ಸುದ್ದಿಒನ್,ಚಿತ್ರದುರ್ಗ, ಆ.25 : ನಗರದ ವಿದ್ಯಾನಗರದ ವಾಸಿ ಎಸ್.ಆರ್.ಮೋಹನ್ ರೆಡ್ಡಿ(ಲಾಲಣ್ಣ)(79)ಶುಕ್ರವಾರ ಮಧ್ಯಾಹ್ನ ನಿಧನರಾದರು.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ದೀರ್ಘಕಾಲದಿಂದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.
ಮೃತರು ತಮ್ಮ ಪುತ್ರ ಮೆದೇಹಳ್ಳಿ ಗ್ರಾಪಂ ಸದಸ್ಯ ರಮೇಶ್ ಮೊತ್ಕೂರು, ಮೂವರು ಪುತ್ರಿಯರು ಸೇರಿದಂತೆ ನಾಲ್ವರು ಮಕ್ಕಳು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ನಾಳೆ (ಶನಿವಾರ) ಬೆಳಗ್ಗೆ 11 ಗಂಟೆಗೆ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕುಟುಂಬದವರ ಮೊಬೈಲ್ ಸಂಖ್ಯೆ :
9448130572