ಎಂಎಲ್ಎ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿ ಉದ್ಯಮಿ ಗೋವಿಂದ ಪೂಜಾರ್ ಅವರಿಗೆ 7 ಕೋಟಿ ಮೋಸ ಮಾಡಿದ ಆರೋಪದ ಮೇಲೆ ಚೈತ್ರಾ ಕುಂದಾಪುರ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದೀಗ ಮಗಳ ಬಂಧನದ ಬಗ್ಗೆ ತಾಯಿ ರೋಹಿಣಿ ಅವರು ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ.
ನನ್ನ ಮಗಳನ್ನು ಬಳಸಿಕೊಂಡು ಈ ಸ್ಥಿತಿಗೆ ತರಲಾಗಿದೆ. ಆದರೆ ನನ್ನ ಮಗಳು ಯಾವುದೇ ಥರವಾದ ತಪ್ಪು ಮಾಡಿಲ್ಲ. ಮಗಳನ್ನು ವಶಕ್ಕೆ ಪಡೆದ ದಿನವೇ ಪೊಲೀಸರು ಕರೆ ಮಾಡಿದ್ದರು. ಮಗಳನ್ನು ವಶಕ್ಕೆ ಪಡೆದ ಮಾಹಿತಿ ಹಂಚಿಕೊಂಡರು. ಜೊತೆಗೆ ಮಗಳು ಕೂಡ ಫೋನ್ ನಲ್ಲಿಯೇ ಮಾತನಾಡಿದಳು.
ಮಗಳು ಫೋನ್ ನಲ್ಲಿಯೇ ಧೈರ್ಯ ತುಂಬಿದ್ದಾಳೆ. ನಾನು ಎಲ್ಲವನ್ನು ನೋಡಿಕೊಳ್ಳುತ್ತೇನೆ ಎಂದಿದ್ದಾಳೆ. ನನ್ನ ಮಗಳನ್ನು ಬಳಸಿಕೊಂಡು ಈ ಸ್ಥಿತಿಗೆ ತರಲಾಗಿದೆ. ತನ್ನ ಕೈಯಿಂದ ಹಣ ಹೋದರು ಬೇರೊಬ್ಬರ ಹಣಕ್ಕೆ ಆಸೆ ಪಟ್ಟವಳಲ್ಲ ನನ್ನ ಮಗಳು. ನಮಗೆ ಯಾವ ಚಿಂತೆಯನ್ನು ಕೊಡಲ್ಲ, ಎಲ್ಲವನ್ನು ಅವಲೇ ನಿಭಾಯಿಸುತ್ತಾಳೆ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















