ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 08 : ಬಂಜೆತನ ಮುಕ್ತ ಕರ್ನಾಟಕಕ್ಕಾಗಿ ರಾಜ್ಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದಕ್ಕೆ ಎಲ್ಲರು ಕೈಜೋಡಿಸುವಂತೆ ಸುವರ್ಣ ದೀಪ ವಿಷ್ಯುಯಲಿ ಇಂಪೇರ್ಡ್ ಅಂಡ್ ಫಿಸಿಕಲಿ ಚಾಲೆಂಜ್ಡ್ ಡೆವಲೆಪ್ ಮೆಂಟ್ ಟ್ರಸ್ಟ್‌ನ ದೀಪಕ್ ಆರ್. ಸಾಗರ್ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಂಜೆತನ ಎನ್ನುವುದು ಸಮಾಜದಲ್ಲಿ ಸಮಾಜಿಕ ಪಿಡುಗಾಗಿ ಪರಿಣಮಿಸಿದೆ. ಮಕ್ಕಳಿಗಾಗಿ ಹಲವಾರು ಮದುವೆಯಾದವರು ಇದ್ದಾರೆ ಮಗು ಹೆರಲು ಹೆಣ್ಣು ಮಾತ್ರ ಕಾರಣ ಎಂದು ತಿಳಿದು ಪುರುಷನಲ್ಲಿ ತಪ್ಪು ಇದ್ದರು ಸಹಾ ಅದನ್ನು ಹೆಣ್ಣಿನ ಮೇಲೆ ಹಾಕುವುದರ ಮೂಲಕ ಅಕೆಯನ್ನು ಸಮಾಜದ ದೃಷ್ಟಿಯಲ್ಲಿ ತಪ್ಪಿತಸ್ಥಳಂತೆ ಮಾಡಲಾಗುತ್ತಿದೆ.
ಇಂದಿನ ದಿನಮಾನದಲ್ಲಿ ಇದಕ್ಕೆ ವಿವಿಧ ರೀತಿಯ ಚಿಕಿತ್ಸೆಗಳಿವೆ, ಇದರಿಂದ ಮಕ್ಕಳನ್ನು ಪಡೆಯಬಹುದಾಗಿದೆ, ಇದರ ಬಗ್ಗೆ ತಿಳಿಸಲು ಜನ ಜಾಗೃತಿಯನ್ನು ಮೂಡಿಸುವ ಸಲುವಾಗಿ ಪ್ರವಾಸವನ್ನು ಮಾಡಿ ರಾಜ್ಯದ 31 ಜಿಲ್ಲೆಗಳಲ್ಲಿಯೂ ಸಹಾ ಇದರ ಬಗ್ಗೆ ಬೀದಿ ನಾಟಕವನ್ನು ಮಾಡುವುದರ ಮೂಲಕ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಂದರು.
ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಮಾನವ ತನ್ನ ಬದುಕನ್ನು ಕಳೆಯುತ್ತಿದ್ದಾನೆ ಪ್ರತಿ ದಿನ ಕಂಪ್ಯೂಟರ್ ಮುಂದೆ ಕುಳಿತು ಕೆಲಸವನ್ನು ಮಾಡುತ್ತಾನೆ ಇದ್ದಲ್ಲದೆ ಸದಾ ವಾಹನ ಚಾಲನೆ ಮಾಡುವವರು, ಬಿಸಿಯಲ್ಲಿ ಕೆಲಸ ಮಾಡುವವರು ತಮ್ಮ ದೇಹದಲ್ಲಿ ಆಗುವ ಬದಲಾವಣೆಯನ್ನು ಗಮನಿಸುವುದಿಲ್ಲ ಇಂತಹರ ದೇಹದಲ್ಲಿ ಬದಲಾವಣೆಯಾಗಿ ಮಕ್ಕಳ ಜನನಕ್ಕೆ ಸಹಕಾರಿಯಾಗುವುದಿಲ್ಲ, ಇದರ ಬಗ್ಗೆ ಗ್ರಾಮಾಂತರ ಪ್ರದೇಶದಲ್ಲಿ ಬೀದಿ ನಾಟPವನ್ನು ಮಾಡುವುದರ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಕುಡಿತದಲ್ಲಿರುವವರು ಮಾದಕ ವಸ್ತುಗಳನ್ನು ಸೇವನೆ ಮಾಡುವವರು, ಗರ್ಭ ಮಾತ್ರಗಳನ್ನು ನುಂಗುವವರಿಗೆ ಮಕ್ಕಳಾಗುವುದು ಕಡಿಮೆಯಾಗಬಹುದಾಗಿದೆ. ಇದಕ್ಕೆ ಸವಾಲ್ ಎಂಬಂತೆ ಆಧುನಿಕ ತಂತ್ರಜ್ಞಾನದಿಂದ ಪ್ರತಿ ಹೆಣ್ಣು ತಾಯತ್ತನವನ್ನು ಅನುಭವಿಸಬಹುದಾಗಿದೆ. ಬಂಜೆತನವನ್ನು ನಿರ್ಮೂಲನೆ ಮಾಡಬಹುದಾಗಿದೆ ಎಂದರು.
ಇಂದಿನ ತಂತ್ರಜ್ಞಾನದಿಂದ ಐವಿಎಫ್ ಮೂಲಕ ಮಗುವನ್ನು ಪಡೆಯಹುದಾಗಿದೆ. ಇದರ ಬಗ್ಗೆ ರಾಜ್ಯದಲ್ಲಿ ಅಭೀಯಾನವನ್ನು ಹಮ್ಮಿಕೊಂಡಿದ್ದು ಈ ಹಿನ್ನಲೆಯಲ್ಲಿ ಜನ ಜಾಗೃತಿಯನ್ನು ಮೂಡಿಸಲಾಗುತ್ತಿದೆ, ಸೆ.ಮಾಹೆಯಲ್ಲಿ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ ಮಕ್ಕಳಿಲ್ಲ ದಂಪತಿಗಳು ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ ಎಂದು ದೀಪಕ್ ತಿಳಿಸಿದರು.
ಗೋಷ್ಟಿಯಲ್ಲಿ ಭಾಗ್ಯಶ್ರೀ, ಮಹಿಮಾ, ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.