Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಂಡ್ಯ ಚುನಾವಣಾ ಪ್ರಚಾರದಲ್ಲಿ ರಮ್ಯಾ : ಮದುವೆ, ಅಂಬಿ ಸಾವಿನ ಬಗ್ಗೆ ಏನಂದ್ರು ಗೊತ್ತಾ..?

---Advertisement---

 

ಸದ್ಯ ನಟಿ ರಮ್ಯಾ ರಾಜಕೀಯ ಬಿಟ್ಟು ಸಿನಿಮಾರಂಗದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ. ಹಾಗಂತ ರಾಜಕೀಯವನ್ನು ಸಂಪೂರ್ಣವಾಗಿ ಬಿಟ್ಟಿಲ್ಲ. ಸದ್ಯ ರಾಜ್ಯ ವಿಧಾನಸಭಾ ಚುನಾವಣೆ ಇರುವ ಕಾರಣ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಇಳಿದಿದ್ದಾರೆ. ಮಂಡ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ರಮ್ಯಾ, ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ಹೇಳಿಕೇಳಿ ಮಂಡ್ಯ ಅಂಬರೀಶ್ ಅವರ ಅಭಿಮಾನಿಗಳು. ಅಲ್ಲಿ ರೆಬೆಲ್ ಸ್ಟಾರ್ ಫ್ಯಾನ್ಸ್ ಗೇನು ಕಡಿಮೆ ಇಲ್ಲ. ಅವರು ನಿಧನರಾದಾಗಲೂ ರಮ್ಯಾ ಬಂದಿರಲಿಲ್ಲ. ಅಂಬರೀಶ್ ಅವರಿಂದ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ ರಮ್ಯಾ, ಅವರ ಅಂತ್ಯ ಸಂಸ್ಕಾರಕ್ಕೆ ಬರದಿದ್ದಕ್ಕೆ ಎಲ್ಲರಿಗೂ ಕೋಪ ತರಿಸಿತ್ತು. ಆ ಪ್ರಶ್ನೆಗೂ ರಮ್ಯಾ ಪ್ರಚಾರದ ವೇಳೆ ಉತ್ತರಿಸಿದ್ದಾರೆ.

“ನಂಗೆ ಆ ಸಮಯದಲ್ಲಿ ಟ್ಯೂಮರ್ ಆಗಿದ್ದ ಕಾರಣ ನಾನು ಬರುವುದಕ್ಕೆ ಮಂಡ್ಯ ಆಗಲಿಲ್ಲ. ಸರ್ಜರಿಯಾಗಿತ್ತು. ನನಗೂ ಸಂಬಂಧವಿಲ್ಲ. ಆಗ ಬರುತ್ತಲೇ ಇರುತ್ತೇನೆ. ನಾನು ಕ್ಯಾಮೆರಾ ಮುಂದೆ ಎಲ್ಲವನ್ನು ಹಂಚಿಕೊಳ್ಳುವುದಿಲ್ಲ”. ಇನ್ನು ಇದೇ ವೇಳೆ ಮದುವೆಯ ವಿಚಾರವೂ ಪ್ರಸ್ತಾಪವಾಗಿದ್ದು, “ನೀವೇ ಗಂಡು ನೋಡಿ. ಗೌಡ ಹುಡುಗನೇ ಬೇಕು. ಸ್ವಯಂ ವರ ಮಾಡಿ ಮದುವೆಯಾಗುತ್ತೇನೆ” ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...