ಉಡುಪಿಯಲ್ಲಿ ನಡೆದ ಹೆಣ್ಣು ಮಕ್ಕಳ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಕೂಡ ಉಡುಪಿಗೆ ಭೇಟಿ ನೀಡಿದ್ದಾರೆ. ಈ ಬೆನ್ನಲ್ಲೇ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ಮೇಲೆ ಆಕ್ರೋಶ ಹೊರ ಹಾಕಿದ್ದಾರೆ.
ಕಾಂಗ್ರೆಸ್ ವಿರುದ್ಧ ಎಂ ಎಲ್ ಸಿ ರವಿಕುಮಾರ್ ಕಿಡಿಕಾರಿದ್ದು, ಉಡುಪಿ ಘಟನೆ ತಮಾಷೆಯ ವಿಷಯವಲ್ಲ. ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ಕಾಳಜಿ ಇಲ್ಲ. ಪ್ರಕರಣ ಮುಚ್ಚಿ ಹಾಕಲು ಯತ್ನ ನಡೆದಿದೆ. ಯಾರಿಗೆ ವಿಡಿಯೋ ಕಳಿಸಲಾಗಿದೆ ಎಂದು ತನಿಖೆ ಮಾಡಿ ಎಂದಿದ್ದಾರೆ.
ಇವರ ಮನೆಯ ಹೆಣ್ಣು ಮಕ್ಕಳ ವಿಡಿಯೋ ಮಾಡಿದ್ರೆ ಸಣ್ಣ ವಿಷಯ ಎನ್ನಲಾಗುತ್ತಾ ಇತ್ತಾ..? ಹೆಣ್ಣು ಮಕ್ಕಳ ಬಗ್ಗೆ ಕಿಂಚಿತ್ ಗೌರವ ಇದೆಯಾ. ಸೋನಿಯಾ ಪ್ರಿಯಾಂಕ ಕೂಡ ಹೆಣ್ಣು ಮಕ್ಕಳು ಅಲ್ವಾ. ವಿರೋಧ ಹೆಚ್ಚಾದ ಬಳಿಕ ಕೇಸ್ ದಾಖಲಿಸಿದ್ದಾರೆ. ಇಷ್ಟು ಆದರೂ ಏನು ಆಗಿಲ್ಲ ಅಂತಾರೆ. ಕೂಡಲೇ ಗೃಹ ಸಚಿವರನ್ನು ವಜಾ ಮಾಡಬೇಕು. ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ಕಾಂಗ್ರೆಸ್ ವಿರುದ್ಧ ಅಶ್ವತ್ಥ್ ನಾರಾಯಣ ಕಿಡಿಕಾರಿದ್ದಾರೆ.
ಯುವತಿಯರ ಮೊಬೈಲ್ ಎಕ್ಸ್‌ಚೇಂಜ್ ಆಗಿದೆ. ವಿದ್ಯಾರ್ಥಿನಿಯರು ಯಾರ ಜೊತೆಗೆ ಸಂಪರ್ಕದಲ್ಲಿದ್ದರೂ ಎಲ್ಲಾ ಮಾಹಿತಿ ತೆಗೆದುಕೊಂಡು, ಪೊಲೀಸರು ತನಿಖೆ ಮಾಡಲಿ. ಎಲ್ಲ ಆಯಾಮದಲ್ಲೂ ಪೊಲೀಸರು ತನಿಖೆ ಮಾಡಬೇಕು ಎಂದು ಮಂಗಳೂರಿನಲ್ಲಿ ಭರತ್ ಶೆಟ್ಟಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.