Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಕಾರು ಹೊಂದಿರುವವರಿಗೆ ಬಿಪಿಎಲ್ ಕಾರ್ಡ್ ನೀಡುವುದಿಲ್ಲ : ಸಚಿವ ಕೆ ಎಚ್ ಮುನಿಯಪ್ಪ

---Advertisement---

 

ಬೆಂಗಳೂರು: ಬಿಪಿಎಲ್ ಕಾರ್ಡ್ ನಿಜವಾದ ಫಲಾನುಭವಿಗಳಿಗೆ ಸಿಗದ, ದೊಡ್ಡಮಟ್ಟದ ಆಸ್ತಿ ಇರುವವರ ಬಳಿಯೂ ಇದೆ ಎಂಬ ಆರೋಪ ನಿನ್ನೆ ಮೊನ್ನೆಯದ್ದಲ್ಲ. ಕಾರ್ಡ್ ಗಳ ಪರಿಶೀಲನೆ ಮಾಡಲಾಗುವುದು ಎಂದು ಸಾಕಷ್ಟು ಬಾರಿ ಸರ್ಕಾರ ಕೂಡ ಹೇಳಿದೆ. ಇದೀಗ ಕಾಂಗ್ರೆಸ್ ಸರ್ಕಾರದಲ್ಲಿ ಆಹಾರ ಸಚಿವರಾಗಿರುವ ಕೆ ಎಚ್ ಮುನಿಯಪ್ಪ ಈ ಬಗ್ಗೆ ಮತ್ತೊಮ್ಮೆ‌ ಮಾತನಾಡಿದ್ದಾರೆ.

ಸ್ವಂತ ಕಾರು ಇದ್ದರೆ ಅಂದ್ರೆ ವೈಟ್ ಬೋರ್ಡ್ ಕಾರು ಇದ್ದರೆ ಅಂತವರಿಗೆ ಬಿಪಿಎಲ್ ಕಾರ್ಡ್ ನೀಡುವುದಿಲ್ಲ. ಎಲ್ಲೋ ಬೋರ್ಡ್ ಇದ್ದವರಿಗೆ ಅನುಮತಿ ನೀಡಲಾಗುತ್ತದೆ. ಯಾಕಂದ್ರೆ ಅವರು ಯಾವುದೋ ಕಮಿಂಟ್ಮೆಂಟ್ ನಲ್ಲೊರುತ್ತಾರೆ, ಬಾಡಿಗೆ ಕಟ್ಟುತ್ತಾರೆ. ಅವರಿಗೆ ಅನುಮತಿ ಇದೆ. ಇನ್ನು ಕೆಲವರ ಬಳಿ ಬಿಪಿಎಲ್ ಕಾರ್ಡ್ ಇರುತ್ತದೆ. ಅವರಿಗೆ ಅದರ ಅಗತ್ಯವೇ ಇರುವುದಿಲ್ಲ. ಆದರೂ ಕಾರ್ಡ್ ಇಟ್ಟುಕೊಂಡಿರುತ್ತಾರೆ. ಆ ರೀತಿಯ ಪ್ರಕರಣವನ್ನು ಸೂಕ್ತ ತನಿಖೆ ನಡೆಸುವುದಕ್ಕೆ ಹೇಳಿದ್ದೇವೆ ಎಂದಿದ್ದಾರೆ.

ಇನ್ನು ಈ ಹಿಂದೆ ಆಹಾರ ಸಚಿವರಾಗಿದ್ದ ಉಮೇಶ್ ಕತ್ತಿ ಅವರು ಕೂಡ ಬೈಕ್, ಪ್ರಿಡ್ಜ್ ಇದ್ದವರಿಗೆ ಬಿಪಿಎಲ್ ಕೊಡುವ ಅಗತ್ಯವಿಲ್ಲ ಎಂದಿದ್ದರು. ಇದೀಗ ಕಾರು ಇದ್ದವರಿಗೆ ಕೊಡಲು ಆಗುವುದಿಲ್ಲ ಎನ್ನುತ್ತಿದ್ದಾರೆ. ಇದರ ಜೊತೆಗೆ ಈಗಾಗಲೇ 1 ಕೋಟಿ ಕುಟುಂಬಗಳಿಗೆ ಹಣ ಹಾಕಿದ್ದೇವೆ. ಬ್ಯಾಂಕ್ ಗಳ ಮೂಲಕ
ಒಬ್ಬ ವ್ಯಕ್ತಿಗೆ ಮೊದಲೇ ನಿರ್ಧರಿಸಿದಂತೆ ಆ ಹಣ ತಲುಪಿಸಿದ್ದೇವೆ. ಹೊಸ ಪಡಿತರ ಚೀಟಿ ಪಡೆಯಲು ಅನುಮತಿ‌ ನೀಡಿದ್ದೇವೆ. ಶೀಘ್ರದಲ್ಲಿ ಆ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...