು. ರಾಜ್ಯಕ್ಕೆ ಯಾರೂ ಮುಖ್ಯಮಂತ್ರಿಯಾಗಬೇಕು, ಯಾರೂ ಮುಂದುವರೆಯಬೇಕು ಎಂಬುದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಅಸಲಿಗೆ ಬದಲಾವಣೆಯ ಅವಶ್ಯಕತೆ ಇದೆಯಾ ಎಂದು ಕೇಳಿದ್ದಾರೆ.

ಇನ್ನು ಅಸಲಿಗೆ ಬದಲಾವಣೆಯ ಅವಶ್ಯಕತೆ ಇದೆಯಾ, ಇಲ್ಲವಾ, ಸಚಿವ ಸಂಪುಟದಲ್ಲಿ ಯಾರಿರಬೇಕು ಮೊದಲಾದ ಎಲ್ಲ ಸಂಗತಿಗಳನ್ನು ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ರಂದೀಪ್ ಸಿಂಗ್ ಸುರ್ಜೆವಾಲಾ ಅವರನ್ನೊಳಗೊಂಡ ಹೈ ಕಮಾಂಡ್ ತೀರ್ಮಾನಿಸುತ್ತದೆ. ಕೆಲ ಶಾಸಕರು ತಮ್ಮ ತಮ್ಮ ನಾಯಕರ ಮೇಲಿನ ಪ್ರೀತಿಯಿಂದ ಅವರು ಸಿಎಂ ಆಗಬೇಕು ಅನ್ನುತ್ತಿರುತ್ತಾರೆ. ಹೈಕಮಾಂಡ್ ಅದೆಲ್ಲವನ್ನು ಗಮನಿಸುತ್ತಿರುತ್ತದೆ. ಯಾವುದೇ ನಾಯಕರು ಮುಖ್ಯಮಂತ್ರಿ ವಿಚಾರವನ್ನು ಬಹಿರಂಗವಾಗಿ ಮಾತನಾಡಬಾರದು ಎಂದು ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲಾ, ಸ್ವತಃ ಡಿಕೆ ಶಿವಕುಮಾರ್ ಕೂಡ ಹೇಳಿದ್ದಾರೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...