ಬೆಂಗಳೂರು: ವಿಧಾನಸಭಾ ಚುನಾವಣೆಯ ಮತದಾನ ಮುಕ್ತಾಯಗೊಂಡಿದೆ. ಈ ಬೆನ್ನಲ್ಲೇ ಸಾಕಷ್ಟು ಸಂಸ್ಥೆಗಳು ಸಮೀಕ್ಷೆಯನ್ನು ಶುರು ಮಾಡಿವೆ. ಈ ಬಾರಿ ಕಾಂಗ್ರೆಸ್ ಗೆ ಬಹುಮತ ಬರಲಿದ ಎಂದೇ ಎಲ್ಲಾ ಸಮೀಕ್ಷೆಗಳು ಹೇಳುತ್ತಿವೆ. ಅದರ ಜೊತೆಗೆ ಇನ್ನು ಕೆಲವೊಂದು ಸಮೀಕ್ಷೆಗಳ ಪ್ರಕಾರ ಅತಂತ್ರ ಫಲಿತಾಂಶ ಕೂಡ ಬರಲಿದೆ ಎನ್ನಲಾಗುತ್ತಿತ್ತು.
ಸದ್ಯ ಕಾಂಗ್ರೆಸ್ ಕಡೆ ಜನ ಯಾಕೆ ಅಷ್ಟೊಂದು ಒಲವು ತೋರುತ್ತಿದ್ದಾರೆ ಎಂಬುದಕ್ಕೆ ಒಂದಿಷ್ಟು ಪಾಯಿಂಟ್ ಗಳು ಇಲ್ಲಿದೆ. ಕಾಂಗ್ರೆಸ್ ನಲ್ಲಿ ಕೂಡ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸ್ಥಾನ ಗಳಿಸುವ ಆತ್ಮ ವಿಶ್ವಾಸವಿದೆ. ರಾಹುಲ್ ಗಾಂಧಿ ಅವರು ಪಕ್ಷ ಸಂಘಟನೆಗೆ ಓಡಾಡಿದ್ದು ಕೂಡ ಒಂದು ರೀತಿಯ ಕಾರಣವಿರಬಹುದು. ಅದರ ಜೊತೆಗೆ ಬಿಜೆಪಿ ವಿರೋಧ ಅಲೆಯೂ ರಾಜ್ಯದಲ್ಲಿ ಎದ್ದಿರುವುದು ಇದಕ್ಕೆ ಕಾರಣವಾಗಿದೆ.
ಈ ಬಾರಿ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್ ಹೆಚ್ಚು ಟಿಕೆಟ್ ಗಳನ್ನು ನೀಡಿತ್ತು. ಅವರ ವೋಟ್ ಗಳು ಕಾಂಗ್ರೆಸ್ ಕಡೆಗೆ ಬಿದ್ದಿರುವುದು. ಭ್ರಷ್ಟಾಚಾರದ ವಿರುದ್ಧ ಜನ ಬೇಸತ್ತಿದ್ದಾರೆ. ಯಾವುದಕ್ಕೆ ಹೋದರೂ ಲಂಚವಿಲ್ಲದೆ ಕೆಲಸಗಳೇ ಆಗುತ್ತಿಲ್ಲವಾದ ಕಾರಣ ಬದಲಾವಣೆ ಬಯಸಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಕಾಂಗ್ರೆಸ್ ಅವರು ನೀಡಿದ ಐದು ಗ್ಯಾರಂಟಿ ಕಾರ್ಡ್ ಗಳತ್ತ ಜನ ಒಲವು ತೋರಿರುವುದು ಸಹ ಕಾಂಗ್ರೆಸ್ ಗೆ ಹೆಚ್ಚಿನ ಮತ ಬರುವುದಕ್ಕೆ ಕಾರಣವಾಗಿದೆ.