ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎರಡನೇ ಬಾರಿಗೆ ತಂದೆಯಾಗಿದ್ದಾರೆ. ಇಂದು ಪ್ರೇರಣಾ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಗಣೇಶನ ಹಬ್ಬದ ದಿನವೇ ಗಂಡು ಮಗು ಬಂದಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದೇ ಮಾಹಿತಿ ಲಭ್ಯವಾಗಿದೆ.
ಇನ್ನು ಧ್ರುವ ಸರ್ಜಾಗೆ ಗಂಡು ಮಗು ಆದ ಖುಷಿಯಲ್ಲಿ ಅಭಿಮಾನಿಗಳೆಲ್ಲಾ ಆಸ್ಪತ್ರೆಯ ಮುಂಭಾಗ ಸೇರಿದ್ದರು. ಧ್ರುವ ಸರ್ಜಾ ಮಗನನ್ನು ನೋಡಿಕೊಂಡು ಬಂದ ಖುಷಿಯನ್ನು ಅಭಿಮಾನಿಗಳು ಹಾಗೂ ಮಾಧ್ಯಮದವರ ಬಳಿ ಹೇಳಿದ್ದಾರೆ. ಅಭಿಮಾನಿಗಳಿಗೆಲ್ಲಾ ಸಿಹಿಯನ್ನು ತಿನಿಸಿದ್ದಾರೆ.
ಇದೆ ವೇಳೆ ಮಾತನಾಡಿದ ಅವರು, ಈಗ ಎರಡನೇ ಮಗು ಆಗಿದೆ. ಲೆಕ್ಕದ ಪ್ರಕಾರ ಇದು ಮೂರನೇ ಮಗು. ರಾಯನ್ ಮೊದಲ ಮಗ. ಆಮೇಲೆ ಹೆಣ್ಣು ಮಗು ಹುಟ್ಟಿದೆ. ಆದರೆ ಅವಳಿಗೆ ಇನ್ನು ಹೆಸರಿಟ್ಟಿಲ್ಲ. ಈಗ ಮಗ ಹುಟ್ಟಿದ್ದಾನೆ. ಮನೆಯಲ್ಲಿ ಈಗ ಮೂರು ಮಕ್ಕಳಿದ್ದಾರೆ. ಪ್ರೇರಣಾ ಮತ್ತು ಮಗ ಆರೋಗ್ಯವಾಗಿದ್ದಾರೆ. ಮಗು ಯಾವಾಗ ಹುಟ್ಟಿದರು ಅದು ಒಳ್ಳೆಯ ದಿನವೇ. ಲೆಜೆಂಡರಿಗಳು ಹುಟ್ಟಿದ ದಿನ ಜೊತೆಗೆ ಗೌರಿ ಗಣೇಶ ಹಬ್ಬ ಬೇರೆ ಇನ್ನಷ್ಟು ಖುಷಿ ಕೊಟ್ಟಿದೆ ಎಂದಿದ್ದಾರೆ. ಇದೇ ವೇಳೆ ತನ್ನ ಅಣ್ಣನನ್ನು ನೆನೆದಿದ್ದಾರೆ.
ಅಣ್ಣ ಎಂದರೆ ಧ್ರುವ ಸರ್ಜಾಗೆ ಇನ್ನಿಲ್ಲದ ಪ್ರೀತಿ. ಅಣ್ಣನಿಗೆ ತೋಟದ ಮನೆ ಎಂದರೆ ಬಲು ಇಷ್ಟ. ಈಗಾಗಿಯೇ ಧ್ರುವ ಸರ್ಜಾ ಫ್ಯಾಮಿಲಿ ಈಗ ತೋಡದ ಮನೆಗೆ ಶಿಫ್ಟ್ ಆಗಿದ್ದಾರೆ. ಪ್ರೇರಣಾ ಅವರ ಸೀಮಂತ ಕಾರ್ಯ ಕೂಡ ತೋಟದ ಮನೆಯಲ್ಲಿಯೇ ಆಗಿತ್ತು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















