ಸೌತ್ ಸುಂದರಿ ಸಮಂತಾ ಇತ್ತಿಚೆಗಂತು ಸಾಕಷ್ಟು ಸುದ್ದಿಯಲ್ಲಿದ್ದಾರೆ. ಸದ್ಯ ತಮಗೆ ಕಾಡುತ್ತಿರುವ ಮಯೋಸೈಟೀಸ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದಕ್ಕಾಗಿ ವಿದೇಶಕ್ಕೆ ಹಾರಲು ಹೊರಟಿದ್ದಾರೆ. ಇದಕ್ಕೂ ಮುನ್ನ ಸಮಂತಾ ಭಾರತದಲ್ಲಿಯೇ ಪ್ರಕೃತಿ ಚಿಕಿತ್ಸೆಗೂ ಒಳಗಾಗಿದ್ದರು.
ಸಿನಿಮಾ, ಪರ್ಸನಲ್ ಲೈಫ್ ನಡುವೆ ಒಂದಷ್ಟು ರಿಸ್ಕ್ ಗಳನ್ನು ತೆಗೆದುಕೊಂಡಿರುವ ಸಮಂತಾ ವಿಚಾರವಾಗಿ ಸದ್ಯ ಬೇರೆಯದ್ದೇ ಸುದ್ದಿ ಓಡಾಡುತ್ತಿದೆ. ಅದುವೆ ಸಮಂತಾ ಕೋಟಿ ಕೋಟಿ ಸಾಲ ಮಾಡಿದ್ದಾರೆ ಎಂದು.ಒಂದೆರಡು ಕೋಟಿ ಅಲ್ಲ ಬರೋಬ್ಬರಿ 25 ಕೋಟಿ.
ಸಮಂತಾ ಹೇಳಿಕೇಳಿ ದಕ್ಷಿಣ ಸಿನಿಮಾ ರಂಗದಲ್ಲಿ ಬಹುಬೇಡಿಕೆ ಇರುವಂತಹ ನಟಿ. ದೊಡ್ಡ ಮೊತ್ತದ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ. ಆದರೆ ಈ ಮಧ್ಯೆ ಹರಿದಾಡುತ್ತಿರುವ ಸುದ್ದಿಯೆಂದರೆ ಸಮಂತಾ ತಮ್ಮ ಚಿಕಿತ್ಸೆಗಾಗಿ ಕೋಟಿ ಕೋಟಿ ಸಾಲ ಪಡೆದಿದ್ದಾರಂತೆ. ಟ್ರೀಟ್ಮೆಂಟ್ ಗಾಗಿ ಒಬ್ಬ ಸ್ಟಾರ್ ನಟನಿಂದ 25 ಕೋಟಿ ಸಾಲ ಪಡೆದಿದ್ದಾರಂತೆ ಸಮಂತಾ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.
















