Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹನಿ ನೀರು ತಮಿಳುನಾಡಿಗೆ ಹೋಗದಂತೆ ಮಾಡುವ ತಾಕತ್ತು ಕನ್ನಡಿಗರಿಗೆ ಇದೆ : ಪೂಜಾ ಗಾಂಧಿ

---Advertisement---

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುವ ವಿಚಾರಕ್ಕೆ ಇಂದು ಕನ್ನಡಪರ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ. ರಾಜ್ಯಾದ್ಯಂತ ಬಂದ್ ಗೆ ಬೆಂಬಲ ವ್ಯಕ್ತವಾಗಿದೆ. ಕನ್ನಡ ಚಿತ್ರರಂಗ ಕೂಡ ಕಾವೇರಿಗಾಗಿ ಕೈ ಜೋಡಿಸಿದೆ. ಹಲವಾರು ಕಲಾವಿದರು ಪ್ರತಿಭಟನೆಯಲ್ಲಿ ಭಾಗಿಯಾಗಿವೆ.

ಈ ವೇಳೆ ನಟಿ ಪೂಜಾಗಾಂಧಿ ಮಾತನಾಡಿದ್ದು, ಕನ್ನಡಿಗರನ್ನು ಕೆಣಕಿದರೆ ಹುಷಾರ್. ಒಂದು ಹನಿ‌ನೀರನ್ನು ತಮಿಳುನಾಡಿಗೆ ಬಿಡದಂತೆ ಮಾಡುವ ತಾಕತ್ತು ಕನ್ನಡಿಗರಿಗೆ ಇದೆ. ಸುಮಾರು ಹನ್ನೆರಡು ವರ್ಷದ ಹಿಂದೆ ಇಲ್ಲೆ ಒಂದು ಹೋರಾಟದಲ್ಲಿ ಭಾಗಿಯಾಗಿದ್ದೆವು. ಕನ್ನಡಿಗರಿಗೆ ಸಹನೆ ಇದೆ. ಆದರೆ ಪರೀಕ್ಷೆ ಮಾಡುವುದಕ್ಕೆ ಹೋಗಬೇಡಿ. ನಮ್ಮ ಕರ್ನಾಟಕ ಸರ್ಕಾರ ರೈತರ ಸಮಸ್ಯೆ ಬಗ್ಗೆ ಚರ್ಚೆ ಮಾಡಬೇಕು. ನಮ್ಮ ರೈತರಿಗೆ ಏನಾದರೂ ಆಗಲಿ, ತಮಿಳುನಾಡು ರೈತರು ಮಾತ್ರ ಚೆನ್ನಾಗಿರಲಿ ಎಂದು ನಮ್ಮನ್ನು ಕೆಣಕಿದರೆ ಸುಮ್ಮನೆ ಇರುವುದಿಲ್ಲ.

ಬೆಳ್ಳಿಯ ಬಾಗಿಲು, ಚಿನ್ನದ ದೇಗುಲ ಒಳಗಡೆ ಬಹು ಮುತ್ತುರತ್ನ. ಬೀಗದ ಕೈತಂದು ಬಾಗಿಲನ್ನು ತೆರೆಯಲು ನೀನೊಮ್ಮೆ ಪ್ರಯತ್ನ ಮಾಡು. ಎಲ್ಲಾ ಖಜಾನೆಗಳಿಗೆ ಒಂದು ಬೀಗದ ಕೈ ಇರುವಂತೆ ಎಲ್ಲಾ ಸಮಸ್ಯೆಗಳಿಗೂ ಒಂದು ಪರಿಹಾರ ಇದ್ದೆ ಇರುತ್ತೆ ಎಂದು ಪೂಜಾ ಗಾಂಧಿ ಕವಿ ಪರಮೇಶ್ವರ ಭಟ್ ಅವರ ಮಾತುಗಳನ್ನು ಹೇಳಿದ್ದಾರೆ. ಹಾಗೇ ಇನ್ನು ಮುಂದೆ ಒಳ್ಳೆಯ ಮಳೆಯಾಗಲಿ. ಎರಡು ರಾಜ್ಯದ ರೈತರಿಗೆ ಒಳೀತಾಗಲಿ ಎಂದೇ ಬಯಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...