ಹಾಸನ: ತೆಲಂಗಾಣದ ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಅವರು ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರ ಮನೆಯಲ್ಲಿ ವಿಶೇಷ ಪೂಜೆ ಮಾಡಿದ್ದಾರೆ. ದೊಡ್ಡ ದೊಡ್ಡ ರಾಜಕಾರಣಿಗಳು, ಸೆಲೆಬ್ರೆಟಿಗಳಿಗೆ ಭವಿಷ್ಯ ಹೇಳುವ ಮೂಲಕ ಖ್ಯಾತಿ ಪಡೆದಿದ್ದಾರೆ ವೇಣುಸ್ವಾಮಿ. ಈ ಬಗ್ಗೆ ಹೆಚ್ ಡಿ ರೇವಣ್ಣ ಅವರು ಪ್ರತಿಕ್ರಿಯೆ ನೀಡಿದ್ದು, ನಾನ್ಯಾಕೆ ತೆಲಂಗಾಣಕ್ಕೆ ಹೋಗಲಿ. ನನಗೆ ಅವರ್ಯಾರು ಅಂತಾನೇ ಗೊತ್ತಿಲ್ಲ. ಬಂದ್ರು, ಪೂಜೆ ಮಾಡ್ತೀನಿ ಅಂದ್ರು ಮಾಡಿ ಅಂದೆ ಎಂದಿದ್ದಾರೆ.
ನಾವೂ ಎಲ್ಲೂ ಹೋಗಿಲ್ಲ. ವಿಶೇಷ ಪೂಜೆಯನ್ನು ಮಾಡಿಸಿಲ್ಲ. ಕೆಲವು ದೊಡ್ಡ ದೊಡ್ಡ ಲೀಡರ್ ಗಳಿಗೆ ಆಶೀರ್ವಾದ ಮಾಡಿದ್ದೀನಿ. ನಿಮಗೂ ಮಾಡ್ತೀನಿ ಅಂದ್ರು. ಮಾಡಿ ಅಂದೆ. ನಾನ್ಯಾಕೆ ವಿಶೇಷ ಪೂಜೆ ಮಾಡಿಸಲಿ. ಅವರೇ ಬಂದ್ರು, ಪೂಜೆ ಮಾಡಿ, ಆಶೀರ್ವಾದ ಮಾಡಿ ಹೋದ್ರು.
ನಾನು ಹೊಳೆನರಸೀಪುರದ ಲಕ್ಷ್ಮೀನರಸಿಂಹ, ಮಾವಿನಕೆರೆ ರಂಗನಾಥಸ್ವಾಮಿ, ನಾವು ನಂಬಿರುವುದೇ ಹರದನಹಳ್ಳಿ ಈಶ್ವರ ಈ ಮೂರು ದೇವರು ದೇವೇಗೌಡರನ್ನು ಈ ಮಟ್ಟಕ್ಕೆ ತಂದಿದೆ. ನಮ್ಮನ್ನು ಈ ಮಟ್ಟಕ್ಕೆ ತಂದಿದೆ. ನನ್ನ ಮಕ್ಕಳಿಗೂ ಆಶೀರ್ವಾದ ಮಾಡಿದೆ. ನಂಬಿರೋದು ಶೃಂಗೇರಿ ಜಗದ್ಗುರುಗಳು, ಭಾರತಿತೀರ್ಥ ಸ್ವಾಮಿಗಳು, ವಿದ್ಯಾತೀರ್ಥ ಸ್ವಾಮಿಗಳು. ಇನ್ನು ಸುತ್ತೂರು ಮಠದ ಸ್ವಾಮೀಜಿ, ನಮ್ಮ ಆದಿಚುಂಚನಗಿರಿ ಮಠದ ಸ್ವಾಮಿಗಳು ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.















