ನವದೆಹಲಿ: ಮಣಿಪುರದ ಘಟನೆ ನಾಚಿಕೆಗೇಡಿನ ಘಟನೆ. ಈ ಘಟನೆ ಸಂಬಂಧ ಪ್ರಧಾನಿ ಮೋದಿ ಸಂಸತ್ ಕಲಾಪದಲ್ಲಿ ಮಾತನಾಡಬೇಕು ಎಂದು ವಿಕ್ಷಗಳು ಪಟ್ಟು ಹಿಡಿದಿವೆ. ಆದ್ರೆ ಅದು ಇನ್ನು ಸಾಧ್ಯವಾಗಿಲ್ಲ. ಅದರ ಜೊತೆಗೆ ಮಣಿಪುರದಲ್ಲಿ ನಡೆದ ಘಟನೆ ಏನು ಎಂಬುದನ್ನು ತಿಳಿಯಲು, ಅಲ್ಲಿನ ವಾಸ್ತವ ಸ್ಥಿತಿಯನ್ನು ಅರಿಯಲು, ಇಂದು ಮಣಿಪುರಕ್ಕೆ ಇಂಡಿಯಾ ಟೀಂ ಭೇಟಿ ನೀಡಲು ಹೊರಟಿದೆ.
16 ರಾಜಕೀಯ ಪಕ್ಷಗಳ 20 ನಾಯಕರು ಮಣಿಪುರಕ್ಕೆ ಹೊರಟಿದ್ದಾರೆ. ಅಧೀರ್ ರಂಜನ್ ಚೌಧರಿ (ಕಾಂಗ್ರೆಸ್), ಗೌರವ್ ಗೊಗಯಿ (ಕಾಂಗ್ರೆಸ್), ರಾಜೀವ್ ರಂಜನ್ (ಜೆಡಿಯು), ಸುಸ್ಮಿತಾ ದೇವ್ (ಟಿಎಂಸಿ), ಕಣಿಮೋಳಿ ಕರುಣಾನಿಧಿ (ಡಿಎಂಕೆ), ಸಂದೋಶ್ ಕುಮಾರ್ (ಸಿಪಿಐ), ಎಎ ರಹೀಮ್ (ಸಿಪಿಐ), ಮನೋಜ್ ಕುಮಾರ್ ಝಾ (ಆರ್ಜೆಡಿ), ಜಾವೆದ್ ಅಲಿ ಖಾನ್ (ಎಸ್ಪಿ), ಮಾಹುವಾ ಮಾಜಿ (ಜೆಎಂಎಂ), ಪಿಪಿ ಮೊಹಮ್ಮದ್ ಫಾಜಿಲ್ (ಎನ್ಸಿಪಿ), ಅನಿಲ್ ಪ್ರಸಾದ್ ಹೆಗಡೆ (ಜೆಡಿಯು), ಇಟಿ ಮೊಹ್ಮದ್ ಬಶೀರ್ (ಐಯುಎಂಎಲ್), ಎನ್ಕೆ ಪ್ರೇಮಚಂದ್ರನ್ (ಆರ್ಎಸ್ಪಿ), ಸುಶೀಲ್ ಗುಪ್ತ (ಆಮ್ ಆದ್ಮಿ ಪಾರ್ಟಿ), ಅರವಿಂದ್ ಸಾವಂತ್ (ಶಿವ ಸೇನಾ), ಡಿ.ರವಿ ಕುಮಾರ್ (ವಿಸಿಕೆ), ಥಿರು ಥೋಲ್ ಥಿರುಮವಲವನ್ (ವಿಸಿಕೆ), ಜಯಂತ್ ಸಿಂಗ್ (ಆರ್ಎಲ್ಡಿ), ಪೌಲೋ ದೇವಿ (ಕಾಂಗ್ರೆಸ್) ಭೇಟಿ ನೀಡಿದ್ದಾರೆ.
ಮಣಿಪುರದ ಕಣಿವೆ, ಗುಡ್ಡಗಾಡು ಪ್ರದೇಶಗಳಿಗೆ ಇವರು ಭೇಟಿ ನೀಡಿ, ಅಲ್ಲಿನ ವಾಸ್ತವ ತಿಳಿಯಲಿದ್ದಾರೆ. ಇಂದು ಮತ್ತು ನಾಳೆ ಮುಂಗಾರು ಅಧಿವೇಶನಕ್ಕೆ ರಜೆ ಇರುವ ಕಾರಣ ಮಣಿಪುರಕ್ಕೆ ಭೇಟಿ ನೀಡಿ, ಅಲ್ಲಿನ ವಾಸ್ತವ ಅರಿತುಕೊಳ್ಳಲಿದ್ದಾರೆ. ಹಿಂಸಾಚಾರ ಸಂತ್ರಸ್ತರಿರುವ ಕ್ಯಾಂಪ್ ಗಳಿಗೆ ಭೇಟಿ, ಮೈತೇಯಿ, ಕುಕಿ ಸಮುದಾಯದ ಜೊತೆಗೆ ಚರ್ಚೆ ನಡೆಸಲಿದ್ದಾರೆ.