ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, (ಜು.28) : ಕಲೆ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಕಲಾ ವೈಭವಗಳ ತವರೂರು ಚಿತ್ರದುರ್ಗದಲ್ಲಿ ಕಲಾ ಗ್ಯಾಲರಿಯನ್ನು ನಿರ್ಮಿಸುವಂತೆ ಜಿಲ್ಲೆಯ ಚಿತ್ರ ಕಲಾವಿದರು ಮತ್ತು ನಗರದ ಕಲಾಭಿಮಾನಿಗಳು ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಪುಷ್ಕರಣಿಗಳು, ನೀರಿನ ಹೊಂಡಗಳು, ಗಿರಿಧಾಮ, ಕೋಟೆ ಕೊತ್ತಲಗಳಿಂದ ಕಂಗೊಳಿಸುವ ಚಿತ್ರ ಚಿತ್ತಾರಗಳು ಕಲಾ ರಸಿಕರನ್ನು ಮೊದಲಿನಿಂದಲೂ ಸೆಳೆದಿರುವ ಐತಿಹಾಸಿಕ ಚಿತ್ರದುರ್ಗದಲ್ಲಿ ಕಲೆಯನ್ನು ಜೀವಂತವಾಗಿರಿಸಬೇಕಾಗಿರುವುದರಿಂದ ಕಲಾ ಗ್ಯಾಲರಿಯನ್ನು ನಿರ್ಮಿಸಬೇಕಾಗಿದೆ. ಇಲ್ಲದಿದ್ದರೆ ನಗರ ಹಾಗೂ ಜಿಲ್ಲೆಯ ಕಲಾವಿದರಿಂದ ರೂಪುಗೊಂಡ ಕಲೆ ಮತ್ತು ಚಿತ್ರಗಳು ಕಾಲಗರ್ಭದಲ್ಲಿ ಗೆದ್ದಲು ಹಿಡಿದು ನಾಮಾವಶೇಷವಾಗಿ ಉಳಿಯಲಿರುವ ಅಪೂರ್ವ ಹಾಗೂ ಅಮೂಲ್ಯ ಚಿತ್ರಗಳನ್ನು ಸಂರಕ್ಷಿಸಿದಂತಾಗುತ್ತದೆಂದು ಜಿಲ್ಲಾಧಿಕಾರಿಯವರಲ್ಲಿ ವಿನಂತಿಸಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು ನಗರದಲ್ಲಿ ಎಲ್ಲಯಾದರೂ ಸ್ಥಳದ ಅವಕಾಶವಿದ್ದರೆ ಖಂಡಿತವಾಗಿ ಕಲಾ ಗ್ಯಾಲರಿಯನ್ನು ನಿರ್ಮಿಸುವುದಾಗಿ ಭರವಸೆ ನೀಡಿದರು.
ಕ್ರಿಯೇಟಿವ್ ವೀರೇಶ್, ನಾಗು ಆರ್ಟ್ಸ್ ನಾಗರಾಜ್, ಡಾ.ಲೋಕೇಶ್ ಅಗಸನಕಟ್ಟೆ, ಡಾ.ಸಂಗೇನಹಳ್ಳಿ ಅಶೋಕ್‍ಕುಮಾರ್, ಮೃತ್ಯುಂಜಯಪ್ಪ, ಆರ್.ವೆಂಕಟೇಶರೆಡ್ಡಿ, ಸಿದ್ದಾಪುರ ಶಿವಕುಮಾರ್, ಟಿ.ತಿಮ್ಮಾರೆಡ್ಡಿ, ಡಿ.ಟಿ.ರಮೇಶ್ ಕಲಾಲೋಕ, ಓ.ಅಂಜಿನಪ್ಪ ಹೊಸರಂಗಾಪುರ, ಜಿ.ಆರ್.ಪಾಪಯ್ಯ, ಕೆ.ಪಿ.ಎಂ.ಗಣೇಶಯ್ಯ, ದಾದು, ಕೆ.ಜಿ.ಮಲ್ಲಿಕಾರ್ಜುನ್, ಬಿ.ಮಾರುತಿ, ಕಿರಣ್, ಕೆ.ರಾಘವೇಂದ್ರ ಕಲಾಲೋಕ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್