Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

10 ದೇವಸ್ಥಾನ ನಿರ್ಮಿಸುವ ಬದಲು ಒಂದು ಶಾಲೆ ತೆರೆ ಎಂಬ ಹಿರಿಯರ ಮಾತಿನಂತೆ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದ್ದೇನೆ : ಶಾಸಕ ಟಿ. ರಘುಮೂರ್ತಿ

Facebook
Twitter
Telegram
WhatsApp

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳೆಗೆರೆ, ಮೊ : 9739875729

ಸುದ್ದಿಒನ್, ಚಳ್ಳಕೆರೆ, ಆ.31 : 10 ದೇವಸ್ಥಾನ ನಿರ್ಮಿಸುವ ಬದಲು ಒಂದು ಶಾಲೆ ತೆರೆ ಎಂದು ಹಿರಿಯರು ಹೇಳಿದ್ದಾರೆ. ಅದರಂತೆ ನಾನು ನಮ್ಮ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದ್ದೇನೆ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.

ತಾಲ್ಲೂಕಿನ ಹೆಗ್ಗೆರೆ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಸರ್ಕಾರಿ ಶಾಲೆಗೆ  ಸಿಎಸ್ ಆರ್ ಯೋಜನೆಯಡಿ ಪ್ರಕಾಶ್ ಸ್ಪಾಂಜ್ ಐರನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವತಿಯಿಂದ 43 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಕೊಠಡಿ ಹಾಗೂ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಅವರು ಮಾತನಾಡಿದರು.

ನಗರ ಹಾಗೂ ಗ್ರಾಮೀಣ ಭಾಗದ ಶಿಥಿಲಗೊಂಡ ಶಾಲೆಗಳ ಕೊಠಡಿಗಳನ್ನು ಹೊಸ ಕೊಠಡಿಗಳನ್ನು ನಿರ್ಮಿಸಿ ಕೊಟ್ಟಿದ್ದೇನೆ. ಪ್ರಕಾಶ ಪ್ಲಾಂಜ್ ಐರನ್ ಪ್ರೈವೇಟ್ ಲಿಮಿಟೆಡ್ ಕಂಪನಿ ಈಗಾಗಲೇ ಹಲವು ಶಾಲೆಗಳ ಕಟ್ಟಡ ಕಾಮಗಾರಿಗಳನ್ನು ನಿರ್ಮಾಣ ಮಾಡುತ್ತಿದೆ. ಅಷ್ಟೇ ಅಲ್ಲದೆ ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಕಲ್ಪಿಸಲು ಟ್ಯಾಬ್ ವಿತರಣೆ ಮಾಡಿತ್ತು .

ಸರ್ಕಾರಿ ಆಸ್ಪತ್ರೆಗೆ 100 ಬೆಡ್ ಹಾಗೂ ಆಕ್ಸಿಜನ್ ಸಿಲಿಂಡರ್ ಗಳನ್ನು ವ್ಯವಸ್ಥೆ ಮಾಡಲಾಗಿತ್ತು ಇನ್ನು ಅನೇಕ ಸಾಮಾಜಿಕ ಕಾರ್ಯಗಳನ್ನ ಈ ಕಂಪನಿ ಮಾಡಿದೆ ಇನ್ನು ಈ ಭಾಗದಲ್ಲಿ ಸೋಲಾರ್ ಕಂಪನಿಗಳು ಇರುವುದರಿಂದ ಇಂತಹ ಅಭಿವೃದ್ಧಿಗೆ ಸಿ ಎಸ್ ಆರ್ ಫಂಡ್ ಬಳಕೆ ಮಾಡಬೇಕಿದೆ ಎಂದರು.

