Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶಾಸಕ ರುದ್ರಪ್ಪ ಲಮಾಣಿಗೆ ಸಚಿವ ಸ್ಥಾನ ನೀಡಿ : ಎಂ.ಸತೀಶ್‍ಕುಮಾರ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ,(ಮೇ.19) : ಕಳೆದ ಹತ್ತರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಗೆದ್ದಿರುವ ಲಂಬಾಣಿ ಬಂಜಾರ ಸಮಾಜದ ಏಕೈಕ ಶಾಸಕ ರುದ್ರಪ್ಪ ಲಮಾಣಿಗೆ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಿ ಸಮಾಜ ಕಲ್ಯಾಣ ಖಾತೆ ಕೊಡಬೇಕೆಂದು ಜಿಲ್ಲಾ ಲಂಬಾಣಿ ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಎಂ.ಸತೀಶ್‍ಕುಮಾರ್ ಪಕ್ಷದ ನಾಯಕರುಗಳಲ್ಲಿ ಮನವಿ ಮಾಡಿದ್ದಾರೆ.

ಮಾಧ್ಯಮದೊಂದಿಗೆ ಶುಕ್ರವಾರ ಮಾತನಾಡಿದ ಅವರು ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ರುದ್ರಪ್ಪ ಲಮಾಣಿಯನ್ನು ಮುಜರಾಯಿ ಖಾತೆ ಸಚಿವರನ್ನಾಗಿ ಮಾಡಿತ್ತು. ಪ್ರತಿ ಚುನಾವಣೆಯಲ್ಲಿಯೂ ಬಂಜಾರ ಸಮಾಜ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊಂಡು ಬರುತ್ತಿದೆ.

ಈ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಲು ಲಂಬಾಣಿ ಸಮಾಜ ಅಧಿಕ ಮತಗಳನ್ನು ನೀಡಿದೆ. ಮುಂದೆಯೂ ಕಾಂಗ್ರೆಸ್ ಜೊತೆ ನಮ್ಮ ಸಮಾಜ ಇರಬೇಕೆಂದರೆ ಸಮಾಜ ಕಲ್ಯಾಣ ಖಾತೆ ನೀಡಲೇಬೇಕು.

ಒಳ ಮಿಸಲಾತಿ ವರ್ಗಿಕರಣಗೊಳಿಸಿದ್ದರಿಂದ ಬಿಜೆಪಿಗೆ ಲಂಬಾಣಿ ಜನಾಂಗ ಚುನಾವಣೆಯಲ್ಲಿ ಮುಟ್ಟಿ ನೋಡಿಕೊಳ್ಳುವಂತ ಹೊಡೆತ ಕೊಟ್ಟಿದೆ. ಹಾಗಾಗಿ ನಮ್ಮ ಬೇಡಿಕೆಯನ್ನು ಕಾಂಗ್ರೆಸ್ ವರಿಷ್ಠರು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದಲ್ಲಿ ಮುಂದೆ ಏನು ಮಾಡಬೇಕೆನ್ನುವುದು ನಮ್ಮ ಜನಾಂಗಕ್ಕೆ ಗೊತ್ತಿದೆ ಎಂದು ಎಚ್ಚರಿಸಿದರು.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಮೂರನೇ ಬಾರಿಗೆ ಗೆದ್ದಿರುವ ಅಭಿವೃದ್ದಿಯ ಹರಿಕಾರ ಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ಕೊಡಬೇಕೆಂದು ಎಂ.ಸತೀಶ್‍ಕುಮಾರ್ ಒತ್ತಾಯಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದರ್ಶನ್ ರಾಜಾತಿಥ್ಯ ಫೋಟೋ ರಿವಿಲ್ ಮಾಡಿದ್ದೇ ರಾಜ್ಯ ಸರ್ಕಾರ : ಜೋಶಿ ಹೇಳಿಕೆಗೆ ಡಿಕೆಶಿ ಹೇಳಿದ್ದೇನು..?

  ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಶೀಟರ್ ಗಳ ಜೊತೆಗೆ ಕೂತು ಟೀ ಕುಡೊಯುತ್ತಾ, ಸಿಗರೇಟು ಸೇದುತ್ತಾ, ನಗುಮುಖದಲ್ಲಿದ್ದ ದರ್ಶನ್ ಅವರ ಫೋಟೋ ಒಂದು ವೈರಲ್ ಆಗಿತ್ತು. ಆ ಬಳಿಕವೇ ದರ್ಶನ್ ಅವರನ್ನು ಬಳ್ಳಾರಿ

ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಎಂಬಿ ಪಾಟೀಲ್ : ಬೆಳೆಯುತ್ತಲೇ ಇದೆ ಆಕಾಂಕ್ಷಿಗಳ ಪಟ್ಟಿ..!

  ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಆಗಾಗ ಸಿಎಂ ಬದಲಾವಣೆಯ ವಿಚಾರ ಚರ್ಚೆಗೆ ಬರ್ತಾನೆ ಇರುತ್ತದೆ. ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರು ಕೆಳಗಿಳಿಯುತ್ತಾರೆ ಎಂಬ ಚರ್ಚೆಯ ಜೊತೆಗೆ ನಾನು ಕೂಡ ಸಿಎಂ ಆಗಬಹುದು ಎಂಬ ಆಸೆ

Mobile phone : ಮೊಬೈಲ್ ಫೋನ್ ಬಳಸುವುದರಿಂದ ಮೆದುಳಿನ ಕ್ಯಾನ್ಸರ್ ಬರುತ್ತದೆಯೇ ? ಇಲ್ಲಿದೆ ಸ್ಪಷ್ಟತೆ..!

  ಸುದ್ದಿಒನ್ : ಮೊಬೈಲ್ ಫೋನ್ ಬಳಸುವುದರಿಂದ ಮೆದುಳಿನ ಕ್ಯಾನ್ಸರ್ ಬರುತ್ತದೆಯೇ ? ಇದೀಗ ಈ ಪ್ರಶ್ನೆಗೆ WHO ಉತ್ತರ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಇತ್ತೀಚಿನ ಅಧ್ಯಯನದಲ್ಲಿ, ಮೊಬೈಲ್ ಫೋನ್ ಬಳಕೆಯಿಂದ

error: Content is protected !!