Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಆಟೋ ಚಾಲಕನ ಮೇಲೆ ಹಲ್ಲೆ ; ಆಸ್ಪತ್ರೆಗೆ ದಾಖಲು

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, (ಅ.19) : ಜಿಲ್ಲೆಯ ಮೊಳಕಾಲ್ಮೂರಿನಲ್ಲಿ ಯುವಕರ ಗುಂಪೊಂದು ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ದಸರಾ ಹಬ್ಬದ ದಿನ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಆಟೋ ಚಾಲಕ ಭೀಮಣ್ಣ ಎಂಬಾತನ ಮೇಲೆ ಕೃಷ್ಣ, ಅಜಯ್, ವರುಣ್, ಸುಪ್ರೀತ್ ಸೇರಿದಂತೆ ಇತರೆ ಯುವಕರ ಗುಂಪೊಂದು ಸಿನಿಮೀಯ ಶೈಲಿಯಲ್ಲಿ ಆಟೋವನ್ನು ಹಿಂಬಾಲಿಸಿ, ಸರ್ಕಾರಿ ಶಾಲಾ ಆವರಣದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಆಟೋ ಚಾಲಕ ಭೀಮಣ್ಣ ಗಂಭೀರವಾಗಿ ಗಾಯಗೊಂಡು  ಬಳ್ಳಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಹಿಂದೆ ಅಜಯ್, ಭೀಮಣ್ಣ ನಡುವೆ ಜಗಳ ನಡೆದಿತ್ತು. ಹಳೆ ವೈಷಮ್ಯ ಹಿನ್ನೆಲೆ ಈ ದಾಳಿ ನಡೆದಿದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಮೊಳಕಾಲ್ಮೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹಿರಿಯೂರು | ಬೈಕ್ ಅಪಘಾತ, ಸ್ಥಳದಲ್ಲೇ ಓರ್ವ ಸಾವು..!

ಸುದ್ದಿಒನ್,  ಹಿರಿಯೂರು, ಮೇ. 05 : ನಗರದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಆಲೂರು ಕ್ರಾಸ್ ಚಾನೆಲ್ ಬಳಿ ಸ್ಕೂಟಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡ

ಪ್ರಜ್ವಲ್ ರೇವಣ್ಣ ಜೊತೆ ವಿಡಿಯೋದಲ್ಲಿದ್ದ ಮಹಿಳಾ ಅಧಿಕಾರಿಗಳಿಗೂ ಸಂಕಷ್ಟ : ಎಸ್ಐಟಿಯಿಂದ ನೋಟೀಸ್

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋದಲ್ಲಿ ಸರ್ಕಾರಿ ಅಧಿಕಾರಿಗಳು ಕೂಡ ಇರುವುದು ಗಮನಕ್ಕೆ ಬಂದಿದೆ. ಪೊಲೀಸ್ ಅಧಿಕಾರಿ, ಅರಣ್ಯಾಧಿಕಾರಿ, ಬೆಂಗಳೂರಿನ ಎಇಇ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಅವರಿಗೆಲ್ಲಾ ಟೆನ್ಶನ್ ಶುರುವಾಗಿದೆ. ಎಸ್ಐಟಿ

ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟ : ಮುಖ್ಯಮಂತ್ರಿ ಸಿದ್ದರಾಮಯ್ಯ

  ಬೆಳಗಾವಿ , ಮೇ 05 : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ನೀಡಿದರೆ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಬಿಜೆಪಿ ಹಾಗೂ ಆರ್ ಎಸ್ ಎಸ್ ಹೇಳುತ್ತಿದ್ದು, ಈ ಚುನಾವಣೆ ಎರಡನೇ ಸ್ವಾತಂತ್ರ್ಯ

error: Content is protected !!