Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದ ಪರಾಕ್ರಮಿಗಳ ಇತಿಹಾಸವನ್ನು ಇಂದಿನ ಪೀಳಿಗೆಗೆ ಹೇಳುವ ಪ್ರಯತ್ನವಾಗಬೇಕು : ಪ್ರೊ.ಟಿ.ವಿ.ಸುರೇಶ್‍ಗುಪ್ತ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಏ.30) : ಐತಿಹಾಸಿಕ ಚಿತ್ರದುರ್ಗದ ಕೋಟೆಯನ್ನು ಆಳಿದ ಶೌರ್ಯ, ಪರಾಕ್ರಮಕ್ಕೆ ಹೆಸರುವಾಸಿಯಾಗಿದ್ದ ರಾಜಾವೀರ ಮದಕರಿನಾಯಕನ್ನು ನೆನಪಿಸಿಕೊಂಡಂತೆ ಕೆಚ್ಚೆದೆಯ ವೀರವನಿತೆ ಒನಕೆ ಓಬವ್ವಳನ್ನು ಚಿತ್ರದುರ್ಗದ ಜನ ಮರೆತಿಲ್ಲ ಎಂದು ಸಂಸ್ಕೃತ ಪ್ರಾಧ್ಯಾಪಕ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಟಿ.ವಿ.ಸುರೇಶ್‍ಗುಪ್ತ ಹೇಳಿದರು.

ಚಿತ್ರದುರ್ಗ ಇತಿಹಾಸ ಕೂಟ ಇತಿಹಾಸ-ಸಂಸ್ಕೃತಿ-ಸಂಶೋಧನೆಗಳ ವಿಚಾರ ವೇದಿಕೆ ಹಾಗೂ ರೇಣುಕಾ ಪ್ರಕಾಶನ ಸಹಯೋಗದೊಂದಿಗೆ ಐ.ಎಂ.ಎ.ಹಾಲ್‍ನಲ್ಲಿ ಭಾನುವಾರ ನಡೆದ 48 ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಇತಿಹಾಸದೊಂದಿಗೆ ಪ್ರಸ್ತುತ ಜೀವನದ ಅನುಸಂಧಾನ (ಚಿತ್ರದುರ್ಗಕ್ಕೆ ಸಂಬಂಧಿಸಿ) ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.

ದಕ್ಷಿಣ ಭಾರತಾದ್ಯಂತ ಚಿತ್ರದುರ್ಗ ಒಳಗೊಂಡಂತೆ ಆರ್ಯವೈಶ್ಯ ಸಮಾಜ ಪ್ರತಿ ವರ್ಷವೂ ವಾಸವಿ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದೆ. 11 ನೇ ಶತಮಾನದಲ್ಲಿ ವಾಸವಿ ಜೀವಿಸಿದ್ದಳು. ಸ್ತ್ರೀರತ್ನ ವಾಸವಿ ಮಾನವತ್ವದಿಂದ ದೈವತ್ವಕ್ಕೆ ಏರಿದವಳು. ಆದಿಪರಾಶಕ್ತಿಯ ಸ್ವರೂಪಿಣಿ ವಾಸವಿ. ವಾಸವಿ ಜಯಂತಿ ದಿನದಂದೆ ನನಗೆ ಚಿತ್ರದುರ್ಗ ಇತಿಹಾಸ ಕೂಟ ಉಪನ್ಯಾಸಕ್ಕೆ ಅವಕಾಶ ಮಾಡಿಕೊಟ್ಟಿರುವುದು ಒಂದು ರೀತಿಯಲ್ಲಿ ವಿಶೇಷ ಎಂದು ವಾಸವಿ ಜಯಂತಿಯ ಹಿಂದಿರುವ ಮಹತ್ವವನ್ನು ವಿವರಿಸಿದರು.

ಚಿತ್ರದುರ್ಗದ ಬೆಟ್ಟದಲ್ಲಿ ಕೋಟೆ ಕೊತ್ತಲ, ದೇವಾಲಯಗಳಿವೆ. ಯಾವುದೇ ಆಧುನಿಕ ತಂತ್ರಜ್ಞಾನಗಳಿಲ್ಲದ ಕಾಲದಲ್ಲಿ ಭದ್ರವಾದ ಕೋಟೆ ಕಟ್ಟಿರುವುದನ್ನು ನೋಡಿದರೆ ಅಂದಿನ ಕಾಲದವರಲ್ಲಿ ಎಂತಹ ಶಕ್ತಿ ಇತ್ತು ಎನ್ನುವುದು ಒಂದು ಇತಿಹಾಸ. ಪಾಳೆಯಗಾರರ ಕಾಲದಲ್ಲಿ ಮಳೆ ನೀರನ್ನು ಸಂಗ್ರಹಿಸಲಾಗುತ್ತಿತ್ತು.

ನಗರದ ಹೃದಯ ಭಾಗದಲ್ಲಿರುವ ಸಂತೆಹೊಂಡದ ಹತ್ತಿರ ಒಂದು ಡ್ರಾಮ ಥಿಯೇಟರ್ ಇತ್ತು. ಅದನ್ನು ಕೆಡವಿ ಈಗ ಆ ಜಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ಜೋರಾಗಿ ಮಳೆ ಬಂದು ಸಂತೆಹೊಂಡ ಭರ್ತಿಯಾದಾಗ ಮೋಟಾರ್ ಇಟ್ಟು ನೀರನ್ನು ಹೊರಗೆ ಬಿಡುವುದನ್ನು ನೋಡಿದ್ದೇವೆ. ಇತಿಹಾಸದ ಬಗ್ಗೆ ಸಾಮಾನ್ಯ ಜನರಿಗೆ ಕೊಡುವ ಸಂದೇಶ ಸರಳವಾಗಿ ಅರ್ಥವಾಗುವಂತಿರಬೇಕು. ಹಿಂದೆ ಹೇಗಿತ್ತು, ಈಗ ಹೇಗಿದೆ. ಮುಂದೆ ಹೇಗಿರುತ್ತೆ ಎನ್ನುವುದು ಕೂಡ ಒಂದು ಇತಿಹಾಸ ಎಂದು ಹೇಳಿದರು.

ಬಾಲ್ಯದಲ್ಲಿ ವಿದ್ಯಾರ್ಥಿಯಾಗಿದ್ದಾಗ ಪೋಷಕರುಗಳ ಜೊತೆ ಬೆಟ್ಟ, ಚಂದ್ರವಳ್ಳಿ, ಜೋಗಿಮಟ್ಟಿ ಎಲ್ಲಾ ಸುತ್ತಾಡುತ್ತಿದೆ. ನನ್ನ ಗುಡ್ಡದ ಡೈರಿಯಲ್ಲಿ ಎಲ್ಲವನ್ನು ದಾಖಲಿಸಿದ್ದೇನೆಂದರು.
ಚಿತ್ರದುರ್ಗದ ಬೆಟ್ಟ ಉಚಿತವಾಗಿ ವೈದ್ಯಾಲಯದ ಸ್ವರೂಪದಲ್ಲಿದೆ. ವಾಯುವಿಹಾರಿಗಳಿಗೆ ಶುದ್ದವಾದ ಗಾಳಿ ಸಿಗುತ್ತದೆ. ಅನೇಕ ಔಷಧೀಯ ಸಸ್ಯಗಳು ಇವೆ. ದೊಡ್ಡ ದೊಡ್ಡ ಬೀಸೆಕಲ್ಲು, ಎಣ್ಣೆಕೊಳ, ತುಪ್ಪದ ಕೊಳ, ಒನಕೆ ಓಬವ್ವನ ಕಿಂಡಿ, ಗೋಪಾಲಸ್ವಾಮಿ ಹೊಂಡ, ತಣ್ಣೀರು ದೋಣಿ ಹೀಗೆ ಹತ್ತು ಹಲವಾರು ಸ್ಥಳಗಳಿವೆ.

ಸಿಮೆಂಟ್, ಕಬ್ಬಿಣ ಯಾವುದೂ ಇಲ್ಲದೆ ಮಣ್ಣು ಕಲ್ಲು ಬಳಸಿ ಗೋಡೆಗಳನ್ನು ಕಟ್ಟಿರುವುದನ್ನು ಇಂದಿನ ಇಂಜಿನಿಯರ್‍ಗಳು ಒಮ್ಮೆ ಅವಲೋಕನ ಮಾಡಿಕೊಂಡರೆ ಒಳ್ಳೆಯದು. ಏಳುಸುತ್ತಿನ ಕೋಟೆಯ ಚಿತ್ರ ಹಾಕಿಕೊಂಡು ಸಂಭ್ರಮಿಸುತ್ತಿದ್ದೇವೆ. ಎಲ್ಲಿದೆ ಏಳುಸುತ್ತಿನ ಕೋಟೆ. ಬೆಟ್ಟವನ್ನು ಅಡ್ಡಮಲಗಿಸುತ್ತಿದ್ದೇವೆ. ಇತಿಹಾಸ ಪರಂಪರೆಯನ್ನು ಅಡ್ಡಮಲಗಿಸುವುದಾದರೆ ಚಿತ್ರದುರ್ಗದ ಅಸ್ಮಿತೆಯನ್ನು ಏಳುಸುತ್ತಿನ ಕೋಟೆ ಎಂದು ಹೇಳಲು ಸಾಧ್ಯವಾ ಎಂದು ಪ್ರಶ್ನಿಸಿದರು ?

ಚಿತ್ರದುರ್ಗದಲ್ಲಿರುವ ಪರಾಕ್ರಮಿಗಳ ಪ್ರತಿಮೆಗಳ ಕುರಿತು ಇತಿಹಾಸವನ್ನು ಇಂದಿನ ಪೀಳಿಗೆಗೆ ಹೇಳುವ ಸಣ್ಣ ಪ್ರಯತ್ನವಾದರೂ ಆಗಬೇಕು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಶೈಕ್ಷಣಿಕ ಕ್ರಾಂತಿಯಾಯಿತು. ದೇವನೆಲೆಗಳು ನೂರಾರು ವರ್ಷಗಳ ಇತಿಹಾಸವಿರುವ ಪರಂಪರೆಯನ್ನು ಉಳಿಸಿ ಮುಂದಕ್ಕೆ ವರ್ಗಾಯಿಸಬೇಕು.

ಎಲ್ಲಾ ಜಾತಿಗೆ ಸಂಬಂಧಿಸಿದ ವಿದ್ಯಾರ್ಥಿನಿಲಯಗಳು ಆರಂಭವಾಗಿರುವುದು ವಿಶೇಷ ಅಸ್ಮಿತೆಗಳು. ಸಾಹಿತ್ಯ ವಲಯದಲ್ಲಿಯೂ ಅನೇಕ ದಿಗ್ಗಜರನ್ನು ಚಿತ್ರದುರ್ಗದಲ್ಲಿ ನೋಡುತ್ತಿದ್ದೇವೆ. ದೊಡ್ಡವರ ಶಂಖನೆ ಊದುತ್ತಿದ್ದರೆ ಚಿಕ್ಕವರು ಎಲ್ಲಿಗೆ ಹೋಗಬೇಕು. ದೊಡ್ಡ ಆಲದ ಮರದ ಜೊತೆ ತುಂಬೆ ಗಿಡ ಕೂಡ ಇರುತ್ತೆ. ಅದರ ಮಹತ್ವ ಹೇಳುವುದು ಬೇಡವಾ?

ಚಿತ್ರದುರ್ಗದಲ್ಲಿ ಐತಿಹಾಸಿಕ ಏಳುಸುತ್ತಿನ ಕೋಟೆಯಿದ್ದರು ಪುಟ್ಟಣ್ಣ ಕಣಗಾಲ್‍ರವರು ಇಲ್ಲಿ ನಾಗರಹಾವು ಚಿತ್ರ ತೆಗೆದ ಬಳಿಕವೆ ಚಿತ್ರದುರ್ಗದ ಕೋಟೆ ನಾಡಿನಾದ್ಯಂತ ಖ್ಯಾತಿ ಪಡೆಯಿತು ಎನ್ನುವುದು ಒಂದು ಇತಿಹಾಸ.

ಪ್ರಸ್ತುತ ವಿಚಾರಕ್ಕೆ ಸಂಬಂಧಿಸಿದಂತೆ ಚಾರಿತ್ರಿಕ ಘಟನೆಗಳು ಬೇಕು. ಮರೆಯಬಾರದು. ಧಾರ್ಮಿಕ, ಸಾಂಸ್ಕøತಿಕ ಉತ್ಸವಗಳು ದುರ್ಗದಲ್ಲಿ ನಡೆಯುತ್ತವೆ. ಹರಿಕಥೆಗಿಂತ ಮರಿಕಥೆಗಳು ಜಾಸ್ತಿಯಾಗಿದೆ. ಮೊಬೈಲ್‍ಗೆ ಎಲ್ಲರೂ ದಾಸರಾಗಿ ಪುಸ್ತಕಗಳಿಂದ ದೂರ ಉಳಿದಿದ್ದೇವೆಂದು ಬೇಸರ ವ್ಯಕ್ತಪಡಿಸಿದರು.

ಚಿತ್ರದುರ್ಗ ಇತಿಹಾಸ ಕೂಟದ ಸಂಚಾಲಕ ಡಾ.ಎನ್.ಎಸ್.ಮಹಂತೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಚಿತ್ರದುರ್ಗ ಇತಿಹಾಸ ಕೂಟದ ನಿರ್ದೇಶಕ ಡಾ.ಲಕ್ಷ್ಮಣ್ ತೆಲಗಾವಿ, ರೇಣುಕಾ ಪ್ರಕಾಶನದ ಗೌರವಾಧ್ಯಕ್ಷೆ ಶ್ರೀಮತಿ ವೈ.ಗುಣವತಿ ಮಹಂತೇಶ್, ಸಾಹಿತಿ ಡಾ.ಬಿ.ಎಲ್.ವೇಣು, ಎಂ.ಮೃತ್ಯುಂಜಯಪ್ಪ, ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ, ರಾಜಮದಕರಿ ಜಯಚಂದ್ರನಾಯಕ, ಪರಮೇಶ್ವರಪ್ಪ, ಬೊಮ್ಮಣ್ಣ ಪೂಜಾರ್, ಡಾ.ಓ.ದೇವರಾಜ್, ಪ್ರಾಧ್ಯಾಪಕ ವೆಂಕಟೇಶ್, ಪ್ರೊ.ಲಿಂಗಪ್ಪ, ರುದ್ರಮೂರ್ತಿ ಹಾಗೂ ಅನೇಕ ವಿದ್ಯಾರ್ಥಿಗಳು ಉಪನ್ಯಾಸ ಕಾರ್ಯಕ್ರಮದಲ್ಲಿ ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೂರನೇ ಬಾರಿಗೆ ಸೋತ ನಿಖಿಲ್ ಕುಮಾರಸ್ವಾಮಿ…!

ಸುದ್ದಿಒನ್ | ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗಳ ಜೊತೆಗೆ ದೇಶಾದ್ಯಂತ ವಿವಿಧ ರಾಜ್ಯಗಳ 48 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಿತು. ಕರ್ನಾಟಕದಲ್ಲಿ ಮೂರು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸಂಡೂರು ಕ್ಷೇತ್ರದಿಂದ ಅನ್ನಪೂರ್ಣ

ಮಹಾರಾಷ್ಟ್ರದಲ್ಲಿ ಯಾರಾಗಲಿದ್ದಾರೆ ನೂತನ ಸಿಎಂ ?

ಸುದ್ದಿಒನ್ | ಮಹಾರಾಷ್ಟ್ರದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಹಾಗಾದರೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಬಿಜೆಪಿ ಮುಖಂಡ ಪ್ರವೀಣ್ ದಾರೇಕರ್ ಪ್ರತಿಕ್ರಿಯಿಸಿದ್ದಾರೆ. ದೇವೇಂದ್ರ ಫಡ್ನವೀಸ್

ಸಿಎಂ ಸಿದ್ದರಾಮಯ್ಯ ಅವರ ಪ್ರಚಾರದಿಂದ ಗೆಲುವು : ಬಿಜೆಪಿ ಸೋಲಿನ ಬಗ್ಗೆ ಜನಾರ್ದನ ರೆಡ್ಡಿ ಫಸ್ಟ್ ರಿಯಾಕ್ಷನ್

ಬಳ್ಳಾರಿ: ಇಂದು ಸಂಡೂರು ವಿಧಾನಸಭಾ ಕ್ಷೇತ್ರದಲ್ಲೂ ಫಲಿತಾಂಶ ಬಂದಿದ್ದು, ಕಾಂಗ್ರೆಸ್ ಅಭ್ಯರ್ಥಿ ಅನ್ನಪುರ್ಣ ತುಕರಾಂ ಗೆಲುವು ಸಾಧಿಸಿದ್ದಾರೆ. ಸಂಜೆ ವೇಳೆಗೆ ಅಧಿಕೃತ ಅನೌನ್ಸ್ ಆಗಲಿದೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕಾಗಿ ಜನಾರ್ದನ ರೆಡ್ಡಿ ಅವರು ಸಾಕಷ್ಟು

error: Content is protected !!