ರಾಜ್ಯ ಕಾಂಗ್ರೆಸ್ ಸರ್ಕಾರ ಇದೀಗ ಒಂದೊಂದೆ ನಿರ್ಧಾರವನ್ನು ಕೈಗೊಳ್ಳುತ್ತಿದೆ. ಅದರಲ್ಲಿ ಬಿಜೆಪಿ ಸರ್ಕಾರದ ಮಂಜೂರಾದ ಹಲವು ಯೋಜನೆಗಳಿಗೆ ಬ್ರೇಕ್ ಹಾಕಿದೆ. ಕೆಲ ಟೆಂಡರ್ ಗಳ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶ ನೀಡಿದೆ. ಅದರಲ್ಲೂ ಮಾಜಿ ಸಚಿವ ಕೆ ಸುಧಾಕರ್ ಗೆ ಶಾಕ್ ನೀಡಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆ ಸುಧಾಕರ್ ಸಚಿವರಾಗಿದ್ದರು. ಆಗ ಕೆಲವು ಟೆಂಡರ್ ಗಳಿಗೆ ಅನುಮತಿ ನೀಡಿದ್ದರು. ಇದೀಗ ಆ ಟೆಂಡರ್ ಗಳ ತನಿಖೆಗೆ ಸಿದ್ದರಾಮಯ್ಯ ಸರ್ಕಾರ ಒತ್ತಾಯಿಸಿದೆ.
ಈ ಸಂಬಂಧ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದು, ಆರೋಗ್ಯ ಇಲಾಖೆಯನ್ನು ಕ್ಲೀನ್ ಮಾಡುವುದಾಗಿ ಸಿಎಂ ಸೂಚನೆ ನೀಡಿದ್ದಾರೆ. ಮಾಜಿ ಸಚಿವ ಸುಧಾಕರ್ ಅವರು ನೀಡಿದ ಬಹುತೇಕ ಟೆಂಡರ್ ಗಳನ್ನು ಸಿಎಂ ಸೂಚನೆ ಮೇರೆಗೆ ರದ್ದು ಮಾಡುತ್ತಿದ್ದೇವೆ. ಸುಧಾಕರ್ ಕಾಲದ ಟೆಂಡರ್ ಗಳಲ್ಲಿ ಬಹುತೇಕ ಕಿಕ್ ಬ್ಯಾಕ್ ಮತ್ತು ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ.
ಈಗಾಗಲೇ ಕೆಲವು ಟೆಂಡರ್ ಗಳನ್ನು ಕ್ಯಾನ್ಸಲ್ ಮಾಡಿದ್ದೇವೆ. ಡಯಾಲಿಸಿಸ್ ಟೆಂಡರ್ ಕೂಡ ಕ್ಯಾನ್ಸಲ್ ಮಾಡಿದ್ದೇವೆ. 108 ಟೆಂಡರ್ ಕೂಡ ಕ್ಯಾನ್ಸಲ್ ಮಾಡಿದ್ದೇವೆ. ಸರಿಯಾದ ದಾರಿಯಲ್ಲಿ ಇಲಾಖೆಯನ್ನು ತರುವ ಕೆಲಸ ಮಾಡುತ್ತಿದ್ದೇವೆ ಎಂದು ಆರೋಗ್ಯ ಇಲಾಖೆಯಲ್ಲಿ ಸುಧಾರಣೆ ವಿಚಾರವಾಗಿ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.