ಶಾಲಾ ವಿದ್ಯಾರ್ಥಿಗಳಿಗೆ ಕಾರ್ಖಾನೆ ವತಿಯಿಂದ ಸ್ಕೂಲ್ ಬ್ಯಾಗ್,ವಾಟರ್ ಬಾಟಲ್ ವಿತರಿಸಿದ್ದು, ಈ ಕಂಪನಿಗೆ ಬರುವ ಲಾಭದ ಹಣದಿಂದ  ಈರೀತಿ ಶೈಕ್ಷಣಿಕವಾಗಿ ಸಮಾಜ‌ಸೇವೆ ಮಾಡ್ತಿರೋದು ಶ್ಲಾಘನೀಯ‌ ಎಂದು‌ಶಾಸಕ ರಘುಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಪ್ರಕಾಶ ಪ್ಲಾಂಜ್ ಐರನ್ ಕಂಪನಿಯ ಜನರಲ್ ಮ್ಯಾನೇಜರ್ ರಾಜೇಂದ್ರ ಕುಮಾರ್ ಮಾತನಾಡಿ ,ನಮ್ಮ ಕಂಪನಿ ಕುಡಿಯುವ ನೀರು, ಶಿಕ್ಷಣ, ರಸ್ತೆ ನಿರ್ಮಾಣ, ಶಿಕ್ಷಣ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು.

ಪ್ರಕಾಶ ಪ್ಲಾಂಜ್ ಐರನ್ ಕಂಪನಿಯ ವ್ಯವಸ್ಥಾಪಕ ಆರ್. ರುದ್ರಪ್ಪ ಮಾತನಾಡಿ, ಶಾಲೆ ಕೊಠಡಿ ನಿರ್ಮಾಣ ಅಂಗನವಾಡಿ ಕಟ್ಟಡ ನಿರ್ಮಾಣ ಹಾಗೂ ಅಂಗನವಾಡಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ಹಾಗೂ ನೀರಿನ ಬಾಟಲಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಕಬ್ಬಿಣದ ಬೆಂಚ್ ಹಾಗೂ ಸ್ಮಾರ್ಟ್ ಕ್ಲಾಸ್ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲಾಗಿದ್ದು ಇಂದು ಉದ್ಘಾಟನೆ ಗೊಂಡಿದೆ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಲು ನಮ್ಮ ಕಂಪನಿ ಸದಾ ಸಿದ್ಧವಿದೆ ಎಂದರು.

ಈ ಸಂದರ್ಭದಲ್ಲಿ ಬಿಇ ಓ ಕೆ.ಎಸ್. ಸುರೇಶ್ ಮಾತನಾಡಿ ನಮ್ಮ ಶಾಸಕರು ಶೈಕ್ಷಣಿಕ ಅಭಿವೃದ್ಧಿಗೆ ಸಾಕಷ್ಟು ಸಹಕಾರ ನೀಡುತ್ತಿದ್ದು ಇದರ ಫಲವಾಗಿ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ. ಶಾಸಕರು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಉತ್ತಮವಾದ ಶಾಲಾ ಕೊಠಡಿಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ಹೆಗ್ಗೆರೆ ಆನಂದಪ್ಪ ಮಾತನಾಡಿ 1960 ರಲ್ಲಿ ಶಿಕ್ಷಣಪ್ರೇಮಿ ಬೆಳಗೆರೆ ಕೃಷ್ಣಶಾಸ್ತ್ರಿಯವರು‌ಕಟ್ಟಿಸಿದ್ದ  ಈ ಶಾಲೆ ಸಂಪೂರ್ಣ ಶಿಥಿಲಾವಸ್ತೆಯಲ್ಲಿತ್ತು. ಹೀಗಾಗಿ ವಿದ್ಯಾರ್ಥಿಗಳು ಪ್ರಾಣಭಯದಲ್ಲಿ ಮರದ ನೆರೆಳಿನಲ್ಲಿ  ಪಾಠ ಕೇಳಬೇಕಿತ್ತು. ಹೀಗಾಗಿ ಇಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ನೂತನ ಶಾಲಾ  ಕೊಠಡಿಗಳನ್ನು  ಪ್ರಕಾಶ್ ಸ್ಪಾಂಜ್ ಐರನ್ ಪವರ್ ಲಿಮಿಟೆಡ್  ಕಂಪನಿ ನಿರ್ಮಾಣ‌ಮಾಡಿದೆ ಎಂದರು.

