Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಅಕ್ಷಯ ತೃತೀಯ : ಚಿತ್ರದುರ್ಗದ ಶ್ರೀ ಕೇಶವ ಜ್ಯೂವೆಲರ್ಸ್ ನಲ್ಲಿ ಆಭರಣ ಪ್ರಿಯರಿಗೆ ವಿಶೇಷ ಕೊಡುಗೆ ; ಆಭರಣ ಖರೀದಿಸಿ, 1 KG ಚಿನ್ನ ಬಂಪರ್ ಬಹುಮಾನ ಗೆಲ್ಲಿರಿ…!

---Advertisement---

ಸುದ್ದಿಒನ್ ಡೆಸ್ಕ್

ಚಿತ್ರದುರ್ಗ, (ಏ.23):  ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಇಂದು (ಏ.23) ಚಿನ್ನಾಭರಣ ಮಳಿಗೆಗಳಲ್ಲಿ ಜನವೋ ಜನ. ನಗರದ ವಿವಿಧ ಚಿನ್ನಾಭರಣ ಮಳಿಗೆಗಳಲ್ಲಿ ಖರೀದಿದಾರರು ಅತ್ಯಂತ ಉತ್ಸಾಹ, ಸಡಗರದಿಂದ ಆಭರಣಗಳನ್ನು ಖರೀದಿಸಲು ಸಾಲುಗಟ್ಟಿದ್ದರು. ಬಹುತೇಕ ಮಳಿಗೆಗಳಲ್ಲಿ ಗ್ರಾಹಕರಿಗೆ ಭರಪೂರ ಕೊಡುಗೆಗಳನ್ನು ನೀಡಲಾಗಿತ್ತು.

ಅದರಲ್ಲೂ ವಿಶೇಷವಾಗಿ ನಗರದ ಕೋಟೆ ರಸ್ತೆಯಲ್ಲಿರುವ ಚಿಕ್ಕಪೇಟೆಯಲ್ಲಿರುವ ಪ್ರತಿಷ್ಠಿತ ಆಭರಣ ಮಳಿಗೆಯಾದ ಶ್ರೀ ಕೇಶವ ಜ್ಯೂವೆಲರ್ಸ್ ನಲ್ಲಿ ಅಕ್ಷಯ ತೃತೀಯದ ವಿಶೇಷ ದಿನವಾದ ಇಂದು ಆಭರಣ ಖರೀದಿಸಲು ‌ಗ್ರಾಹಕರು ಮುಗಿಬಿದ್ದಿದ್ದರು.

ಬೆಳಿಗ್ಗೆ 9 ರಿಂದಲೇ ವ್ಯಾಪಾರ ಆರಂಭವಾಗಿತ್ತು.ಅದರಲ್ಲೂ ಮಹಿಳೆಯರು ಖರೀದಿಗೆ ಹೆಚ್ಚಿನ ಉತ್ಸಾಹ ತೋರಿದರು. ಇಲ್ಲಿಗೆ ಸ್ಥಳೀಯರು ಮಾತ್ರವಲ್ಲದೆ ದೂರದ ಊರುಗಳಿಂದಲೂ, ಬೇರೆಬೇರೆ ಜಿಲ್ಲೆಗಳಿಂದಲೂ ಬಂಗಾರ ಕೊಳ್ಳಲು ಬರುವುದು ವಿಶೇಷ.

ತಿಂಗಳ ಮೊದಲೇ ಬುಕ್ಕಿಂಗ್‌ : ಅಕ್ಷಯ ತೃತೀಯದ ದಿನ ಒಂದು ಚಿಕ್ಕ ಒಡವೆಯನ್ನಾದರೂ ಖರೀದಿಸಲೇಬೇಕು. ಅಕ್ಷಯ ತೃತೀಯದಂದು ಆಭರಣ ಕೊಳ್ಳುವು­ದರಿಂದ ಸಮೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಇರುವುದರಿಂದ ಜನರಲ್ಲಿದೆ. ಹೀಗಾಗಿ ತಿಂಗಳ ಮೊದಲೇ ಬುಕ್ಕಿಂಗ್‌ಗೆ ಅವಕಾಶವನ್ನು ಇಲ್ಲಿ ಕಲ್ಪಿಸಲಾಗಿದೆ.

ಮೊದಲೇ ಬಂದು ತಮ್ಮ ಮನಕ್ಕೆ ಒಪ್ಪುವ ವಿನ್ಯಾಸದ ಆಭರಣವನ್ನು ಆಯ್ಕೆ ಮಾಡಿ, ಒಂದಿಷ್ಟು ಮುಂಗಡ ಹಣ ನೀಡಿ, ಭಾನುವಾರ ದಂದು ಬಂದು ಖರೀದಿ ಮಾಡಿದರು. ಇನ್ನೂ ಕೆಲವರು ಮಾತ್ರ ಈ ದಿನದಂದೇ ಬಂದು ಆಭರಣ ನೋಡಿ ತಮಗೆ ಮೆಚ್ಚಿದ ಆಭರಣಗಳನ್ನು ಖರೀದಿ ಮಾಡುತ್ತಾರೆ. ಆಭರಣದ ಅಂಗಡಿಗಳಲ್ಲಿ ವಹಿವಾಟು ಅಕ್ಷಯ ತೃತೀಯದಂದು ಸಾಮಾನ್ಯ ದಿನಗಳಿಗಿಂತ ಹೆಚ್ಚಾಗಿ ಇರುತ್ತದೆ.

