ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿರುವ ಯುಕೆ ಪ್ರಧಾನಿ ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ಭಾನುವಾರ ಬೆಳಗ್ಗೆ ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
#WATCH | G 20 in India | United Kingdom Prime Minister Rishi Sunak and his wife Akshata Murthy at Delhi's Akshardham temple.
(Source: UK Pool via Reuters) pic.twitter.com/JBUdZHoYoU
— ANI (@ANI) September 10, 2023
ಜಿ20 ಶೃಂಗಸಭೆಯ ಎರಡನೇ ದಿನದ ಆರಂಭಕ್ಕೂ ಮುನ್ನ ರಿಷಿ ಸುನಕ್‌ದೇವಸ್ಥಾನಕ್ಕೆ ಭೇಟಿ ನೀಡುವ ಮುನ್ನ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಅಕ್ಷರಧಾಮದಲ್ಲಿ, ರಿಷಿ ಮತ್ತು ಅಕ್ಷತಾ ಪೂಜೆ ಸಲ್ಲಿಸಿದ ನಂತರ ದೇವಾಲಯದ ಮಾದರಿಯನ್ನು ಅವರಿಗೆ ಉಡುಗೊರೆಯಾಗಿ ನೀಡಲಾಯಿತು.
G 20 in India | United Kingdom Prime Minister Rishi Sunak and his wife Akshata Murthy at Delhi's Akshardham temple.
(Source: Akshardham temple) pic.twitter.com/QyrzXNtbyZ
— ANI (@ANI) September 10, 2023
ನಾನು ಹಿಂದೂ ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ ಎಂದು ಭಾರತಕ್ಕೆ ಬರುವ ಮುನ್ನ ಪ್ರತಿಕ್ರಿಯಿಸಿದ್ದ ರಿಷಿ, ಭಾರತಕ್ಕೆ ಬಂದ ನಂತರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿಯವರ ಬಗ್ಗೆ ನನಗೆ ಅಪಾರ ಗೌರವವಿದೆ ಮತ್ತು ಜಿ 20 ಶೃಂಗಸಭೆಯನ್ನು ಅದ್ಧೂರಿಯಾಗಿ ಮಾಡಲು ಅವರಿಗೆ ಬೆಂಬಲಿಸುವುದಾಗಿ ರಿಷಿ ಸುನಕ್ ಹೇಳಿದ್ದಾರೆ.
G 20 in India | United Kingdom Prime Minister Rishi Sunak and his wife Akshata Murthy at Delhi's Akshardham temple.
(Source: Akshardham temple) pic.twitter.com/yvIc8CXdhI
— ANI (@ANI) September 10, 2023
ಈ ವರ್ಷ ಜನ್ಮಾಷ್ಟಮಿ ಆಚರಿಸಲು ಸಾಧ್ಯವಾಗಲಿಲ್ಲ ಎಂದು ರಿಷಿ ಸುನಕ್ ಬೇಸರ ವ್ಯಕ್ತಪಡಿಸಿದರು. ಭಾರತಕ್ಕೆ ಬಂದ ನಂತರ ದೇವಸ್ಥಾನಕ್ಕೆ ಭೇಟಿ ನೀಡುವುದಾಗಿ ಆಗಲೇ ಹೇಳಿದ್ದರು. ರಿಷಿ ಸುನಕ್ ಅವರು ಹಿಂದೂ ಎಂಬುದಕ್ಕೆ ಹೆಮ್ಮೆಪಡುತ್ತೇನೆ ಎಂದು ಹೇಳಿದರು. ಧಾರ್ಮಿಕ ನಂಬಿಕೆಗಳು ಬಹಳ ಮುಖ್ಯ.ದೇವರ ಮೇಲಿನ ನಂಬಿಕೆ ಒತ್ತಡದಿಂದ ಹೊರಬರಲು ಸಾಕಷ್ಟು ಶಕ್ತಿಯನ್ನು ನೀಡುತ್ತದೆ ಎಂದರು.
ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ, ರಿಷಿ ಸುನಕ್ ರಾಜ್‌ಘಾಟ್‌ಗೆ ತೆರಳಿದರು. ಜಿ20 ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಅವರು ಮಹಾತ್ಮ ಗಾಂಧಿ ಅವರ ಸಮಾಧಿಗೆ ಗೌರವ ಸಲ್ಲಿಸಿದರು.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಯುಕೆ ಪ್ರಧಾನಿಯಾಗಿ ರಿಷಿ ಸುನಕ್ ಅಧಿಕಾರ ವಹಿಸಿಕೊಂಡರು. ಅವರು ಪ್ರಧಾನಿಯಾಗಿ ಭಾರತಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಜಿ20 ಶೃಂಗಸಭೆಗಾಗಿ ಅವರು ಶುಕ್ರವಾರ ದೆಹಲಿಗೆ ಬಂದಿದ್ದರು.