Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗದಲ್ಲಿ ಆನೆ ಬಾಗಿಲು ಸಮೀಪ ದುರ್ಗಾದೇವಿ ಪ್ರತಿಷ್ಠಾಪನೆ : ಒಂಬತ್ತು ದಿನ ವಿಶೇಷ ಪೂಜೆ

---Advertisement---

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.15 : ಆನೆಬಾಗಿಲು ಸಮೀಪವಿರುವ ಆಂಜೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಿಂದೂ ಘರ್ಜನೆ ಸೇನಾ ಸಂಸ್ಥಾನ ವತಿಯಿಂದ ದುರ್ಗಾದೇವಿಯನ್ನು ಭಾನುವಾರ ಪ್ರತಿಷ್ಠಾಪಿಸಿ ಒಂಬತ್ತು ದಿನಗಳ ಕಾಲ ಶ್ರದ್ದಾಭಕ್ತಿಯಿಂದ ಪೂಜೆ ಸಲ್ಲಿಸಲಾಗುತ್ತದೆ.
ಒಂದು ಕೈಯಲ್ಲಿ ತ್ರಿಶೂಲ ಮತ್ತೊಂದು ಕೈಯಲ್ಲಿ ಬಾಣ ಹಿಡಿದಿರುವ ದುರ್ಗಾದೇವಿಯನ್ನು ಕಂಗೊಳಿಸುವಂತೆ ಬಣ್ಣ ಬಣ್ಣದ ಹೂವು ಹಾರಗಳಿಂದ ಸಿಂಗರಿಸಲಾಗಿದೆ. ಬೆಳಗಿನಿಂದ ಸಂಜೆಯತನಕ ನೂರಾರು ಭಕ್ತರು ಧಾವಿಸಿ ಶ್ರದ್ದಾಭಕ್ತಿಯನ್ನು ಸಮರ್ಪಿಸಿದರು.

ಅಕ್ಟೋಬರ್ 15 ರಂದು ಸಂಜೆ ಕಲಾಂಜಲಿ ಮೆಲೋಡಿಸ್‍ನವರಿಂದ ವಾದ್ಯಗೋಷ್ಠಿ.

ಅಕ್ಟೋಬರ್ 16 ರಂದು ಸಪ್ತಗಿರಿ ಭಜನಾ ಮಂಡಳಿಯಿಂದ ದೇವರ ನಾಮಗಳು.

ಅಕ್ಟೋಬರ್ 17 ರಂದು ನೃತ್ಯ ಸ್ಪರ್ಧೆ,

ಅಕ್ಟೋಬರ್ 18 ರಂದು ಚಿತ್ರದುರ್ಗ ಸಿಂಗರ್ಸ್ ಜೋನ್ ಇವರಿಂದ ವಾದ್ಯಗೋಷ್ಠಿ,

ಅಕ್ಟೋಬರ್ 19 ರಂದು ಹರಟೆ ಕಟ್ಟೆ ಚರ್ಚಾ ಕಾರ್ಯಕ್ರಮ.

ಅಕ್ಟೋಬರ್ 20 ರಂದು ಶ್ರೀಕಾಂತ್ ಇವರಿಂದ ಅಷ್ಪಲಕ್ಷ್ಮಿ ಪೂಜೆ,

ಅಕ್ಟೋಬರ್ 21 ರಂದು ಬೆಳಿಗ್ಗೆ ಸರಸ್ವತಿ ಪೂಜೆ ಹಾಗೂ ಅಕ್ಷರಾಭ್ಯಾಸ,

ಅಕ್ಟೋಬರ್  22 ರಂದು ದುರ್ಗಾಷ್ಟಮಿ ಪ್ರಯುಕ್ತ ಮೈಸೂರಿನ ದಯಾನಂದ ಶರ್ಮ ಇವರಿಂದ ಗಣ ಹೋಮ, ನವಗ್ರಹ ಹೋಮ, ಧ್ವನಂತರಿ ಹೋಮ, ಸುದರ್ಶನ ಹೋಮ, ನರಸಿಂಹ ಹೋಮ, ಲಕ್ಷ್ಮಿನಾರಾಯಣ ಹೋಮ, ಲಲಿತ ಹೋಮ, ದುರ್ಗಾ ಹೋಮ, ನವ ದುರ್ಗಾ ಹೋಮ, ಅನ್ನಸಂತರ್ಪಣೆ.

ಅಕ್ಟೋಬರ್ 23 ರಂದು ಆಯುಧ ಪೂಜೆ ಪ್ರಯುಕ್ತ ಗುರುರಾಜ್ ಇವರಿಂದ ಕೊಳಲು ವಾದನ,

ಅಕ್ಟೋಬರ್ 24 ರಂದು ಬನ್ನಿ ಮುಡಿಯುವ ಉತ್ಸವ, ಸಂಜೆ ಭಕ್ತಿಗೀತೆಗಳು,

ಅಕ್ಟೋಬರ್ 25 ರಂದು ನಗರದ ಪ್ರಮುಖ ಬೀದಿಗಳಲ್ಲಿ ದುರ್ಗಾದೇವಿಯ ಶೋಭಾಯಾತ್ರೆ ನಂತರ ಚಂದ್ರವಳ್ಳಿಯಲ್ಲಿ ವಿಸರ್ಜಿಸಲಾಗುವುದು. ಭಕ್ತಾಧಿಗಳು ಒಂಬತ್ತು ದಿನಗಳ ಕಾಲ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದುರ್ಗಾದೇವಿಯ ಕೃಪೆಗೆ ಪಾತ್ರರಾಗುವಂತೆ ಹಿಂದೂ ಘರ್ಜನೆ ಸೇನಾ ಸಂಸ್ಥಾನ ಅಧ್ಯಕ್ಷ ಸಾಗರ್ ವಿನಂತಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...