ಚಂದ್ರಯಾನ 3 ಸಕ್ಸಸ್ ಆದ ಬೆನ್ನಲ್ಲೇ ಇಂದು ಸೂರ್ಯನತ್ತ ಇಸ್ರೋ ಪಯಣ ಬೆಳಸಿದೆ. ಇದೇ ಮೊದಲ ಬಾರಿಗೆ ಇಸ್ರೋ ಸೂರ್ಯನ ನಭಕ್ಕೆ ಸಂಶೋದನೆಗಾಗಿ ಪಯಣ ಬೆಳೆಸಿರುವುದು. ಇಡೀ ಭಾರತೀಯರ ಚಿತ್ತ ಇಂದು ಇಸ್ರೋದತ್ತ ನೆಟ್ಟಿದೆ.
ಬಹುನಿರೀಕ್ಷಿತ ಸೂರ್ಯಯಾನ ಇಂದು ಆಂಧ್ರದ ಶ್ರೀಹರಿಕೋಟಾದಿಂದ ಸೂರ್ಯಯಾನ ಉಪಗ್ರಹ ಉಡಾವಣೆಯಾಗಿದೆ. ಆದಿತ್ಯ L-1 ಹೊತ್ತು ಸಾಗಿದೆ. ಇದೇ ಮೊದಲ ಬಾರಿಗೆ ಸೂರ್ಯನತ್ತ ಇಸ್ರೋ ಪಯಣ ಬೆಳೆಸಿದೆ. 7 ಪೆಲೋಡ್ ಹೊತ್ತು ನಭಕ್ಕೆ ಹೊರಟಿದ್ದಾನೆ ಆದಿತ್ಯ.
ಗ್ರಹಣದ ವೇಳೆ ಸೂರ್ಯನ ಅಧ್ಯಯನ ಮಾಡಲಾಗುತ್ತದೆ. ಸೂರ್ಯನ ಅಧ್ಯನಕ್ಕೆ 7 ಪೆಲೋಡ್ ಗಳನ್ನು ಅಳವಡಿಕೆ ಮಾಡಲಾಗಿದೆ. ಪೆಲೋಡ್ ತಯಾರಿಸಿರುವುದು ಬೆಂಗಳೂರು ಮೂಲದ IIA ಸಂಸ್ಥೆ. ಸೂರ್ಯನ ತಾಪಮಾನ, ಆಯಸ್ಕಾಂತೀಯ ಗುಣಗಳನ್ನು ಅಧ್ಯಯನ ಮಾಡಲು ಈ ಉಡಾವಣೆ ಮಾಡಲಾಗಿದೆ. 15 ಕಿಲೋ ಮೀಟರ್ ಯಾನ ಬೆಳೆಸಿದ ಆದಿತ್ಯ. ಈಗಾಗಲೇ 1,2 ನೇ ನೌಕೆಯಿಂದ ಬೇರ್ಪಟ್ಟಿದೆ.