ಸುದ್ದಿಒನ್, ಚಿತ್ರದುರ್ಗ, (ಅ.19) : ಜಿಲ್ಲೆಯ ಮೊಳಕಾಲ್ಮೂರಿನಲ್ಲಿ ಯುವಕರ ಗುಂಪೊಂದು ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ದಸರಾ ಹಬ್ಬದ ದಿನ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಆಟೋ ಚಾಲಕ ಭೀಮಣ್ಣ ಎಂಬಾತನ ಮೇಲೆ ಕೃಷ್ಣ, ಅಜಯ್, ವರುಣ್, ಸುಪ್ರೀತ್ ಸೇರಿದಂತೆ ಇತರೆ ಯುವಕರ ಗುಂಪೊಂದು ಸಿನಿಮೀಯ ಶೈಲಿಯಲ್ಲಿ ಆಟೋವನ್ನು ಹಿಂಬಾಲಿಸಿ, ಸರ್ಕಾರಿ ಶಾಲಾ ಆವರಣದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಆಟೋ ಚಾಲಕ ಭೀಮಣ್ಣ ಗಂಭೀರವಾಗಿ ಗಾಯಗೊಂಡು ಬಳ್ಳಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಹಿಂದೆ ಅಜಯ್, ಭೀಮಣ್ಣ ನಡುವೆ ಜಗಳ ನಡೆದಿತ್ತು. ಹಳೆ ವೈಷಮ್ಯ ಹಿನ್ನೆಲೆ ಈ ದಾಳಿ ನಡೆದಿದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೊಳಕಾಲ್ಮೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.