ಮನೆ ಸ್ವಚ್ಛವಾಗಿದ್ದರೆ ಮನಸ್ಸು ಸ್ವಚ್ಛವಾಗಿರುತ್ತದೆ. ಒಂದು ವೇಳೆ ಮನೆ ಗಲೀಜಾಗಿದ್ದರೆ ಮನಸ್ಸು ಶಾಂತತೆಯನ್ನು ಕಳೆದುಕೊಳ್ಳುತ್ತದೆ. ಅದರಲ್ಲೂ ಮನೆಯಲ್ಲಿ ಜಿರಲೆಗಳು ಒಡಾಡಿದರಂತು ಮುಗಿದೇ ಹೋಯ್ತು ಕೋಪವು ಹೆಚ್ಚಾಗಿ ಬರುತ್ತದೆ. ಅದರಲ್ಲೂ ಬಟ್ಟೆಯ ಒಳಗೆ ಜಿರಲೆ ಸೇರಿಕೊಂಡರೆ ಮೈಮೇಲೆ ಹರಿದಾಡಿದಂತೆ ಭಾಸವಾಗಿ ಬಿಡುತ್ತದೆ. ಬಟ್ಟೆಯೊಳಗೆ ಜಿರಲೆಯಾದರೆ ಅದನ್ನು ಹೋಗಲಾಡಿಸುವುದಕ್ಕೆ ಒಂದಷ್ಟು ಪರಿಹಾರಗಳು ಇಲ್ಲಿವೆ.
ಮೊದಲು ಬಟ್ಟೆಗೆ ಜಿರಲೆಗಳು ಯಾಕೆ ಬರುತ್ತವೆ ಎಂಬುದನ್ನು ನೋಡೋಣಾ. ಜಿರಲೆಗಳಿಗೆ ಬಟ್ಟೆಯಲ್ಲಿನ ಕಲೆ ಬೇಗ ಆಕರ್ಷಣೆ ಮಾಡುತ್ತವೆ. ಆಗ ಜಿರಲೆಗಳು ಬರುತ್ತವೆ. ಕಾಫಿ, ಟೀ ಕುಡಿಯುವಾಗ ಬಟ್ಟೆಗೆ ಬಿದ್ದು, ಕಲೆ ಉಳಿದು ಬಿಟ್ಟರೆ ಜಿರಲೆಗಳು ಬೇಗ ಬರುತ್ತವೆ.
ಅದಕ್ಕೆ ಪರಿಹಾರವೇನು: * ಜಿರಲೆಗಳು ಅವಾಗಿಯೇ ಅವು ಓಡಬೇಕು ಎಂದರೆ ನಶೆ ಉಂಡೆ ಅಂದ್ರೆ ನ್ಯಾಪ್ತಲಿನ್ ಬಳಸಿ. ಆ ಉಂಡೆಗಳನ್ನು ಬಟ್ಟೆಗಳ ನಡುವೆ ಇಡಿ. ಇದರಿಂದ ಜಿರಲೆಗಳು ಕೊಂಚ ದೂರ. ಅಂದ್ರೆ ಅದರ ವಾಸನೆಗೆ ದೂರ ಓಡುತ್ತವೆ.
* ಜಿರಳೆಗಳ ವಿರುದ್ಧ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುವ ಇನ್ನೊಂದು ವಸ್ತು ಎಂದರೆ ಅದು ಬೋರಿಕ್ ಆಸಿಡ್. ಇದು ಒಂದು ರೀತಿಯ ಸ್ಲೋ ಪಾಯಿಸನ್ ಇದ್ದಹಾಗೆ. 72 ಗಂಟೆಗಳ ಅಂತರದಲ್ಲಿ ಜಿರಳೆಗಳನ್ನು ಕೊಂದು ಹಾಕುತ್ತದೆ. ಜಿರಳೆಗಳು ಓಡಾಡುವ ಜಾಗದಲ್ಲಿ ಬೋರಿಕ್ ಆಸಿಡ್ ಪೌಡರ್ ಹಾಕಿಬಿಡಿ. ಜಿರಳೆಗಳಿಗೆ ಇದು ಮೆತ್ತಿಕೊಳ್ಳುತ್ತದೆ. ಇದರಿಂದ ಮುಕ್ತಿ ಪಡೆಯಲು ಜಿರಳೆಗಳು ಬೋರಿಕ್ ಆಸಿಡ್ ಪೌಡರ್ ತಿನ್ನುತ್ತದೆ. ಇದು ವಿಷಕಾರಿ ಅಂಶವಾಗಿ ಬದಲಾಗಿ ಜಿರಳೆಯನ್ನು ಕೊಂದು ಹಾಕುತ್ತದೆ.