Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯಕ್ಕೆ ಬರ, ಆದರೆ ಸಚಿವರಿಗಲ್ಲ : ದಸರಾ ಹಬ್ಬಕ್ಕೆ ಹೊಸ ಕಾರು ಭಾಗ್ಯ

---Advertisement---

 

 

ಸುದ್ದಿಒನ್, ಬೆಂಗಳೂರು :  ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ರಾಜ್ಯದ ತುಂಬಾ ಬರದ ಛಾಯೆ ಆವರಿಸಿದೆ.  ಹೀಗಿರುವಾಗ ಇಂತಹ ಬರದ ಸಮಯದಲ್ಲಿ ಸಚಿವರಿಗೆ ಮಾತ್ರ ದಸರಾ ಹಬ್ಬಕ್ಕೆ ಸರ್ಕಾರ ಕಾರು ಭಾಗ್ಯ ನೀಡಿದೆ.

ಹೌದು ರಾಜ್ಯ ಸರ್ಕಾರದಿಂದ ಸಚಿವರಿಗಾಗಿ ಹೊಸ ಕಾರುಗಳನ್ನು ಖರೀದಿ ಮಾಡಿದೆ. 33 ಸಚಿವರಿಗೆ ಹೊಸ ಇನೋವಾ ಕಾರುಗಳು ಸಿಕ್ಕಿವೆ. ಸುಮಾರು 9.9 ಕೋಟಿಗಿಂತ ಹೆಚ್ಚು ಹಣ ಖರ್ಚು ಮಾಡಿ, ಸಚಿವರಿಗಾಗಿ ಕಾರುಗಳ ಉಡುಗೊರೆ ತರಲಾಗಿದೆ. 33 ಇನೋವಾ ಕಾರುಗಳ ಖರೀದಿಗಾಗಿ ಸರ್ಕಾರವೇ ಹಣ ನೀಡಿದೆ. ದಸರಾ ಆರಂಭದಲ್ಲಿಯೇ ಹೊಸ ಕಾರುಗಳ ಸಚಿವರ ಮನೆ ಬಾಗಿಲಿಗೆ ಹೋಗಿವೆ.

ರಾಜ್ಯ ಸರ್ಕಾರ ಈಗಲೇ ನೀಡಿರುವ ಗ್ಯಾರಂಟಿಗಳಿಗೆ ಹಣ ನೀಡುವುದಕ್ಕೆ ಪರದಾಡುವಂತೆ ಆಗಿದೆ. ಜೊತೆಗೆ ಸರ್ಕಾರವೇ ಅನುತ್ಪಾದಕ ವೆಚ್ಚ ಕಡಿತ ಮಾಡಬೇಕು ಎಂದು ಹೇಳುತ್ತಿದೆ. ಆದರೆ ಈಗ ಕಾರುಗಳ ಖರೀದಿ ಎಷ್ಟು ಸರಿ ಎಂದೇ ಹಲವರು ಪ್ರಶ್ನೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಬರದ ಸಮಯದಲ್ಲಿ ಹೀಗೆ ಸಚಿವರಿಗೆ ಹೊಸ ಕಾರಿನ ಅವಶ್ಯಕತೆ ಇತ್ತ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಇದರ ನಡುವೆ ಭತ್ಯೆ ಹೆಚ್ಚಳದ ಚರ್ಚೆಯೂ ನಡೆಯುತ್ತಿದೆ. ಅದಕ್ಕೂ ಸಮ್ಮತಿ ಸಿಗುವ ಸಾಧ್ಯತೆ ಇದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment