ಬೆಂಗಳೂರು : ವಿಧಾನಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಮಾತಿಗೆ ಮಾತು ಬೆಳೆದಿದೆ. ಬಿಜೆಪಿ ನಾಯಕರ ವಿರುದ್ಧ ಅರಸೀಕೆರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಲತಿರುಗಿ ಬಿದ್ದಿದ್ದಾರೆ. ರೀ..ರೀ ಡಾಕ್ಟ್ರೇ ನಿಮ್ಗೆ ತಾಕತ್ ಇದ್ರೆ ಮಲ್ಲೇಶ್ವರಂನಲ್ಲಿ ಕಾಂಗ್ರೆಸ್ ನಿಂದ ಗೆದ್ದು ತೋರಿಸ್ರಿ ನೋಡೋಣಾ. ನಾನು ನಿಮಗೆ ಸವಾಲು ಹಾಕ್ತೀನಿ. ಯಾಕೆ ಸುಮ್ಮನೆ ಮಾತನಾಡ್ತೀರಿ. ಬಡವೆಇಗೆ ನೀಡುವ ಅಕ್ಕಿಯನ್ನು ಕೇಂದ್ರ ಸರ್ಕಾರ ಯಾಕೆ ನೀಡುತ್ತಿಲ್ಲ. ಇದೇನಾ ಒಕ್ಕೂಟ ವ್ಯವಸ್ಥೆ..? ಕೊಟ್ಟು ತೆಗೆದುಕೊಳ್ಳೋದೆ ಒಕ್ಕೂಟ ವ್ಯವಸ್ಥೆ.
ಯಾಕೆ ಕೊರೊನಾ ಸಮಯದಲ್ಲಿ ನಾವೂ ನಿಮಗೆ ಸಹಕಾರ ನೀಡಲಿಲ್ವಾ. ಭಾರತ ಮಾತೆಗೆ ಜೈ ಅಂತ ಯಾಕೆ ಹೇಳ್ತೀವಿ ಹೇಳಿ. ಮೊದಲು ಅಕ್ಕಿ ಕೊಡುವುದಾಗಿ ಹೇಳಿ, ಆಮೇಲೆ ಯಾಕೆ ಕೊಡಲಿಲ್ಲ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಲೋಕಸಭಾ ಚುನಾವಣೆಯ ತನಕ ಬಿಡಲ್ಲ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಶಿವಲಿಂಗೇಗೌಡರಿಗೆ ಬೆಂಬಲ ನೀಡಿ, ಅಶ್ವತ್ಥ್ ನಾರಾಯಣ್, ನೀವೂ ಸಚಿವರಾಗಿದ್ದವರು, ಡಿಸಿಎಂ ಆಗಿದ್ದವರು ಅವರು ಮಾತನಾಡುವಾಗ ಎದ್ದು ನಿಂತು ಡಿಸ್ಟರ್ಬ್ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಬಿಜೆಪಿ ನಾಯಕ ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದು, ಇಷ್ಟು ದಿನ ಜೆಡಿಎಸ್ ನಲ್ಲಿ ಏನು ಹರಿದ್ರಿ. ಕಾಂಗ್ರೆಸ್ ಗೆ ಹೋಗಿ ಏನು ಹರಿದ್ರಿ ಅನ್ನೋದನ್ನ ಮೊದಲು ಹೇಳಿ ಎಂದಿದ್ದಾರೆ. ಇದೇ ವೇಳೆ ಮಧ್ಯಪ್ರವೇಶಿಸಿದ ಲಕ್ಷ್ಮಣ ಸವದಿ, ಪಾಪ ನೀವ್ಯಾಕೆ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡ್ತೀರಿ. ಪಾಪ ಅವರೆಲ್ಲ ಕಾಂಪಿಟೇಷನ್ ಲೈನ್ ನಲ್ಲಿದ್ದಾರೆ. ಯಾರು ಹೆಚ್ಚು ಮಾತಾಡ್ತಾರೆ, ಕಡಿಮೆ ಮಾತಾಡ್ತಾರೆ ಅನ್ನೋದು ಅಲ್ಲಿ ಕೌಂಟ್ ಆಗುತ್ತೆ. ಅಲ್ಲಿ ಮಾರ್ಕ್ಸ್ ಬರುತ್ತೆ ಎಂದು ಗೇಲಿ ಮಾಡಿದ್ದಾರೆ.