Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಉಡುಪಿ ಹೆಣ್ಣು ಮಕ್ಕಳ ವಿಡಿಯೋ ಪ್ರಕರಣ : ಕಾಂಗ್ರೆಸ್ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು

Facebook
Twitter
Telegram
WhatsApp

 

ಉಡುಪಿಯಲ್ಲಿ ನಡೆದ ಹೆಣ್ಣು ಮಕ್ಕಳ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಕೂಡ ಉಡುಪಿಗೆ ಭೇಟಿ ನೀಡಿದ್ದಾರೆ. ಈ ಬೆನ್ನಲ್ಲೇ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ಮೇಲೆ ಆಕ್ರೋಶ ಹೊರ ಹಾಕಿದ್ದಾರೆ.

 

ಕಾಂಗ್ರೆಸ್ ವಿರುದ್ಧ ಎಂ ಎಲ್ ಸಿ ರವಿಕುಮಾರ್ ಕಿಡಿಕಾರಿದ್ದು, ಉಡುಪಿ ಘಟನೆ ತಮಾಷೆಯ ವಿಷಯವಲ್ಲ. ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ಕಾಳಜಿ ಇಲ್ಲ. ಪ್ರಕರಣ ಮುಚ್ಚಿ ಹಾಕಲು ಯತ್ನ ನಡೆದಿದೆ. ಯಾರಿಗೆ ವಿಡಿಯೋ ಕಳಿಸಲಾಗಿದೆ ಎಂದು ತನಿಖೆ ಮಾಡಿ ಎಂದಿದ್ದಾರೆ.

ಇವರ ಮನೆಯ ಹೆಣ್ಣು ಮಕ್ಕಳ ವಿಡಿಯೋ ಮಾಡಿದ್ರೆ ಸಣ್ಣ ವಿಷಯ ಎನ್ನಲಾಗುತ್ತಾ ಇತ್ತಾ..? ಹೆಣ್ಣು ಮಕ್ಕಳ ಬಗ್ಗೆ ಕಿಂಚಿತ್ ಗೌರವ ಇದೆಯಾ. ಸೋನಿಯಾ ಪ್ರಿಯಾಂಕ ಕೂಡ ಹೆಣ್ಣು ಮಕ್ಕಳು ಅಲ್ವಾ. ವಿರೋಧ ಹೆಚ್ಚಾದ ಬಳಿಕ ಕೇಸ್ ದಾಖಲಿಸಿದ್ದಾರೆ. ಇಷ್ಟು ಆದರೂ ಏನು ಆಗಿಲ್ಲ ಅಂತಾರೆ. ಕೂಡಲೇ ಗೃಹ ಸಚಿವರನ್ನು ವಜಾ ಮಾಡಬೇಕು. ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ಕಾಂಗ್ರೆಸ್ ವಿರುದ್ಧ ಅಶ್ವತ್ಥ್ ನಾರಾಯಣ ಕಿಡಿಕಾರಿದ್ದಾರೆ.

ಯುವತಿಯರ ಮೊಬೈಲ್ ಎಕ್ಸ್‌ಚೇಂಜ್ ಆಗಿದೆ. ವಿದ್ಯಾರ್ಥಿನಿಯರು ಯಾರ ಜೊತೆಗೆ ಸಂಪರ್ಕದಲ್ಲಿದ್ದರೂ ಎಲ್ಲಾ ಮಾಹಿತಿ ತೆಗೆದುಕೊಂಡು, ಪೊಲೀಸರು ತನಿಖೆ ಮಾಡಲಿ. ಎಲ್ಲ ಆಯಾಮದಲ್ಲೂ ಪೊಲೀಸರು ತನಿಖೆ ಮಾಡಬೇಕು ಎಂದು ಮಂಗಳೂರಿನಲ್ಲಿ ಭರತ್ ಶೆಟ್ಟಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸ್ಥಳೀಯರಿಗೆ ಕೆಲಸ ಕೊಡುವಂತೆ ಒತ್ತಾಯಿಸಿ ಜುಲೈ 24 ರಂದು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಜುಲೈ. 21 : ಸಿರಿಗೆರೆಯ ತಣಿಗೆಹಳ್ಳಿ ಸಮೀಪ ಡಿ.ಮದಕರಿಪುರದ ಹತ್ತಿರವಿರುವ ಗಣಿಬಾಧಿತ ಪ್ರದೇಶಗಳ ಜನ ಶನಿವಾರದಿಂದ

ವಿದ್ಯಾರ್ಥಿಗಳು ದೊಡ್ಡ ಗುರಿಯೊಂದಿಗೆ ದೊಡ್ಡ ಕನಸು ಕಾಣಬೇಕು : ಐ.ಎ.ಎಸ್. ಸಾಧಕಿ ಕುಮಾರಿ ಸೌಭಾಗ್ಯ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಜುಲೈ. 21 :  ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಓದಿನಿಂದ ಮಾತ್ರ ಜ್ಞಾನ ವೃದ್ದಿಯಾಗಲಿದೆ ಎಂದು

ನೀಲಮ್ಮ ನಿಧನ

  ಸುದ್ದಿಒನ್, ಚಿತ್ರದುರ್ಗ, ಜುಲೈ. 21 : ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕಲ್ಲೇಶಯ್ಯನವರ ತಾಯಿ ಶ್ರೀಮತಿ ನೀಲಮ್ಮ(89) ಶನಿವಾರ ಮಧ್ಯರಾತ್ರಿ ಗುತ್ತಿನಾಡು ಗ್ರಾಮದಲ್ಲಿರುವ ನಿವಾಸದಲ್ಲಿ ನಿಧನರಾಗಿದ್ದಾರೆ. ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ

error: Content is protected !!