ಬೇಸಿಗೆಯಲ್ಲಿ ಹೆಚ್ಚು ಊಟ ಮಾಡಲು ಆಗಲ್ಲ. ಹಾಗಂತ ಊಟ ಬಿಟ್ಟರೆ ದೇಹಕ್ಕೆಬೇಕಾದ ಎನರ್ಜಿ ಸಿಗಲ್ಲ. ಬೇಸಿಗೆಯಲ್ಲಿ ಬಿಸಿ ಆಹಾರ, ಕರಿದ ಪದಾರ್ಥ ತಿನ್ನೋದ್ರಿಂದ ಆರೋಗ್ಯಕ್ಕೆ ಸಾಕಷ್ಟು ಹಾನಿ ಮಾಡುತ್ತದೆ. ಬೇಸಿಗೆಯಲ್ಲಿ ಹೊಟ್ಟೆಯ ಆರೋಗ್ಯ ಕಾಪಾಡಲು ಜನರು ಸಾಧ್ಯವಾದಷ್ಟು ಹೆಲ್ದೀ ಆಹಾರ ತಿನ್ನಲು ಮನಸ್ಸು ಮಾಡುತ್ತಾರೆ. ತುಂಬಾ ಜನರು ತಂಪು ಪಾನೀಯ ಕುಡಿಯುತ್ತಾರೆ. ಡಯಟ್ ಮಾಡುತ್ತಾರೆ. ಹೊಟ್ಟೆ ಮತ್ತು ಕರುಳು, ಚರ್ಮದ ರಕ್ಷಣೆಗೆ ಬೇಕಾದ ಕ್ರಮ ತೆಗೆದುಕೊಳ್ಳುತ್ತಾರೆ.
ಹೊಟ್ಟೆಯನ್ನು ತಂಪಾಗಿಡಲು ಸಹಾಯ ಮಾಡುವ ಕೆಲವು ಆಹಾರಗಳ ಬಗ್ಗೆ ಹೇಳಲಾಗಿದೆ. ಇದು ಬೇಸಿಗೆಯಲ್ಲಿ ಉಂಟಾಗುವ ನಿರ್ಜಲೀಕರಣ ಸಮಸ್ಯೆ ತೊಡೆದು ಹಾಕುತ್ತದೆ. ಕಾಲೋಚಿತ ಆಹಾರಗಳು ಬೇಸಿಗೆಯಲ್ಲಿ ನಿಮ್ಮ ಹೊಟ್ಟೆ ಒಳಗಿನಿಂದ ತಂಪಾಗಿರುವಂತೆ ನೋಡಿಕೊಳ್ಳುತ್ತದೆ. ತಾಜಾ ಮತ್ತು ಲಘು ಆಹಾರ ತಿನ್ನಿ.
ಕಲ್ಲಂಗಡಿ, ದ್ರಾಕ್ಷಿಹಣ್ಣು, ಕಿತ್ತಳೆ, ಹಲಸಿನ ಹಣ್ಣು ಮತ್ತು ಹೆಚ್ಚಿನ ನೀರಿನ ಅಂಶವಿರುವ ಹಣ್ಣು ತಿನ್ನಿರಿ. ಇದು ಹೈಡ್ರೇಟ್ ಆಗಿಸುತ್ತದೆ. ಕಲ್ಲಂಗಡಿ 91 ಪ್ರತಿಶತ ನೀರನ್ನು ಹೊಂದಿದೆ. ಆಂಟಿ-ಆಕ್ಸಿಡೆಂಟ್ ಗುಣಲಕ್ಷಣ ಹೊಂದಿದೆ. ತಂಪಾಗಿಸುವ ಪರಿಣಾಮ ಹೊಂದಿದೆ. ಋತುಮಾನದ ತರಕಾರಿ ತಿನ್ನಿ.
ನೀರಿನ ಅಂಶವಿರುವ ಸೌತೆಕಾಯಿ, ಲೆಟಿಸ್, ಚೀನೀಕಾಯಿ ಮತ್ತು ಇತರ ತರಕಾರಿ ತಿನ್ನಿ. ಇದು ಹೊಟ್ಟೆ ತಂಪಾಗಿರಿಸಿ, ಹೈಡ್ರೀಕರಿಸುತ್ತದೆ. ಸೌತೆಕಾಯಿ ಫೈಬರ್ ಹೊಂದಿದೆ. ಇದು ಮಲಬದ್ಧತೆ ಸಮಸ್ಯೆ ಕಡಿಮೆ ಮಾಡುತ್ತದೆ. ಎಳನೀರು ಕುಡಿಯಿರಿ. ಮಜ್ಜಿಗೆ ಕುಡಿಯೋದ್ರಿಂದ ಇದು ದೇಹವನ್ನು ತಂಪಾಗಿಸುತ್ತದೆ. ಜೀರ್ಣಕಾರಿ ಸಮಸ್ಯೆ ತಡೆಯುತ್ತದೆ.