ಚಿತ್ರದುರ್ಗ, (ಮೇ.12) : ಪಿಂಜಾರ ಸಂಘದ ಸಂಸ್ಥಾಪಕ ಅಧ್ಯಕ್ಷ ದಿವಂಗತ ಹೆಚ್. ಹೀರೆಹಾಳ್ ಇಬ್ರಾಹಿಂಸಾಬ್‍ರವರ 92 ನೇ ಜನ್ಮದಿನಾಚರಣೆಯನ್ನು ಸೀಬಾರದಲ್ಲಿರುವ ವಿಶ್ವಮಾನವ ಶಾಲೆಯಲ್ಲಿ ಶುಕ್ರವಾರ ಆಚರಿಸಲಾಯಿತು.
ಪಿಂಜಾರ ಸಂಘದ ರಾಜ್ಯಾಧ್ಯಕ್ಷ ಹೆಚ್.ಜಲೀಲ್‍ಸಾಬ್ ಮಾತನಾಡಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿರುವ ಪಿಂಜಾರ/ನದಾಫ್ ಸಮಾಜ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕೆಂಬ ಸಂದೇಶವನ್ನು ಹೆಚ್.ಹೀರೆಹಾಳ್ ಇಬ್ರಾಹಿಂಸಾಬ್ ನೀಡಿದ್ದರು. ಅವರ ಆಸೆಯಂತೆ ಪಿಂಜಾರ ಜನಾಂಗ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸುವಂತೆ ಮನವಿ ಮಾಡಿದರು.
ಪಿಂಜಾರ ನದಾಫ್ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಟಿ.ಶಫಿವುಲ್ಲಾ ಮಾತನಾಡುತ್ತ ಹೆಚ್.ಹೀರೆಹಾಳ್ ಇಬ್ರಾಹಿಂಸಾಬ್‍ರವರು ಪಿಂಜಾರ ಸಮುದಾಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಆಶಯದಂತೆ ಪಿಂಜಾರ ಜನಾಂಗ ಶೈಕ್ಷಣಿಕವಾಗಿ ಮುಂದೆ ಬರಬೇಕೆಂದು ಹೇಳಿದರು.
ಜೆ.ಕೆ.ಅಕ್ಬರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆರ್.ಎಂ.ಡಿ. ಇಂಡಸ್ಟ್ರಿಸ್‍ನ್ ಹಾಜಿ ಆರ್.ದಾದಾಪೀರ್, ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಇಮಾಂಸಾಬ್, ಉಪಾಧ್ಯಕ್ಷ ಇ.ಮಹಮದ್ ಆಲಿ, ಷರೀಫಾಬಿ, ವೈ.ಹೆಚ್.ಹುಸೇನ್‍ಪೀರ್, ಸಹ ಕಾರ್ಯದರ್ಶಿ ಸಕೀನಾಬಿ, ಮುಜಾಹಿದ್ ಪಿ.ಬಿ. ಹುಸೇನ್‍ಪೀರ್, ಗೌಸ್‍ಪೀರ್, ಸಂಜುಭಾನು, ನಿವೃತ್ತ ಆರಕ್ಷಕ ಉಪ ನಿರೀಕ್ಷಕ ಟಿ.ಹುಸೇನ್‍ಪೀರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.