Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಿದ್ದರಾಮಯ್ಯ ಸಿಎಂ ಆದ್ಮೇಲೆ ಏನೆಲ್ಲಾ ಸವಾಲುಗಳು ಎದುರಾಗಲಿವೆ..?

---Advertisement---

 

 

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರ ಹೆಸರು ಫೈನಲ್ ಆಗಿದೆ. ಇನ್ನು ಎರಡೇ ದಿನದಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಸಿಎಂ ಆಗುವುದಕ್ಕೆ ಇದ್ದ ಮೊದಲ ಸವಾಲನ್ನು ಸಿದ್ದರಾಮಯ್ಯ ಅವರು ಗೆದ್ದಿದ್ದಾರೆ. ಡಿಕೆ ಶಿವಕುಮಾರ್ ಈ ಬಾರಿ ಸಿಎಂ ಗದ್ದುಗೆ ಬಿಟ್ಟುಕೊಡಲು ಸಾಧ್ಯವೇ ಇಲ್ಲ ಅಂದಿದ್ರು. ಆದರೂ ಸಂಧಾನ ಸಭೆ ಸಫಲವಾಗಿದೆ. ಸಿದ್ದರಾಮಯ್ಯ ಅವರೇ ಸಿಎಂ ಆಗಲಿದ್ದಾರೆ.

ಸಿಎಂ ಆದ ಬಳಿಕ ಸಿದ್ದು ಮುಂದೆ ಸಾಕಷ್ಟು ಸವಾಲುಗಳು ಎದ್ದು ಕಾಣುತ್ತಿವೆ. ಈ ಬಾರಿ ಬಹುಮತ ಪಡೆದು ಹೊರಹೊಮ್ಮಿದ ಕಾಂಗ್ರೆಸ್ ಪಕ್ಷವನ್ನು ಇನ್ನು ಮುಂದಿನ ಚುನಾವಣೆಯಲ್ಲೂ ಅಷ್ಟೇ ಸಲೀಸಾಗಿ ಪಕ್ಷವನ್ನು ಗೆಲ್ಲಿಸಿಕೊಂಡು ಬರಬೇಕಾದ ದೊಡ್ಡ ಜವಬ್ದಾರಿ ಇದೆ.

ಸಾಲು ಸಾಲು ಚುನಾವಣೆಗಳು ಇನ್ನು‌ಮುಂದೆ ಸಿಗಲಿದೆ. ಅದರಲ್ಲೂ ಕಳೆದ ಎರಡು ವರ್ಷದಿಂದ ಕಾಯುತ್ತಿರುವ ಬಿಬಿಎಂಪಿ ಚುನಾವಣೆಯ ಕಡೆಗೂ ಗಮನ ಕೊಡಬೇಕಾಗಿದೆ. 2024 ಲೋಕಸಭಾ ಚುನಾವಣೆ ಇನ್ನು ಬಹಳ‌ ಮುಖ್ಯವಾಗಿರುತ್ತದೆ. ಜಿ.ಪಂ, ತಾಪಂ ಚುನಾವಣೆಯ ಜೊತೆಗೆ ದೊಡ್ಡ ಸವಾಲು ಇರುವುದು ಸದ್ಯ ಕಾಂಗ್ರೆಸ್ ನೀಡಿರುವ ಐದು ಗ್ಯಾರಂಟಿಗಳನ್ನು ಚಾಲ್ತಿಗೆ ತರಬೇಕಿದೆ. ಉಚಿತ ಸ್ಕಿಂಗಾಗಿಯೇ ಪ್ರತಿ ವರ್ಷಕ್ಕೆ 60-70 ಸಾವಿರ ಕೋಟಿ ಹಣ ಬೇಕಾಗುತ್ತದೆ‌

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...