Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ರಮೇಶ್ ಕುಮಾರ್ ಆಪ್ತನ ಕೊಲೆ ಮಾಡಿದ್ದು ರಮೇಶ್ ಕುಮಾರ್ ಅಪ್ಪಟ ಅಭಿಮಾನಿ : ತನಿಖೆಯಲ್ಲಿ ಬಯಲಾಗಿದ್ದೇನು..?

---Advertisement---

 

ಕೋಲಾರ: ನಿನ್ನೆ ನಡೆದ ಎಂ ಶ್ರೀನಿವಾಸ್ ಹತ್ಯೆ ಕೋಲಾರವನ್ನೆ ನಡುಗಿಸಿದೆ. ಶ್ರೀನಿವಾಸಪುರದಲ್ಲಿ ಹತ್ಯೆ ಮಾಡಲಾಗಿದ್ದು, 12 ಗಂಟೆ ಒಳಗೆ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಈಗಾಗಲೇ ತನಿಖೆ ಶುರು ಮಾಡಿದ್ದು, ಹತ್ಯೆಗೆ ಶ್ರೀನಿವಾಸಪುರದ ರಾಜಕೀಯವೇ ಕಾರಣ ಎನ್ನಲಾಗಿದೆ. ಶ್ರೀನಿವಾಸ್ ಕೊಲೆಗೆ ಸುಪಾರಿ ಕೊಟ್ಟಿರುವುದೇ ಪ್ರಮುಖ ಆರೋಪಿಯಾಗಿರುವ ವೇಣುಗೋಪಾಲ್ ಎನ್ನಲಾಗಿದೆ.

ಕಳೆದ ಐದು ವರ್ಷಗಳ ಹಿಂದೆ ವೇಣುಗೋಪಾಲ್ ಮನೆ ಮೇಲೆ ದಾಳಿ ನಡೆದಿತ್ತು. ಹಳೆ ವಯುಷಮ್ಯದ ಹಿನ್ನೆಲೆ ವೇಣು ಸುಪಾರಿ ಕೊಟ್ಟಿದ್ದಾರೆ. ಅವರಿಗೆ ಅವರ ಸ್ನೇಹಿತರಾದ ಮುನೀಂದ್ರ, ಸಂತೋಷ್ ಸೇರಿ ಹತ್ಯೆ ಮಾಡಿದ್ದಾರೆ. ತನಿಖೆ ವೇಳೆ ಮತ್ತೊಂದು ವಿಚಾರ ಬಯಲಾಗಿದೆ. ವೇಣು ಕೂಡ ರಮೇಶ್ ಕುಮಾರ್ ಅಪ್ಪಟ ಅಭಿಮಾನಿ ಎಂಬುದು.

ಆರೋಪಿ ವೇಣುಗೋಪಾಲ್ ಎದೆಯ ಮೇಲೆ ರಮೇಶ್ ಕುಮಾರ್ ಅವರ ಟ್ಯಾಟೋ ಇದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ರಮೇಶ್ ಕುಮಾರ್ ಅಭಿಮಾನಿಯಿಂದಲೇ ಕಾಂಗ್ರೆಸ್ ಮುಖಂಡನ ಕೊಲೆ ನಡೆದಿದೆ ಎನ್ನಲಾಗಿದೆ. ಶ್ರೀನಿವಾಸ್ ಅವರ ಭೀಕರ ಕೊಲೆ ನಡೆದ ಬಳಿಕ A1 ಆರೋಪಿ ವೇಣು ಎದೆಯ ಮೇಲೆ ರಮೇಶ್ ಕುಮಾರ್ ಟ್ಯಾಟೋ ಹಾಕಿಸಿಕೊಂಡಿರೋ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...