Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದಲ್ಲಿ ಕಲಾ ಗ್ಯಾಲರಿ ನಿರ್ಮಿಸಿ : ಕಲಾವಿದರು ಮತ್ತು ಕಲಾಭಿಮಾನಿಗಳಿಂದ ಜಿಲ್ಲಾಧಿಕಾರಿಗೆ ಮನವಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, (ಜು.28) : ಕಲೆ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಕಲಾ ವೈಭವಗಳ ತವರೂರು ಚಿತ್ರದುರ್ಗದಲ್ಲಿ ಕಲಾ ಗ್ಯಾಲರಿಯನ್ನು ನಿರ್ಮಿಸುವಂತೆ ಜಿಲ್ಲೆಯ ಚಿತ್ರ ಕಲಾವಿದರು ಮತ್ತು ನಗರದ ಕಲಾಭಿಮಾನಿಗಳು ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಪುಷ್ಕರಣಿಗಳು, ನೀರಿನ ಹೊಂಡಗಳು, ಗಿರಿಧಾಮ, ಕೋಟೆ ಕೊತ್ತಲಗಳಿಂದ ಕಂಗೊಳಿಸುವ ಚಿತ್ರ ಚಿತ್ತಾರಗಳು ಕಲಾ ರಸಿಕರನ್ನು ಮೊದಲಿನಿಂದಲೂ ಸೆಳೆದಿರುವ ಐತಿಹಾಸಿಕ ಚಿತ್ರದುರ್ಗದಲ್ಲಿ ಕಲೆಯನ್ನು ಜೀವಂತವಾಗಿರಿಸಬೇಕಾಗಿರುವುದರಿಂದ ಕಲಾ ಗ್ಯಾಲರಿಯನ್ನು ನಿರ್ಮಿಸಬೇಕಾಗಿದೆ. ಇಲ್ಲದಿದ್ದರೆ ನಗರ ಹಾಗೂ ಜಿಲ್ಲೆಯ ಕಲಾವಿದರಿಂದ ರೂಪುಗೊಂಡ ಕಲೆ ಮತ್ತು ಚಿತ್ರಗಳು ಕಾಲಗರ್ಭದಲ್ಲಿ ಗೆದ್ದಲು ಹಿಡಿದು ನಾಮಾವಶೇಷವಾಗಿ ಉಳಿಯಲಿರುವ ಅಪೂರ್ವ ಹಾಗೂ ಅಮೂಲ್ಯ ಚಿತ್ರಗಳನ್ನು ಸಂರಕ್ಷಿಸಿದಂತಾಗುತ್ತದೆಂದು ಜಿಲ್ಲಾಧಿಕಾರಿಯವರಲ್ಲಿ ವಿನಂತಿಸಿದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು ನಗರದಲ್ಲಿ ಎಲ್ಲಯಾದರೂ ಸ್ಥಳದ ಅವಕಾಶವಿದ್ದರೆ ಖಂಡಿತವಾಗಿ ಕಲಾ ಗ್ಯಾಲರಿಯನ್ನು ನಿರ್ಮಿಸುವುದಾಗಿ ಭರವಸೆ ನೀಡಿದರು.

ಕ್ರಿಯೇಟಿವ್ ವೀರೇಶ್, ನಾಗು ಆರ್ಟ್ಸ್ ನಾಗರಾಜ್, ಡಾ.ಲೋಕೇಶ್ ಅಗಸನಕಟ್ಟೆ, ಡಾ.ಸಂಗೇನಹಳ್ಳಿ ಅಶೋಕ್‍ಕುಮಾರ್, ಮೃತ್ಯುಂಜಯಪ್ಪ, ಆರ್.ವೆಂಕಟೇಶರೆಡ್ಡಿ, ಸಿದ್ದಾಪುರ ಶಿವಕುಮಾರ್, ಟಿ.ತಿಮ್ಮಾರೆಡ್ಡಿ, ಡಿ.ಟಿ.ರಮೇಶ್ ಕಲಾಲೋಕ, ಓ.ಅಂಜಿನಪ್ಪ ಹೊಸರಂಗಾಪುರ, ಜಿ.ಆರ್.ಪಾಪಯ್ಯ, ಕೆ.ಪಿ.ಎಂ.ಗಣೇಶಯ್ಯ, ದಾದು, ಕೆ.ಜಿ.ಮಲ್ಲಿಕಾರ್ಜುನ್, ಬಿ.ಮಾರುತಿ, ಕಿರಣ್, ಕೆ.ರಾಘವೇಂದ್ರ ಕಲಾಲೋಕ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೆಚ್ಚು ನೀರು ಕುಡಿಯುವುದು ಅಪಾಯಕಾರಿಯೇ ?

ಸುದ್ದಿಒನ್ : ಬೇಸಿಗೆಯಲ್ಲಿ ನಮ್ಮ ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ಅದಕ್ಕಾಗಿಯೇ ವೈದ್ಯರು ಬೇಸಿಗೆಯಲ್ಲಿ ಹೆಚ್ಚು ನೀರು ಕುಡಿಯಲು ಹೇಳುತ್ತಾರೆ. ಹೆಚ್ಚು ನೀರು ಇರುವ ಹಣ್ಣುಗಳು ಮತ್ತು ಆಹಾರಗಳನ್ನು

ಈ ರಾಶಿಯವರು ಆಹಾರ ಪದಾರ್ಥ ಮನೆಯಲ್ಲೇ ತಯಾರಿಸಿ ಮಾರಾಟ ಮಾಡಿ ಉತ್ತಮ ಹಣ ಗಳಿಕೆ ಮಾಡುವಿರಿ

ಈ ರಾಶಿಯವರು ಆಹಾರ ಪದಾರ್ಥ ಮನೆಯಲ್ಲೇ ತಯಾರಿಸಿ ಮಾರಾಟ ಮಾಡಿ ಉತ್ತಮ ಹಣ ಗಳಿಕೆ ಮಾಡುವಿರಿ, ಬುಧವಾರ ರಾಶಿ ಭವಿಷ್ಯ -ಮೇ-1,2024 ಸೂರ್ಯೋದಯ: 05:53, ಸೂರ್ಯಾಸ್ತ : 06:32 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ

ಅಂದು ಟೀಂ ಇಂಡಿಯಾದ ಉಪನಾಯಕನಾಗಿದ್ದ ಕೆ ಎಲ್ ರಾಹುಲ್ ಈ ಬಾರಿ ತಂಡದಿಂದಾನೇ ಔಟ್..!

ಟ20 ವೇಳೆ ಶ್ವಕಪ್ ಟೂರ್ನಿಗೆ ಆಟಗಾರರನ್ನು ಆಯ್ಕೆ ಮಾಡಲಾಗಿದ್ದಿ, ಕನ್ನಡಿಗ ಕೆ ಎಲ್ ರಾಹುಲ್ ಗೆ ಸ್ಥಾನವನ್ನೇ ನೀಡಿಲ್ಲ. ತಂಡಿದಿಂದ ಹೊರಗೆ ಉಳಿದಿದ್ದಾರೆ. ಈ ಬಾರಿಯ ಐಪಿಎಲ್ ಮ್ಯಾಚ್ ನೆಲ್ಲಾ ಯಾರೆಲ್ಲಾ ಉತ್ತಮ ಪ್ರದರ್ಶ‌

error: Content is protected !!