Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಂಧನಕ್ಕೂ ಮುನ್ನ ಸ್ಪರ್ಧಿಗಳ ಭವಿಷ್ಯ ನುಡಿದಿದ್ದ ವರ್ತೂರು ಸಂತೋಷ್..!

---Advertisement---

 

 

ಬಿಗ್ ಬಾಸ್ ಸೀಸನ್ 10 ಸ್ಪರ್ಧಿಯಾಗಿದ್ದರು ವರ್ತೂರು ಸಂತೋಷ್. ಬಿಗ್ ಬಾಸ್ ಮನೆಯೊಳಗೆ ಅವರದ್ದೇ ಆದಂತ ಟೀಂ ಇತ್ತು. ತುಕಾಲಿ ಸಂತೋಷ್, ರಕ್ಷಕ್ ಹಾಗೂ ವರ್ತೂರು ಸಂತೋಷ್ ಮೂವರು ಒಂದು ಟೀಂ ಆಗಿದ್ದರು. ಊಟವಾದ ಮೇಲೆ, ಏನು ಕೆಲಸವೇ ಇಲ್ಲದ ಸಮಯದಲ್ಲೆಲ್ಲಾ ಹರಟೆ ಹೊಡೆಯುತ್ತಾ ಕೂರುತ್ತಿದ್ದರು. ಅದರಲ್ಲೂ ಮನೆಯಲ್ಲಿನ ಹೆಂಗಸರ ಬಗ್ಗೆಯೇ ಹೆಚ್ಚು ಮಾತಾಡುತ್ತಿದ್ದರು.

 

ಇಂದು ಗಂಡೈಕ್ಳ ನಡುವೆ ಕೂತು ಭವಿಷ್ಯವನ್ನು ಹೇಳುತ್ತಾ ಇದ್ರು ವರ್ತೂರು ಸಂತೋಷ್. ಲೀವಿಂಗ್ ಏರಿಯಾದಲ್ಲಿ ಸ್ನೇಹಿತ್, ರಕ್ಷಕ್, ತುಕಾಲಿ ಸಂತೋಷ್ ವಿನಯ್ ಕೂಡ ಕುಳಿತಿದ್ದರು. ಆಗ ವರ್ತೂರು ಸಂತೋಷ್ ಒಬ್ಬೊಬ್ಬರದ್ದೇ ಭವಿಷ್ಯ ಹೇಳುತ್ತಿದ್ದರು. ಅದರಲ್ಲಿ ತಮಾಷೆಯೇ ಹೆಚ್ಚಾಗಿತ್ತು. ಮೊದಲೇ ತುಕಾಲಿಗೆ ಕುತೂಹಲ ಹೆಚ್ಚಾಗಿತ್ತು. ಆಗ ನನ್ನ ಭವಿಷ್ಯ ಹೇಳು ಎಂದೇ ಕೇಳಿದ್ದರು.

ತುಕಾಲಿ ಸಂತು ಭವಿಷ್ಯ ವರ್ತೂರು ಸಂತೋಷ್ ಬಾಯಲ್ಲಿ ಬಂದಿತ್ತು. ನೀನು ಹೊರಗಡೆ ಹೋದ ಮೇಲೆ ನಾಯಿಗೆ ಹೊಡೆದಂತೆ ಹೊಡೆಯುತ್ತಾರೆ ಎಂದಿದ್ದರು. ಇದಕ್ಕೆ ಅಲ್ಲಿದ್ದ ಉಳಿದವರು ಜೋರು ನಗಾಡಿದ್ದರು. ಪೊಲೀಸರ ಕೈಗೆ ತಗಲಾಕಿಕೊಂಡಿರುವ ಡ್ರೆಸ್ ನಲ್ಲಿಯೇ ವರ್ತೂರು ಸಂತೋಷ್ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಸಂತೋಷ್ ಪೊಲೀಸರ ವಶದಲ್ಲಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಸಂತೋಷ್ ಹುಲಿಯ ಉಗುರಿನ ಡಾಲರ್ ಹಾಕಿಕೊಂಡಿದ್ದ ಆರೋಪದ ಮೇಲೆ ಬಂಧನ ಮಾಡಲಾಗಿದೆ. ಈ ಬಂಧನದ ಬಳಿಕ ಅದು ಅಸಲಿಯ ಉಗುರು ಎಂದು ಗೊತ್ತಾಗಿದೆ. ವರ್ತೂರು ಸಂತೋಷ್ ಕೂಡ ಇದನ್ನು ಹಣ ಕೊಟ್ಟು ತೆಗೆದುಕೊಂಡಿದ್ದು ಎಂಬ ಸತ್ಯ ಒಪ್ಪಿಕೊಂಡಿದ್ದಾರೆ. ಈ ಅದನ್ನು ಮಾರಾಟ ಮಾಡಿದವರು ಯಾರು ಎಂಬುದನ್ನು ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment