Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನನ್ನ ರುಂಡ ಕೂಡ ಕಾಂಗ್ರೆಸ್ ಗೆ ಹೋಗಲ್ಲ : ರಮೇಶ್ ಜಾರಕಿಹೊಳಿ

---Advertisement---

ಬೆಳಗಾವಿ: ಲೋಕಸಭಾ ಚುನಾವಣೆಗಾಗಿ ಆಪರೇಷನ್ ಹಸ್ತದ ಸದ್ದು ಜೋರಾಗಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ‌ ಕಾಂಗ್ರೆಸ್ ತೊರೆದವರು ಮತ್ತೆ ಕಾಂಗ್ರೆಸ್ ಗೆ ಬರಲಿದ್ದಾರೆ ಎನ್ನಲಾಗಿದೆ. ಆದ್ರೆ ರಮೇಶ್ ಜಾರಕಿಹೊಳಿ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದು, ನನ್ನ ರುಂಡ ಕೂಡ ಕಾಂಗ್ರೆಸ್ ಗೆ ಹೋಗಲ್ಲ ಎಂದಿದ್ದಾರೆ.

ಆಪರೇಷನ್ ಹಸ್ತ ಇದು ಮಹಾನಾಯಕನ ಕುತಂತ್ರ. ಆಪರೇಷನದ ಹಸ್ತ ಮಾಡುವವರು ಮತ್ತು ಹೋಗುವವರು ಕುತಂತ್ರಿಗಳು. ನಾವೂ ಹೋಗುವಾಗ ಒಂದು ಅರ್ತ್ ಇತ್ತು. ನಮಗೆ ಆಗ ಅನ್ಯಾಯವಾಗಿತ್ತು. ಕಾಂಗ್ರೆಸ್ ನ 20-35 ಹಿರಿಯ ಶಾಸಕರು ಮುಂದಿನ ನಿರ್ಣಯ ಕೈಗೊಳ್ಳಲು ಸಭೆ ಸೇರುವವರಿದ್ದರು. ಅದನ್ನು ಮರೆಮಾಚಲು ಆಪರೇಷನ್ ಹಸ್ತ ಎಂಬ ಕುತಂತ್ರವನ್ನು ಮಹಾನಾಯಕ ಮಾಡುತ್ತಿರೋದು ಅಂತ ಆಪರೇಷನ್ ಹಸ್ತದ ಮೂಲ ಉದ್ದೇಶವನ್ನು ತಿಳಿಸಿದ್ದಾರೆ.

ನನಗೆ ಎಲ್ಲಾ ಗೊತ್ತಿದೆ. ಇದು ಆಪರೇಷನ್ ಹಸ್ತ ಅಲ್ಲ. ಆಪರೇಷನ್ ಹಸ್ತ ಅಂತ ಪೋಸ್ ಕೊಡುವ ನಾಯಕ ತಮ್ಮ ಪಕ್ಷಕ್ಕೆ ಅವಮಾನವಾಗುತ್ತೆ ಅಂತ ನಾಟಕವಾಡುತ್ತಿದ್ದಾನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ಬಳಿಕ ಎಲ್ಲರೂ ಸೇರುವವರಿದ್ದರು. ಅವರು ಬಿಜೆಪಿಗೆ ಬರುತ್ತಿದ್ದಾರೆ, ಆ ನಾಯಕರು ಹೆದರಲಿ ಎಂದು ನಾಟಕವಾಡುತ್ತಿದ್ದಾರೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment