Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

India vs Sri Lanka Live Score, Asia Cup 2023 Final: 8 ನೇ ಬಾರಿಗೆ ಏಷ್ಯಾ ಕಪ್ ಟ್ರೋಫಿ ಗೆದ್ದ ಭಾರತ…!

Facebook
Twitter
Telegram
WhatsApp

 

ಏಷ್ಯಾಕಪ್ 2023ರ ಫೈನಲ್‌ನಲ್ಲಿ ಶ್ರೀಲಂಕಾ 50 ರನ್‌ಗಳಿಗೆ ಆಲೌಟ್ ಆಗಿದೆ. ಅತ್ಯಲ್ಪ ರನ್ ಗಳನ್ನು ಬೆನ್ನತ್ತಿದ ಭಾರತ ಕೇವಲ 6.1 ಓವರ್ ಗಳಲ್ಲಿ 51 ರನ್ ಗಳ ಗುರಿ ತಲುಪಿ 8 ನೇ ಬಾರಿಗೆ ಟ್ರೋಫಿ ಗೆಲ್ಲುವ ಮೂಲಕ ಅತಿಹೆಚ್ಚು ಬಾರಿ ಫೈನಲ್ ನಲ್ಲಿ ಗೆದ್ದ ತಂಡವಾಗಿ ಹೊರಹೊಮ್ಮಿದೆ.

ಅದರಲ್ಲೂ ಹೈದರಾಬಾದಿನ ವೇಗಿ ಮೊಹಮ್ಮದ್ ಸಿರಾಜ್ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. 50 ಓವರ್ ಗಳಿಗೆ 51 ರನ್ ಗಳ ಗುರಿ ನೀಡಿದೆ.

ಅಲ್ಪ ಮೊತ್ತವನ್ನು ಬೆನ್ನತ್ತಿದ ಭಾರತ 3 ಓವರ್ ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 32 ರನ್ ಗಳನ್ನು ಗಳಿಸಿ ಗೆಲುವಿನ ಸಮೀಪದಲ್ಲಿದೆ.

—————————-

ಮೊಹಮ್ಮದ್ ಸಿರಾಜ್ (7-1-21-6), ಹಾರ್ದಿಕ್ ಪಾಂಡ್ಯ (2.2-0-3-3),ಬುಮ್ರಾ (5-1-23-1) ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಶ್ರೀಲಂಕಾ ತಂಡವನ್ನು 15.2 ಓವರ್‌ಗಳಲ್ಲಿ 50 ರನ್‌ಗಳಿಗೆ ಆಲೌಟ್ ಮಾಡಿದರು.

ಲಂಕಾ ಇನ್ನಿಂಗ್ಸ್‌ನಲ್ಲಿ ಐವರು ಡಕ್ ಔಟ್ ಆಗಿದ್ದಾರೆ.ಕುಶಾಲ್ ಮೆಂಡಿಸ್ (17) ಮತ್ತು ದುಶಾನ್ ಹೇಮಂತ (ಔಟಾಗದೆ 13) ಮಾತ್ರ ಎರಡಂಕಿ ಮೊತ್ತ ಗಳಿಸಿದರು.

ಆರು ಓವರ್ ಮುಕ್ತಾಯ,  13 ರನ್, ಆರು ವಿಕೆಟ್ ಪತನ

ಸಮಯ : 4 : 10 ಗಂಟೆ :
ಮೊಹಮ್ಮದ್ ಸಿರಾಜ್ ಅವರ ಒಂದೇ ಓವರ್ ನಲ್ಲಿ
ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡಿದೆ. 4 ಓವರ್ ಗೆ ಐದು ವಿಕೆಟ್ ನಷ್ಟಕ್ಕೆ 12 ರನ್ ಗಳಿಸಿದೆ.

ಏಷ್ಯಾ ಕಪ್ 2023 ರ ಫೈನಲ್ ಆರಂಭವಾಗಿದೆ. ಈ ಪಂದ್ಯದಲ್ಲಿ ಶ್ರೀಲಂಕಾ ನಾಯಕ ದಸುನ್ ಸನಕಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಬೂಮ್ರಾ ಅವರಮೊದಲ ಓವರ್ ಮೂರನೇ ಎಸೆತದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿದೆ.

ಪ್ರಸ್ತುತ ಎರಡು ಓವರ್ ಗಳಿಗೆ ಒಂದು ವಿಕೆಟ್ ನಷ್ಟಕ್ಕೆ 7 ರನ್ ಗಳಿಸಿದೆ.

ಶ್ರೀಲಂಕಾ ತಂಡದಲ್ಲಿ ಮಹಿಷ್ ತಿಕ್ಷನ್ ಬದಲಿಗೆ ದುಶನ್ ಹೇಮಂತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಕಳೆದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಎಲ್ಲಾ ಭಾರತೀಯ ಕ್ರಿಕೆಟಿಗರು ತಂಡವನ್ನು ಸೇರಿಕೊಂಡಿದ್ದಾರೆ. ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಅಂತಿಮ ತಂಡದಲ್ಲಿದ್ದಾರೆ. ಅಕ್ಷರ್ ಪಟೇಲ್ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ವಾಷಿಂಗ್ಟನ್ ಸುಂದರ್ ಅವರನ್ನು ಪ್ಲೇಯಿಂಗ್ ಇಲೆವೆನ್‌ಗೆ ತೆಗೆದುಕೊಳ್ಳಲಾಗಿದೆ.

