ಮಂಗಳೂರು: ಚಂದ್ರಯಾನ 3 ಯಶಸ್ವಿಯಾಗಿ ಉಡಾವಣೆಯಾಗಿದೆ. ಆದ್ರೆ ಈ ಬಾರಿ ಉಡಾವಣೆಗೂ ಮುನ್ನ ಇಸ್ರೋ ದೇವರ ಮೊರೆ ಹೋಗಿತ್ತು. ಪ್ರತಿಕೃತಿಗೆ ಪೂಜೆ ಸಲ್ಲಿಸಿದ್ದರು. ಈ ಬಗ್ಗೆ ಚಿಂತಕ ನರೇಂದ್ರ ನಾಯಕ್ ಅಸಮಾಧಾನ ಹೊರ ಹಾಕಿದ್ದಾರೆ.
ವೈಯಕ್ತಿಕ ವಿಚಾರಗಳಾದರೇ ಪೂಜೆ, ಪುರಸ್ಕಾರ ಮಾಡಿಸುವುದಕ್ಕೆ ನಮಗೇನು ಆಕ್ಷೇಪವಿಲ್ಲ. ಆದರೆ ಇದು ದೇಶದ ವಿಚಾರ. ಯಾವುದೇ ಧಾರ್ಮಿಕ ವಿಚಾರ ಥಳುಕು ಹಾಕಿಕೊಳ್ಳುವುದು ಸರಿಯಲ್ಲ. ಕೆಲವು ರಾಷ್ಟ್ರಗಳ ರಾಕೆಟ್ ಈಗಾಗಲೇ ಯಶಸ್ವಿಯಾಗಿ ಉಡಾವಣೆಯಾಗಿದೆ. ಅವರೇನು ಪೂಜೆ ಪುನಸ್ಕಾರಗಳ ಪೂಜೆ ಮಾಡಿಸಿದ್ದಾರಾ..? ಎಂದು ಪ್ರಶ್ನಿಸಿದ್ದಾರೆ.
ವಿಜಯ್ ಮಲ್ಯನ ಪ್ರತಿಯೊಂದು ಏರ್ ಕ್ರಾಫ್ಟ್ ತಿರುಪತಿಗೆ ರೌಂಡ್ ಹಾಕಿ ಬರುತ್ತಿತ್ತು. ಆದರೆ ಆತ ಉದ್ಯಮದಲ್ಲಿ ನೆಲಕಚ್ಚಿಲ್ಲವೇ. ಹಿಂದೆ ಇದೇ ರೆಪ್ಲಿಕಾ – 1ನ ಪೂಜೆಗೆ ತಿರುಪತಿಗೆ ಹೋದ ಇಸ್ರೋದ ಇಬ್ಬರು ಮೂವರು ದಾರಿಯಲ್ಲಿಯೇ ಅಪಘಾತಕ್ಕೆ ಬಲಿಯಾಗಿದ್ದರು. ಇಂತಹ ಅನೇಕ ಮೂಲಭೂತ ಪ್ರಶ್ನೆಗಳು ನಮ್ಮ ಮುಂದಿದೆ ಎಂದು ನರೇಂದ್ರ ನಾಯಕ್ ಹೇಳಿದ್ದಾರೆ.