ಅವರ ಶಮದ ಫಲ ಇಲ್ಲಿ ಶಾಲಾ ಕೊಠಡಿ ನಿರ್ಮಾಣಗೊಂಡಿದ್ದವು ನಾವು ಈ ಗ್ರಾಮದವರು ಅವರನ್ನು ಸ್ಮರಿಸಬೇಕಿದೆ ಎಂದರು.

ನಗರಸಭೆ ಸದಸ್ಯ ವೀರಭದ್ರಯ್ಯ ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ ಟಿ ಶಶಿಧರ್. ಸಾಣಿಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷ ನಾಗರಾಜ್, ಹಾಗೂ ಗ್ರಾಮ ಪಂಚಾಯತಿ ಸದಸ್ಯರು,ಪ್ರಕಾಶ್ ಸ್ಪಾಂಜ್  ಕಂಪನಿಯ ‌ವ್ಯವಸ್ಥಾಪಕರಾದ‌  ಮಂಜುನಾಥ್,ರುದ್ರಪ್ಪ,ನಾಗರಾಜ್ ನಾಯಕ್ ಚಂದ್ರಶೇಖರ್ ಮಂಜುನಾಥ್ ಹಾಗೂ ಶಾಲಾ ಮುಖ್ಯ ಶಿಕ್ಷಕ ದಾದಾಪೀರ್ ಶಿಕ್ಷಕಿ ಜಯಮ್ಮ ಬಿ ಎಲ್ ಜಾನಕಿ ಗ್ರಾಮಸ್ಥರು ವಿದ್ಯಾರ್ಥಿಗಳು ಇದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸತತ 5ನೇ ದಿನವೂ ಏರಿಕೆಯತ್ತ ಚಿನ್ನದ ದರ : ಇಂದು ಎಷ್ಟಿದೆ ನೋಡಿ..!

ಬೆಂಗಳೂರು: ಚಿನ್ನದ ದರ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಅದರಲ್ಲೂ ಸತತ ಐದನೇ ದಿನಕ್ಕೂ ಏರಿಕೆಯತ್ತಲೇ ಮುಖ ಮಾಡಿದೆ. ದೀಪಾವಳಿಯ ಬಳಿಕ ಕಂಚ ಇಳಿಕೆ ಕಂಡು ಎಲ್ಲರಿಗೂ ಖುಷಿ ಕೊಟ್ಟಿದ್ದ ಚಿನ್ನ ಶಾಕ್ ಆಗಿವಷ್ಟು

ರಕ್ತದಾನ ಮಾಡುವ ಗುಣ ಬೆಳೆಸಿಕೊಳ್ಳಿ : ಶಿವಲಿಂಗಾನಂದ ಸ್ವಾಮೀಜಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ನ. 23 : ರಕ್ತವನ್ನು ಕೃತಕವಾಗಿ ತಯಾರು ಮಾಡಲು ಬರುವುದಿಲ್ಲ, ಅಲ್ಲದೆ ಯಾವ ಪ್ರಾಣಿಗಳ ರಕ್ತವನ್ನು

ಸೆಡೆಗಳು ಎಂದಿದ್ದ ರಜತ್ ಗೆ ಬೆವರಿಳಿಸಿದ ಬಾದ್ ಶಾ..!

ಬಿಗ್ ಬಾಸ್ ಕನ್ನಡ ಸೀಸನ್ 11ಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ರಜತ್ ಹಾಗೂ ಶೋಭಾ ಶೆಟ್ಟಿ ಬಂದಿದ್ದಾರೆ. ರಜತ್ ಆರಂಭದಿಂದಾನು ಒಳ್ಳೆ ರೌಡಿಸಂ ತೋರಿಸುವ ರೀತಿಯೇ ಆಟವಾಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರಬೇಕು

error: Content is protected !!