ಇಂದು ಏಷ್ಯಾಕಪ್ ನ 16ನೇ ಫೈನಲ್ ಪಂದ್ಯ ನಡೆಯುತ್ತಿದೆ. ಇದುವರೆಗೆ ನಡೆದ ಟೂರ್ನಿಗಳಲ್ಲಿ ಭಾರತ ಏಳು ಬಾರಿ ಟ್ರೋಫಿ ಗೆದ್ದುಕೊಂಡಿದೆ. ನಂತರದ ಸ್ಥಾನದಲ್ಲಿರುವ ಶ್ರೀಲಂಕಾ ಆರು ಬಾರಿ ಗೆದ್ದಿದೆ. ಪಾಕಿಸ್ತಾನ ತಂಡ 2 ಬಾರಿ ಗೆದ್ದಿದೆ.

ಏಷ್ಯಾಕಪ್‌ನಲ್ಲಿ ಈ ಪಂದ್ಯವಲ್ಲದೆ ಭಾರತ-ಶ್ರೀಲಂಕಾ ತಂಡಗಳು 22 ಬಾರಿ ಮುಖಾಮುಖಿಯಾಗಿವೆ. ಅವರು ತಲಾ 11 ಪಂದ್ಯಗಳನ್ನು ಗೆದ್ದಿದ್ದಾರೆ. ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡ ಗೆಲುವಿನಲ್ಲಿ ಮುನ್ನಡೆ ಸಾಧಿಸಲಿದೆ. ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ಟೈಟಲ್ ಫೈಟ್ ನಡೆಯುತ್ತಿದೆ.

ಅಂತಿಮ ತಂಡಗಳು:
ಭಾರತ:
ರೋಹಿತ್ ಶರ್ಮಾ (ನಾಯಕ),
ಶುಭಮನ್ ಗಿಲ್,
ವಿರಾಟ್ ಕೊಹ್ಲಿ,
ಕೆಎಲ್ ರಾಹುಲ್,
ಇಶಾನ್ ಕಿಶನ್,
ಹಾರ್ದಿಕ್ ಪಾಂಡ್ಯ,
ರವೀಂದರ್ ಜಡೇಜಾ,
ವಾಷಿಂಗ್ಟನ್ ಸುಂದರ್,
ಜಸ್ಪ್ರೀತ್ ಬುಮ್ರಾ,
ಕುಲದೀಪ್ ಯಾದವ್,
ಮೊಹಮ್ಮದ್ ಸಿರಾಜ್,

ಶ್ರೀಲಂಕಾ :
ಪಾತುಮ್ ನಿಶಾಂಕ,
ಕುಶಾಲ್ ಪೆರೇರಾ,
ಕುಶಾಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ,
ಚರಿತ್ ಅಸಲಂಕಾ,
ಧನುಂಜಯ ಡಿ ಸಿಲ್ವಾ,
ದಸುನ್ ಸನಕ (ನಾಯಕ),
ದುನಿತ್ ವೆಲ್ಲಲಘೆ,
ದುಶನ್ ಹೇಮಂತ,
ಪ್ರಮೋದ್ ಮಧುಸೂಧನ್,
ಮತೀಶ ಪತಿರಾನ

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅನ್ನ ಮಾಡುವಾಗ ಅಕ್ಕಿಯನ್ನು ಎಷ್ಟು ಬಾರಿ ತೊಳೆಯಬೇಕು ಗೊತ್ತಾ ?

ಸುದ್ದಿಒನ್ : ನಾವು ದಿನಕ್ಕೆ ಎರಡರಿಂದ ಮೂರು ಬಾರಿ ತಿನ್ನುವ ಪ್ರಮುಖ ಆಹಾರವೆಂದರೆ ಅಕ್ಕಿ. ದೇಶದ ಹೆಚ್ಚಿನ ಭಾಗಗಳಲ್ಲಿ, ಜನರು ಅನ್ನವನ್ನು ತಿನ್ನುತ್ತಾರೆ. ಕೆಲವು ರಾಜ್ಯಗಳಲ್ಲಿ ಅಕ್ಕಿ ಪ್ರಧಾನ ಆಹಾರವಾಗಿದೆ. ಬ್ರೌನ್ ರೈಸ್ ಮತ್ತು

ಈ ರಾಶಿಯವರ ಮದುವೆ ಯಾವಾಗ ಆಗುತ್ತೆ? ಎಂಬ ಚಿಂತೆಯಲ್ಲಿ ವಯಸ್ಸು ಮೀರುತಿದೆ.

ಈ ರಾಶಿಯವರ ಮದುವೆ ಯಾವಾಗ ಆಗುತ್ತೆ? ಎಂಬ ಚಿಂತೆಯಲ್ಲಿ ವಯಸ್ಸು ಮೀರುತಿದೆ. ಈ ರಾಶಿಯವರು ತುಂಬಾ ದಿವಸದಿಂದ ಪ್ರೀತಿಸುತ್ತಿದ್ದಾರೆ ಆದರೆ ಇವರ ಜೊತೆ ಮದುವೆ ಆಗುತ್ತೋ ಇಲ್ವೋ ಎಂಬ ಅನುಮಾನ, ಭಾನುವಾರ- ರಾಶಿ ಭವಿಷ್ಯ

ಪ್ರಜ್ವಲ್ ವಿಡಿಯೋ ಕೇಸ್ : ದೇಹದ ಆರೋಗ್ಯ ಮಾತ್ರವಲ್ಲ ಸಮಾಜದ ಆರೋಗ್ಯವನ್ನು ಸುಧಾರಿಸಬೇಕು ಡಾ. ಮಂಜುನಾಥ್

ರಾಮನಗರ: ರಾಜ್ಯದಲ್ಲಷ್ಟೇ ಅಲ್ಲ ದೇಶದಲ್ಲೂ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡುತ್ತಿದೆ. ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ತನಿಖೆಗೆ ಕಾಯುತ್ತಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಬರುವ ಸಾಹಸ ಮಾಡುತ್ತಿಲ್ಲ.

error: Content is protected !!