Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗಡಿಭಾಗದಲ್ಲಿ ತೆಲುಗು ಭಾಷೆಯ ನಾಮಫಲಕಗಳು : ಕನ್ನಡ ಭಾಷಾ ಜಾಗೃತಿ ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ :  ಕೊರ್ಲಕುಂಟೆ ತಿಪ್ಪೇಸ್ವಾಮಿ

---Advertisement---

 

ಸುದ್ದಿಒನ್, ಚಳ್ಳಕೆರೆ, ಅಕ್ಟೋಬರ್.17 :  ಗಡಿಭಾಗದಲ್ಲಿ ಕನ್ನಡ ಭಾಷಾ ಜಾಗೃತಿಗೆ ಪ್ರತಿಯೊಬ್ಬ ಕನ್ನಡಿಗರ ಜಾಗೃತಿ ಅಗತ್ಯ ಇದೆ ಎಂದು ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೊರ್ಲಕುಂಟೆ ತಿಪ್ಪೇಸ್ವಾಮಿ ಹೇಳಿದರು.

ತಾಲೂಕಿನ ಗಡಿಭಾಗದಲ್ಲಿ ವೇದಿಕೆ ಸಂಘಟನೆಯೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪರಶುರಾಂಪುರ-ಕೊರ್ಲಕುಂಟೆ ರಸ್ತೆ ಮಾರ್ಗದಲ್ಲಿ ತೆಲುಗು ಭಾಷೆಯಲ್ಲಿ ಅಳವಡಿಸಿದ್ದ ನಾಮಫಲಕಗಳಿಗೆ ಮಸಿ ಬಳಿಯುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಡಿಭಾಗದಲ್ಲಿ ತೆಲುಗು ಭಾಷೆಯ ನಾಮಫಲಕಗಳು ಕಂಡು ಬಂದಲ್ಲಿ ತಾಲೂಕು ಆಡಳಿತ ಮತ್ತು ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗುತ್ತಿದೆ. ನಿರ್ಲಕ್ಷ್ಯ ತೋರುವ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ನೋಟೀಸ್ ಜಾರಿ ಮಾಡಬೇಕು ಎಂದ ಅವರು, ವಾಣಿಜ್ಯ ವ್ಯಾಪಾರಸ್ಥರು ತೆಲುಗು ನಾಮಫಲಕಗಳು ಅಳವಡಿಸುವುದು ಕಂಡು ಬಂದಲ್ಲಿ ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

ತೆಲುಗು ಭಾಷೆ ಬಳಸುವ ಮಾಲೀಕರಿಗೆ ನೋಟೀಸ್ ಜಾರಿ ಮಾಡುವ ಮೂಲಕ ಅಂಗಡಿ ಪರವಾನಗಿ ರದ್ದುಪಡಿಸಬೇಕು. ಗಡಿಭಾಗದಲ್ಲಿ ಭಾಷೆಯ ರಕ್ಷಣೆ ಮಾಡಿಕೊಳ್ಳುವುದು ಯಾವುದೋ ಒಂದು ಕನ್ನಡ ಸಂಘಟನೆ ಮತ್ತು ಸಂಸ್ಥೆಯವರ ಜವಾಬ್ದಾರಿ ಎನ್ನುವ ನಿರ್ಲಕ್ಷ್ಯ ದೂರವಾಗಬೇಕು. ಇಲ್ಲಿನ ನೆಲ, ಗಾಳಿ, ಬೆಳಕು ಬೆಳಸಿಕೊಂಡು ವ್ಯವಹಾರ ಆರಂಭಿಸುವ ಪ್ರತಿಯೊಬ್ಬರಿಗೂ ಈ ನೆಲದ ಸಂಸ್ಕೃತಿ ಮತ್ತು ಭಾಷೆಯ ಗೌರವ ಇರಬೇಕು ಎಂದು ಹೇಳಿದರು.

ತೆಲುಗು ಭಾಷೆಯಲ್ಲಿ ನಾಮಫಲಕ ಬರೆಸಿದ್ದ ವ್ಯಾಪಾರ ಮಾಲೀಕ ನಾಗೇಶ್ ಮಾತನಾಡಿ, ಗಡಿಭಾಗದಲ್ಲಿ ಭಾಷಾ ರಕ್ಷಣೆಗೆ ಪ್ರತಿಯೊಬ್ಬರೂ ಎಚ್ಚರವಾಗಿರಬೇಕಾಗಿದೆ. ಕಣ್ತಪ್ಪಿನಿಂದ ತೆಲುಗು ಭಾಷೆಯ ನಾಮಫಲಕ ಸ್ಥಾಪನೆ ಮಾಡಲಾಗಿದೆ. ಸ್ವತಃ ನನ್ನ ಕೈಯಾರೆ ಕಪ್ಪು ಮಸಿ ಬಳಿಯುವ ಮೂಲಕ ಇನ್ನು ಮುಂದೆ ಇಂತಹ ತಪ್ಪು ಮಾಡುವುದಿಲ್ಲ ಎಂದು ನಾಮಫಲಕಕ್ಕೆ ಕಪ್ಪು ಮಸಿ ಬಳಿಯಲಾಯಿತು.
ಸ್ಥಳೀಯರಾದ ಗ್ರಾಪಂ ಮಾಜಿ ಸದಸ್ಯ ಡಿ. ಸಿರಿಯಣ್ಣ, ಕೆ.ವಿ. ಪ್ರಸನ್ನ, ಮೀಸೆ ಮಹಾಲಿಂಗಪ್ಪ, ಹೊರಕೆರೆ ರಂಗಸ್ವಾಮಿ, ಪಿ. ರಾಮದಾಸ, ಮಂಜುನಾಥ, ರಾಜಣ್ಣ ಮತ್ತಿತರರು ಇದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment