ಹಾಸನ: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ನಾಯಕರು ಕೂಡ ಹಳೆ ಮೈಸೂರು ಭಾಗವನ್ನು ಗೆಲ್ಲುವುದಕ್ಕಾಗಿ ಕಸರತ್ತು ನಡೆಸುತ್ತಿದೆ. ಹೇಳಿ ಕೇಳಿ ಹಳೇ ಮೈಸೂರು ಭಾಗ ಜೆಡಿಎಸ್ ನ ಭದ್ರಕೋಟೆ ಇದ್ದಂತೆ. ಹಾಸನದಲ್ಲೂ ಜೆಡಿಎಸ್ ಪ್ರಾಬಲ್ಯವಿದೆ. ಆದರೆ ಈ ಬಾರಿ ಬಿಜೆಪಿ ಒಂದು ಕ್ಷೇತ್ರ ಕಬಳಿಸಿದೆ. ಪ್ರೀತಂ ಗೌಡ ಆ ಕ್ಷೇತ್ರದ ಶಾಸಕರಾಗಿದ್ದಾರೆ. ಈ ಬಾರಿ ಅದನ್ನೂ ಪಡೆಯಲೇಬೇಕೆಂದು ದೊಡ್ಡ ಗೌಡರ ಕುಟುಂಬಸ್ಥರು ಮನಸ್ತಾಪ ಮರೆತು ಒಂದಾದರೆ, ಈ ಕಡೆ ಪ್ರಧಾನಿ ಮೋದಿ ಅವರು ಅದೇ ಜೆಡಿಎಸ್ ಕೋಟೆಗೆ ಇಂದು ಭೇಟಿ ನೀಡಿದ್ದಾರೆ. ಜೆಡಿಎಸ್ ವಿರುದ್ಧ ಅಬ್ಬರಿಸಿ, ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಉಚ್ಛರಿಸಿದ್ದಾರೆ.
ಬೇಲೂರಿನಲ್ಲಿ ತಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ – ಜೆಡಿಎಸ್ ಗೆ ಮತ ಹಾಕಿದರೆ ಕರ್ನಾಟಕದ ಭವಿಷ್ಯದ ಬಾಗಿಲು ಮುಚ್ಚಿದಂತೆಯೇ. ಕಾಂಗ್ರೆಸ್ – ಜೆಡಿಎಸ್ ನಡುವೆ ವಿಚಿತ್ರವಾದ ಸಮಾನತೆ ಇದೆ. ಏನೆಂದರೆ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ನೆಲೆಸಿರುವ ಒಂದು ಪರಿವಾರದ ಸೇವೆ ಮಾಡುತ್ತಿದ್ದಾರೆ. ಯಾರು ಕುಟುಂಬದ ಸೇವೆ ಮಾಡುತ್ತಾರೋ..? ಯಾರು ಆ ಕುಟುಂಬಕ್ಕೆ ಹತ್ತಿರ ಇರುತ್ತಾರೊ..? ಯಾರು ಆ ಪರಿಹಾರಕ್ಕೆ ಮಂಡಿಯೂರಿ ಕೂರುತ್ತಾರೋ..? ಅಂತಹವೆಇಗೆ ಮಾತ್ರ ಕಾಂಗ್ರೆಸ್ ನಲ್ಲಿ ಸ್ಥಾನ- ಮಾನ ಸಿಗಲಿದೆ.
ಜೆಡಿಎಸ್ ಕೂಡ ಒಂದು ರೀತಿಯ ಪ್ರೈವೆಟ್ ಲಿಮಿಟೆಡ್. ಇಲ್ಲಿ ಕುಟುಂಬ ಅಭಿವೃದ್ಧಿಗೆ ಮಾತ್ರ ಒತ್ತು ಸಿಗಲಿದೆ. ಇಲ್ಲಿ ಜನರ ಹಿತ ಇಲ್ಲ. ಪರಿವಾರದ ಹಿತಾಸಕ್ತಿ ನಡೆಯುತ್ತದೆ. ಕುಟುಂಬಕ್ಕಾಗಿ ಕರ್ನಾಟಕದ ತುಂಬೆಲ್ಲಾ ಹೋರಾಟ ನಡೆಯುತ್ತದೆ ಎಂದಿದ್ದಾರೆ.