Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರಕೃತಿ ಆಂಗ್ಲ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ : ವೇಷ ಭೂಷಣ ಸ್ಪರ್ಧೆಯಲ್ಲಿ ಚಿಣ್ಣರ ಕಲರವ

---Advertisement---

 

ಸುದ್ದಿಒನ್,ಚಿತ್ರದುರ್ಗ, ಸೆಪ್ಟೆಂಬರ್.06 : ನಗರದ ಪ್ರಕೃತಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವೇಷ ಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು.

ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅತಿಥಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಭಗವಂತನ ಕೃಪೆಯೊಂದಿದ್ದರೆ ಮೂಕನು ಕೂಡ ವಾಚಾಳಿಯಾಗುತ್ತಾನೆ ಕಾಲಿಲ್ಲದ ಕುಂಟನು ಕೂಡ ಪರ್ವತವನ್ನು ಏರುತ್ತಾನೆ, ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮನು ಮನುಷ್ಯರ ಆಚಾರ ವಿಚಾರಗಳು ಹೇಗಿರಬೇಕು ಎಂದು ಸವಿಸ್ತಾರವಾಗಿ  ತಿಳಿಸಿದ್ದಾರೆ ಎಂದು ಪ್ರಾಸ್ತಾವಿಕ ನುಡಿಗಳನ್ನು ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಶಶಿಕಲರವರು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಆಗಮಿಸಿದ್ದ ಶ್ರೀಮತಿ ಸವಿತಾ ಶೇಖರ ರವರು ಮಾತನಾಡುತ್ತಾ ಕೃಷ್ಣನ ಬಗ್ಗೆ ಕಥೆಗಳನ್ನು ಹೇಳಿ ವಿದ್ಯಾರ್ಥಿಗಳಿಗೆ ತಿಳಿಸಿ ಕೊಡಬೇಕೆಂದು ಶಿಕ್ಷಕರಿಗೆ ಕರೆ ನೀಡಿದರು.

ಮತ್ತೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಲೆಯ ಪೋಷಕರಾದ ಶ್ರೀಮತಿ ಬಸಮ್ಮನವರು ಎಲ್ಲರಿಗೂ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳನ್ನು ಕೋರಿದರು.

ಶಾಲೆಯ ಟ್ರಸ್ಟಿಗಳಲ್ಲಿ ಒಬ್ಬರಾದ ರಂಗನಾಥ್  ಜೀವನದಲ್ಲಿ ಸರಿ ತಪ್ಪುಗಳನ್ನು ತಿದ್ದುಕೊಂಡು ಸರಿಯಾದ ದಾರಿಯಲ್ಲಿ ಮುನ್ನಡೆಯಬೇಕೆಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಕೃಷ್ಣನ ವೇಷ ಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿವಿಧ ಶಾಲಾ ವಿಜೇತ ಮಕ್ಕಳಿಗೆ  ಬಹುಮಾನಗಳನ್ನು ವಿತರಿಸಲಾಯಿತು.

ಬಹುಮಾನಿತರ ವಿವರ ಈ ಕೆಳಕಂಡಂತೆ :

ಅಂಗನವಾಡಿ ಮಕ್ಕಳು

ಪುರುಷೋತ್ತಮ- ಪ್ರಥಮ ಬಹುಮಾನ, ಅಭಿರಾಮ್ – ದ್ವಿತೀಯ ಬಹುಮಾನ
ಚರಣ್ಯ-ಸಮಾಧಾನಕರ ಬಹುಮಾನ,
ಪ್ರತಿಭಾ- ಸಮಾಧಾನಕರ ಬಹುಮಾನ,

ಎಲ್ ಕೆ ಜಿ, ಯುಕೆಜಿ ವಿಭಾಗ

ಉಜ್ವಲ ಎಲ್ಕೆಜಿ- ಪ್ರಥಮ ಬಹುಮಾನ,
ಓಜಸ್ ಆರ್ಯನ್ ಯುಕೆಜಿ – ದ್ವಿತೀಯ ಬಹುಮಾನ, ಶ್ರೀಯಾಂಶ – ಪ್ಲೇ ಹೋಂ ತೃತೀಯ ಬಹುಮಾನ

ಒಂದರಿಂದ ನಾಲ್ಕನೇ ತರಗತಿ ವಿಭಾಗ

ಶ್ರೀನಿಧಿ ನಾಲ್ಕನೇ ತರಗತಿ -ಪ್ರಥಮ ಬಹುಮಾನ,
ಗೋಕುಲ್ ಎರಡನೇ ತರಗತಿ – ದ್ವಿತೀಯ ಬಹುಮಾನ ,
ಚಿಂತನ ಎರಡನೇ ತರಗತಿ- ತೃತೀಯ ಬಹುಮಾನ.

ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲ ಮಕ್ಕಳಿಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಸ್ಪರ್ಧೆಯಲ್ಲಿ ಒಟ್ಟು ಇಪ್ಪತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು

ಶಾಲಾ ಅಧ್ಯಕ್ಷರಾದ ಎಂ. ಕೆ. ರವೀಂದ್ರರವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಪರಮಾತ್ಮನ ದಶಾವತಾರಗಳನ್ನು ವಿವರಿಸುತ್ತಾ ವಿದ್ಯಾರ್ಥಿಗಳು ಸನ್ಮಾರ್ಗದಲ್ಲಿ ನಡೆಯಬೇಕೆಂದು ತಿಳಿಸಿದರು.

ಶಾಲೆಯ ಕಾರ್ಯದರ್ಶಿಗಳಾದ ಎಂ. ಕಾರ್ತಿಕ್ ರವರು ಶ್ರೀ ಕೃಷ್ಣನ ಬಾಲ ಲೀಲೆಗಳನ್ನು ವರ್ಣಿಸುತ್ತಾ ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ಶಿಕ್ಷಕಿ ಕುಮಾರಿ ರಮ್ಯಾ ಪ್ರಾರ್ಥಿಸಿದರು. ಶಿಕ್ಷಕಿ ಶ್ರೀಮತಿ ಮಾನಸ ಸ್ವಾಗತಿಸಿದರು. ನಿರೂಪಣೆಯನ್ನು ಶಿಕ್ಷಕಿ ಶ್ರೀಮತಿ ಮಮಜಿಗಣಿ ಹಾಗೂ ಶ್ರೀಮತಿ ಕವಿತಾರವರು ನಡೆಸಿಕೊಟ್ಟರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...