ವಿಶೇಷ ರಿಯಾಯ್ತಿ : ವಿಶೇಷವಾಗಿ ಈ ಅಕ್ಷಯ ತೃತೀಯ ದಿನದಂದೇ ಗ್ರಾಹಕರನ್ನು ಸೆಳೆಯುವ ಸಲುವಾಗಿ ವಿಶೇಷ ರಿಯಾಯ್ತಿಯನ್ನು ನೀಡಲಾಗಿತ್ತು.

ನಮ್ಮಲ್ಲಿ ಪ್ರತಿ ಮೂರು ಗ್ರಾಂ ಖರೀದಿಗೆ ಒಂದು ಗೋಲ್ಡ್ ಕಾಯಿನ್ ಉಡುಗೊರೆಯನ್ನು ನೀಡಲಾಗುತ್ತಿದೆ. ಈ ಬಾರಿ ವಿಶೇಷವಾಗಿ ಕರ್ನಾಟಕ ಜ್ಯೂವೆಲರಿ ಅಸೋಸಿಯೇಷನ್ ವತಿಯಿಂದ ಕರ್ನಾಟಕ ಗೋಲ್ಡ್ ಫೆಸ್ಟಿವಲ್ ಪ್ರಯುಕ್ತ ಪ್ರತಿ ₨.5000 ಖರೀದಿಗೆ ಒಂದು ಕೂಪನ್ ನೀಡಲಾಗುತ್ತಿದೆ. ಈ ಕೂಪನ್ ನಲ್ಲಿ ವಿಜೇತ ಗ್ರಾಹಕರಿಗೆ 24 ಕ್ಯಾರೆಟ್ ನ ಒಂದು ಕೆಜಿ ಬಂಗಾರವನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಮೇ 10 ರಂದು ಈ ಕೂಪನ್ ನ ಡ್ರಾ ನಡೆಯುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ; 08194-223454, 08194- 220708

ನಮ್ಮಲ್ಲಿ ಎಲ್ಲಾ ವರ್ಗದ ಜನರಿಗೂ ಕೈಗೆಟುಕುವ ಬೆಲೆಯಲ್ಲಿ ವಿಶೇಷ ರೀತಿಯ ವಿನ್ಯಾಸದ ಆಭರಣಗಳು ದೊರೆಯುತ್ತವೆ. ಜನರು ತಮ್ಮ ಆರ್ಥಿಕ ಶಕ್ತಿಗನುಗುಣವಾಗಿ ಚಿನ್ನ ಖರೀದಿಸುತ್ತಾರೆ. ನಮ್ಮಲ್ಲಿ ಮೂಗು ನತ್ತು, ಓಲೆ, ಉಂಗುರ, ಚೈನು, ಬೆಳ್ಳಿಯ ಕಾಲುಂಗುರ,  ಚೈನು, ಬಂಗಾರದ ನಾಣ್ಯ, ನೆಕ್ಲೆಸ್, ವಿಶೇಷ ಬಗೆಯ ನೆಕ್‌ಲೆಸ್, ಯುವ ಜನರಿಗಾಗಿ ಆಧುನಿಕ ಶೈಲಿಯ ವಿಶೇಷ ಆಭರಣಗಳನ್ನು ಖರೀದಿಗೆ ಇಡಲಾಗಿದೆ ಎಂದು ಶ್ರೀ ಕೇಶವ ಜ್ಯುವೆಲರ್ಸ್ ನ ಮಾಲೀಕರಾದ ಕೇಶವಮೂರ್ತಿ ಯವರು ತಿಳಿಸಿದರು.

ಅಕ್ಷಯ ತೃತಿಯ ನಮ್ಮ ಜನರ ಒಂದು ಭಾವನಾತ್ಮಕ ನಂಬಿಕೆಯ ಬಂಗಾರದ ಹಬ್ಬ. ಪ್ರಸ್ತುತ ಚುನಾವಣಾ ಮಾದರಿ ನೀತಿ ಸಂಹಿತೆ
ನಿಬಂಧನೆ ಇದೆ. ಐವತ್ತು ಸಾವಿರ ರೂಪಾಯಿಗಿಂತ ಹೆಚ್ಚಿನ ಹಣ ಕೊಂಡೊಯ್ಯುವಂತಿಲ್ಲ ಎಂಬ ಊಹಾಪೋಹಗಳಿಗೆ ಜನರು ಮಹತ್ವ ನೀಡದೆ ಹೆಚ್ಚು ಅದ್ಧೂರಿಯಾಗಿ, ಸಂಭ್ರಮದಿಂದ ಜನ ಚಿನ್ನ, ಬೆಳ್ಳಿ, ವಜ್ರಾಭರಣಗಳನ್ನು ಖರೀದಿಸಿದ್ದಾರೆ. ಅವರಿಗೆ ಯಶಸ್ಸು ಸಿಗಲಿ ಎಂದು ಎಂದು ಶ್ರೀ ಕೇಶವ ಜ್ಯುವೆಲರ್ಸ್ ಮಾಲೀಕರಾದ ಕೇಶವಮೂರ್ತಿ ಅವರು ಆಶಿಸಿದರು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment