ಕಳೆದ ಕೆಲವು ದಿನಗಳಿಂದ ಟೊಮೋಟೊ ಬೆಲೆಯಲ್ಲಿ ಏರಿಕೆಯಾಗುತ್ತಲೆ ಒತ್ತು. ಇನ್ನು ಸಾಂಬಾರ್ ಗೆ ಎರಡ್ಮೂರು ಬಳಸುವ ಜಾಗದಲ್ಲಿ ಒಂದು ಬಳಕೆ ಮಾಡುವ ಸ್ಥಿತಿಗೆ ಬಂದು ನಿಂತಿದ್ದರು. ಹೀಗೆ ಮುಂದುವರೆದರೆ ಟಮೋಟೋ ಆಸೆ ಬಿಡಬೇಕಾಗುತ್ತೇ ಎಂದೇ ಮಹಿಳೆಯರು ನಿರ್ಧಾರ ಮಾಡಿದ್ದರು. ಆದರೆ ಈಗ ಸಮಾಧಾನಕರವಾದಂತ ವಿಚಾರವೊಂದು ಕಿವಿಗೆ ಬಿದ್ದಿದೆ. ಅದುವೆ ಟೊಮೋಟೋ ಬೆಲೆಯಲ್ಲಿ ಇಳಿಕೆಯಾಗಿದೆ.
ಇವತ್ತು ಟಮೋಟೋ ಒಂದು ಕ್ರೇಟ್ 500-800 ಆಗಿದೆ. ಈ ಮೂಲಕ ಒಂದು ಕೆಜಿಗೆ 70 ರೂಪಾಯಿಗೆ ಸಿಗಲಿದೆ. ಇದೊಂದು ಕೊಂಚ ಸಮಾಧಾನವೇ ಸರಿ. ಈ ಮೊದಲು ಒಂದು ಕ್ರೇಟ್ ಗೆ 2500 ಇತ್ತು. ಹೀಗಾಗಿ ಒಂದು ಕೆಜಿ ಟಮೋಟೋ ಬೆಲೆ 150 ರೂಪಾಯಿ ತನಕ ಸಾಗಿತ್ತು.
ಇಂದು ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟಮೋಟೋ ಬೆಲೆ ಇಳಿಕೆಯಾಗಿರುವುದು ಕಂಡು ಬಂದಿದೆ. ಈ ಮೂಲಕ ಇಂದು ಕೊಂಚ ಹೆಚ್ಚಿಗೇನೆ ಟಮೋಟೋ ಸೇಲ್ ಆಗಿದೆ. ಟಮೋಟೋ ಬೆಲೆ ಹೆಚ್ಚಾಗಿದ್ದ ಕಾರಣ, ಸೋಷೊಯಲ್ ಮೀಡಿಯಾದಲ್ಲೆಲ್ಲಾ ಅದರದ್ದೇ ಸುದ್ದಿಯಾಗಿತ್ತು. ರೀಲ್ಸ್ ಗಳಲ್ಲಿ, ಶಾರ್ಟ್ಸ್ ಗಳಲ್ಲಿ, ಸ್ಕಿಟ್ ಗಳಲ್ಲಿಯೂ ಅದರದ್ದೇ ಸುದ್ದಿಯಾಗಿತ್ತು.