ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.21 : ಶರಣರಿಗೆ ಆದ ನೋವುಗಳನ್ನು ತಡೆದುಕೊಳ್ಳಲಾರದೇ ಅಂದಿನ ಅನುಭವ ಮಂಟಪ ಖಾಲಿಯಾಗಿತ್ತು. ಹಾಗೆಯೇ ಚಿತ್ರದುರ್ಗದ ಈ ಅನುಭವ ಮಂಟಪ ತುಂಬಿ ತುಳುಕುತ್ತಿತ್ತು. ಇಂದು ಖಾಲಿ ಆದಂತೆ ಕಾಣುತ್ತದೆ. ಶಿವಶರಣರಿಗೆ ಮೇಲಿಂದ ಮೇಲೆ ಹೊಡೆತಗಳು ಬೀಳುತ್ತಿವೆ. ಬಸವ ಶರಣರು ಯಾರಿಗೂ ಅಂಜಿದವರಲ್ಲ. ಶರಣ ಸಂಸ್ಕೃತಿ ಮಾಡುವವರು ಬಸವಣ್ಣನನ್ನು ಮರೆತಿದ್ದಾರೆ. ತತ್ತ್ವಗಳನ್ನು ಬಿಟ್ಟದ್ದಾರೆ ಎಂದು ಬೆಂಗಳೂರಿನ ಬಸವ ಸಮಿತಿ ಅಧ್ಯಕ್ಷರಾದ ಅರವಿಂದ ಜತ್ತಿ ಹೇಳಿದರು.
ಶ್ರೀಮಠದ ಅನುಭವ ಮಂಟಪದ ಅವರಣದಲ್ಲಿ ಶನಿವಾರ ನಡೆದ ಶರಣ ಸಂಸ್ಕೃತಿ ಉತ್ಸವ 2023ರ ಬಸವತತ್ವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಶರಣರು ಕೊಟ್ಟಿರುವ ದೀಪವು ನಿರಂತರವಾದುದು. ಪರಿವರ್ತನೆ ನಮ್ಮೊಳಗೆ ಆಗಬೇಕು. ನನ್ನ ತಂದೆ ಸಾಯುವ ಮೊದಲು ನನ್ನ ತಲೆ ಮೇಲೆ ಕೈಯಿಟ್ಟು ರಾಜಕಾರಣ ಬೇಡ ಬಸವಣ್ಣನಾಗು, ಅದು ಎಲ್ಲವನ್ನೂ ಕೊಡುತ್ತದೆ ಎಂದು ಹೇಳಿದ್ದರು.
ಅಂದಿನಿಂದ ಇಂದಿನವರೆಗೆ ನಾನು ಬಸವತತ್ತ್ವವನ್ನು ಬೆಳಸುತ್ತಿದ್ದೇನೆ. ಒಳಗಿರುವ ಲಿಂಗದ ಅರಿವು ನಮಗಿಲ್ಲದೇ ಹೋಗಿದೆ. ಅರಿವೇ ಗುರುವಾಗಿ ನಾವು ಬದುಕಬೇಕು. ಅಂಗಭಾವದಿಂದ ಲಿಂಗಭಾವಕ್ಕೆ ಪರಿವರ್ತನೆಯಾಗುವುದೇ ಬಸವತತ್ತ್ವ. ಈಗ ಅಂಗದ ಪ್ರಭಾವಳಿ ಬೇರೆ, ಅಂಗ ಪ್ರಭಾವಳಿ ಬೇರೆಯಾಗಿ ಕಾಣುತ್ತಿದೆ. ನಮ್ಮ ಸಮಾಜದಲ್ಲಿ ಯಾಕೆ ಪರಿವರ್ತನೆ ಆಗುತ್ತಿಲ್ಲ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸವಣೂರು ದೊಡ್ಡಹುಣಸೇಮಠದ ಶ್ರೀ.ಮ.ನಿ.ಪ್ರ ಶ್ರೀ.ಚನ್ನಬಸವ ಸ್ವಾಮಿಗಳು, ಹುಲಸೂರು ಶ್ರೀ ಗುರು ಬಸವೇಶ್ವರ ಸಂಸ್ಥಾನಮಠದ ಶ್ರೀ. ಮ. ನಿ. ಪ್ರ. ಶ್ರೀ. ಶಿವಾನಂದಾ ಮಹಾಸ್ವಾಮಿಗಳು, ಉಸ್ತುವಾರಿ ಶ್ರೀಗಳಾದ ಶ್ರೀಬಸವಪ್ರಭು ಸ್ವಾಮಿಗಳು, ಶರಣಸಂಸ್ಕøತಿ ಉತ್ಸವ-2023ರ ಗೌರವಾಧ್ಯಕ್ಷರಾದ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು, ಇತಿಹಾಸ ಸಂಶೋಧಕರಾದ ಡಾ.ಬಿ.ರಾಜಶೇಖರಪ್ಪ, ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಆಶೋಕ್ ಎಸ್ ಆಲೂರು, ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಶ್ರೀಮತಿ ಬಿ. ಎಸ್. ರೇಖಾ, ಶರಣಸಂಸ್ಕøತಿ ಉತ್ಸವ-2023ರ ಕಾರ್ಯಾಧ್ಯಕ್ಷರಾದ ಕೆ.ಸಿ.ನಾಗರಾಜ್, ಎಸ್‍ಜೆಎಂ ವಿದ್ಯಾಪೀಠದ ಕಾರ್ಯನಿರ್ವಹಣಾಧಿಕಾರಿಗಳಾದ ಎಂ. ಭರತ್ ಕುಮಾರ್ ಹಾಗೂ ಹರಚರಗುರುಮೂರ್ತಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ವಿವಿಧ ಮಠಾಧೀಶರುಗಳು ಕತೃಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಜಮುರಾ ಕಾಲವಿದರು ಪ್ರಾರ್ಥಿಸಿ, ಶ್ರೀ ಜ್ಞಾನಮೂರ್ತಿ ನಿರೂಪಿಸಿ ವಂದಿಸಿದರು.