ನವದೆಹಲಿ: ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯಂದು ಸಾನ್ಯ ಜನರಿಗೆ ಭರ್ಜರಿ ಆಫರ್ ಘೋಷಣೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ಈ ಹೊಸ ಯೋಜನೆಯಲ್ಲಿ ಸಾಮಾನ್ಯ ಜನರಿಗೆ ಹಣ ಸಿಗಲಿದೆ. ವಿಶ್ವಕರ್ಮ ಯೋಜನೆಯನ್ನು ಘೋಷಣೆ ಮಾಡಿದ್ದು, ಈ ಮೂಲಕ ಯಾರಿಗೆಲ್ಲಾ ಹಣ ಸಿಗಲಿದೆ ಎಂಬ ಮಾಹಿತಿ ಇಲ್ಲಿದೆ.
ವಿಶ್ವಕರ್ಮ ಯೋಜನೆಯೂ ವಿಶ್ವಕರ್ಮ ಪೂಜೆಯ ದಿನ ಆರಂಭವಾಗಲಿದೆ. ಈ ಮೂಲಕ ಶ್ರಮಿಕರು ಮತ್ತು ದಿನಗೂಲಿ ಕಾರ್ಮಿಕರಿಗೆ ಈ ಯೋಜನೆಯಿಂದ ಹಣ ಸಿಗಲಿದೆ. ಈ ಮೂಲಕ ಒಬಿಸಿ ಕಲಾವಿದರ ಅಭಿವೃದ್ಧಿಗಾಗಿ ಸರ್ಕಾರ 14 ಸಾವಿರ ಕೋಟಿ ಅನುದಾನ ನೀಡಲಿದೆ.
ಕಾಲೋನಿಗಳು, ಗುಡಿಸಲುಗಳು, ಬಾಡಿಗೆ ಮನೆಗಳಲ್ಲಿ ವಾಸಿಸುವ ಜನರಿಗೆ ಕೇಂದ್ರವು ಸುಲಭ ಷರತ್ತುಗಳ ಮೇಲೆ ಸಾಲವನ್ನು ನೀಡುತ್ತದೆ. ಬಡ ಕಾರ್ಮಿಕ ವರ್ಗದ ಜನರಿಗೆ ಸುಲಭ ಷರತ್ತುಗಳಲ್ಲಿ ಸಾಲ ಪಡೆಯಲು ಸರ್ಕಾರ ವ್ಯವಸ್ಥೆ ಮಾಡುತ್ತದೆ. ಈ ಯೋಜನೆ ಸೆಪ್ಟೆಂಬರ್‌ನಲ್ಲಿ ಅಂದರೆ ಮುಂದಿನ ತಿಂಗಳು ಆರಂಭವಾಗಲಿದೆ. ಒಟ್ಟಾರೆಯಾಗಿ, ಸರ್ಕಾರವು 13,000 ಕೋಟಿಯಿಂದ 15,000 ಕೋಟಿಗೆ ಸಹಾಯ ಮಾಡುತ್ತದೆ. ಬಟ್ಟೆ ತೊಳೆಯುವವರು, ಕ್ಷೌರಿಕರು, ಅಕ್ಕಸಾಲಿಗರು ಮುಂತಾದ ಹಿಂದುಳಿದ ವರ್ಗದ ಜನರು ಈ ಹೊಸ ಯೋಜನೆಯ ಪ್ರಯೋಜನವನ್ನು ಪಡೆಯುತ್ತಾರೆ